ಪಡಿತರ ಚೀಟಿ ಇದ್ದರೆ ಸರ್ಕಾರದಿಂದ ಸಂಕ್ರಾಂತಿಗೆ ಒಂದು ಸಾವಿರ ರೂಪಾಯಿ ಮತ್ತು ಗಿಫ್ಟ್ ಹ್ಯಾಂಪರ್ !

Ration Card Latest News : ಇದೀಗ ಸಂಕ್ರಾತಿ ಹಬ್ಬ ಸಮೀಪಿಸುತ್ತಿದೆ. ಸಂಕ್ರಾಂತಿ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಉಡುಗೊರೆ ನೀಡುವುದಾಗಿ ಈ ಹಿಂದೆ ಘೋಷಿಸಿತ್ತು.  ಇದೀಗ ಸರ್ಕಾರ ಘೋಷಣೆಯಂತೆಯೇ  ನಡೆದುಕೊಳ್ಳುತ್ತಿದೆ.   

Written by - Ranjitha R K | Last Updated : Jan 10, 2023, 12:49 PM IST
  • ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ ಹಲವು ರೀತಿಯ ಸೌಲಭ್ಯ
  • ಸರ್ಕಾರದ ವತಿಯಿಂದ 'ಪೊಂಗಲ್ ಗಿಫ್ಟ್ ಹ್ಯಾಂಪರ್
  • ಪಡಿತರ ಚೀಟಿದಾರರಿಗೆ ಒಂದು ಸಾವಿರ ರೂ. ನಗದು
 ಪಡಿತರ ಚೀಟಿ ಇದ್ದರೆ  ಸರ್ಕಾರದಿಂದ ಸಂಕ್ರಾಂತಿಗೆ ಒಂದು ಸಾವಿರ ರೂಪಾಯಿ ಮತ್ತು ಗಿಫ್ಟ್ ಹ್ಯಾಂಪರ್ !  title=

Ration Card Latest News : ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ ಹಲವು ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದಲ್ಲದೆ, ಅನೇಕ ರಾಜ್ಯ ಸರ್ಕಾರಗಳು ಕೂಡಾ ಪಡಿತರ ಚೀಟಿದಾರರಿಗೆ ಕಾಲಕಾಲಕ್ಕೆ ಹೊಸ ಹೊಸ ಯೋಜನೆಗಳನ್ನು ತರುತ್ತವೆ. ಇದೀಗ ಸಂಕ್ರಾತಿ ಹಬ್ಬ ಸಮೀಪಿಸುತ್ತಿದೆ. ಸಂಕ್ರಾಂತಿ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಉಡುಗೊರೆ ನೀಡುವುದಾಗಿ ಈ ಹಿಂದೆ ಘೋಷಿಸಿತ್ತು. ಇದೀಗ ಸರ್ಕಾರ ಘೋಷಣೆಯಂತೆಯೇ  ನಡೆದುಕೊಳ್ಳುತ್ತಿದೆ. 

ಈ ಯೋಜನೆಯನ್ನು ರಾಜ್ಯ ಸರ್ಕಾರವು ಜನವರಿ 9 ರಂದು ಪ್ರಾರಂಭಿಸಿತು. ಈ ಯೋಜನೆಯಂತೆ ಅರ್ಹ ಕುಟುಂಬಗಳಿಗೆ 1107 ರೂ.ಗಳ 'ಪೊಂಗಲ್ ಗಿಫ್ಟ್ ಹ್ಯಾಂಪರ್ಸ್' ವಿತರಣೆಗೆ ಚಾಲನೆ ನೀಡಲಾಗಿದೆ. ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ಪಡಿತರ ಚೀಟಿದಾರರಿಗೆ 1,000 ರೂಪಾಯಿ ನಗದು ಜೊತೆಗೆ ಗಿಫ್ಟ್ ಹ್ಯಾಂಪರ್‌ನಲ್ಲಿ ಒಂದು ಕೆಜಿ ಸಕ್ಕರೆ, ಒಂದು ಕೆ.ಜಿ ಅಕ್ಕಿ, ಮತ್ತು ಕಬ್ಬು, ನೀಡಲಾಗುತ್ತಿದೆ. 

ಇದನ್ನೂ ಓದಿ Narendra Modi: ತಮ್ಮ ವೈದ್ಯಕೀಯ ವೆಚ್ಚವನ್ನು ತಾವೇ ಭರಿಸುತ್ತಿರುವ ಪ್ರಧಾನಿ ಮೋದಿ

ಸರ್ಕಾರದ ಈ ಯೋಜನೆಯಡಿ ರಾಜ್ಯದ ಎರಡು ಕೋಟಿ ಪಡಿತರ ಚೀಟಿದಾರರಿಗೆ ಸರ್ಕಾರದ ವತಿಯಿಂದ 'ಪೊಂಗಲ್ ಗಿಫ್ಟ್ ಹ್ಯಾಂಪರ್ ನೀಡಲಾಗುವುದು. ಮುಖ್ಯಮಂತ್ರಿ ಸ್ಟಾಲಿನ್ ವಾರದ ಹಿಂದೆಯೇ ಯೋಜನೆಗೆ ಚಾಲನೆ ನೀಡಿದ್ದು, ಸರ್ಕಾರದ ವತಿಯಿಂದ ಟೋಕನ್ ವಿತರಿಸಲಾಗಿದೆ. 

ಇದಕ್ಕೂ ಮುನ್ನ 2015ರಲ್ಲಿ ಕೂಡಾ ತಮಿಳುನಾಡು ಸರ್ಕಾರ ಗಿಫ್ಟ್ ಹ್ಯಾಂಪರ್ ನೀಡಿತ್ತು. 2019 ರಲ್ಲಿ, ನಿರ್ಗತಿಕ ಕುಟುಂಬಗಳಿಗೆ 1000, 2020 ರಲ್ಲಿ  2500 ರೂ ಮತ್ತು 2021 ರಲ್ಲಿ  2500 ರೂ ಅನ್ನು ವರ್ಗಾಯಿಸಲಾಗಿತ್ತು. ರಾಜ್ಯದ ಎಲ್ಲಾ ವರ್ಗದ ಜನರು ಈ ಹಬ್ಬವನ್ನು ಸಂತೋಷದಿಂದ ಆಚರಿಸಲು ನೆರವಾಗಲಿ ಎನ್ನುವ ಉದ್ದೇಶದಿಂದ ಸರ್ಕಾರ ಈ ಸೌಲಭ್ಯವನ್ನು ಒದಗಿಸುತ್ತಿದೆ. ಮೊದಲ ಬಾರಿಗೆ ಈ ಯೋಜನೆಯನ್ನು 2014 ರಲ್ಲಿ ಪ್ರಾರಂಭಿಸಲಾಗಿತ್ತು. 

ಇದನ್ನೂ ಓದಿ : Vistara Sale 2023: ಈ Airlinesನಿಂದ ಬಂಪರ್ ಗಿಫ್ಟ್: ಅತೀ ಕಡಿಮೆ ಬೆಲೆಯಲ್ಲಿ ವಿಮಾನಯಾನ: ಇಂದೇ ಬುಕ್ ಮಾಡಿ 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News