/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ದೇಶದ ಬೆಳೆಯುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವ ಕಾನೂನುಗಾಗಿ ಒತ್ತಾಯಿಸಿದ್ದಾರೆ, ಈ ನಿಟ್ಟಿನಲ್ಲಿ ಸಂಸತ್ತಿನಲ್ಲಿ ಶಾಸನವನ್ನು ತರಬೇಕು ಎಂಬ ಚರ್ಚೆಯನ್ನು ಪುನರುಚ್ಚರಿಸಿದ್ದಾರೆ.

"ಇದು ಅಂತಿಮ ಕರೆ ತೆಗೆದುಕೊಳ್ಳಬೇಕಾದ ಸಮಯದ ಅಗತ್ಯವೆಂದು ನಾವು ಭಾವಿಸುತ್ತೇವೆ.ಈ ಕಾನೂನಿಗೆ ಯಾವುದೇ ನಿರ್ದಿಷ್ಟ ಧರ್ಮದೊಂದಿಗೆ ಯಾವುದೇ ಸಂಬಂಧವಿರುವುದಿಲ್ಲ ಮತ್ತು ಎಲ್ಲರಿಗೂ ಅನ್ವಯವಾಗುತ್ತದೆ" ಎಂದು ಸುಮಾರು 40 ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವತ್ ಹೇಳಿದರು.

ನಾಲ್ಕು ದಿನಗಳ ಮೊರಾದಾಬಾದ್ ಪ್ರವಾಸದಲ್ಲಿರುವ ಆರ್‌ಎಸ್‌ಎಸ್ ಮುಖ್ಯಸ್ಥರು, ದೇಶದ ಸರಿಯಾದ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಎರಡು ಮಕ್ಕಳ ಕಾನೂನು ತರಬೇಕು ಎಂದು ಹೇಳಿದರು. ಮೊರಾದಾಬಾದ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಭಾಗವತ್, ಎರಡು ಮಕ್ಕಳ ನೀತಿಯನ್ನು ಬೆಂಬಲಿಸುವ ಯಾವುದೇ ಕಾನೂನುನನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆ ಎಂದು ಹೇಳಿದರು.

ಜನಸಂಖ್ಯೆ ನಿಯಂತ್ರಣದ ಅಗತ್ಯವನ್ನು ಒತ್ತಿ ಹೇಳುತ್ತಾ, ಭಾರತವು ಬೆಳೆಯುತ್ತಿರುವ ದೇಶ. ಆದರೆ ಅನಿಯಂತ್ರಿತ ಜನಸಂಖ್ಯಾ ಬೆಳವಣಿಗೆ ಅಭಿವೃದ್ಧಿಗೆ ಆರೋಗ್ಯಕರವಲ್ಲ ಎಂದು ಹೇಳಿದರು. ಆದರೆ ಈ ನಿಟ್ಟಿನಲ್ಲಿ ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದು ಭಾಗವತ್ ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿಷಯದ ಬಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥರು ಕೇಂದ್ರ ಸರ್ಕಾರವನ್ನು ಬೆಂಬಲಿಸಿದರು ಆದರೆ ಈ ವಿಷಯದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ಹೇಳಿದರು.

ಇದೇ ವೇಳೆ ರಾಮ ದೇವಾಲಯದ ಬಗ್ಗೆ ಮಾತನಾಡಿದ ಭಾಗವತ್, ಈ ವಿಷಯದಲ್ಲಿ ಆರ್‌ಎಸ್‌ಎಸ್‌ನ ಪಾತ್ರವು ದೇವಾಲಯಕ್ಕೆ ಮಾತ್ರ ರೂಪುಗೊಂಡಿದೆ ಎಂದು ಹೇಳಿದರು. "ಟ್ರಸ್ಟ್ ರಚನೆಯಾದ ನಂತರ ನಾವು ದೇವಾಲಯದ ನಿರ್ಮಾಣದಿಂದ ದೂರವಿರುತ್ತೇವೆ. ಮಥುರಾ ಮತ್ತು ಕಾಶಿ ಆರ್ಎಸ್ಎಸ್ ಕಾರ್ಯಸೂಚಿಯಲ್ಲಿಲ್ಲ ಎಂದು ಅವರು ಹೇಳಿದರು.

Section: 
English Title: 
RSS will support any law that calls for two children only -Mohan Bhagwat
News Source: 
Home Title: 

ದೇಶದಲ್ಲಿ ಎರಡು ಮಕ್ಕಳ ನೀತಿ ಜಾರಿ ಆರೆಸೆಸ್ಸ್ ನ ಮುಂದಿನ ಅಜೆಂಡಾ?

ದೇಶದಲ್ಲಿ ಎರಡು ಮಕ್ಕಳ ನೀತಿ ಜಾರಿ ಆರೆಸೆಸ್ಸ್ ನ ಮುಂದಿನ ಅಜೆಂಡಾ?
Yes
Is Blog?: 
No
Tags: 
Facebook Instant Article: 
Yes
Mobile Title: 
ದೇಶದಲ್ಲಿ ಎರಡು ಮಕ್ಕಳ ನೀತಿ ಜಾರಿ ಆರೆಸೆಸ್ಸ್ ನ ಮುಂದಿನ ಅಜೆಂಡಾ?
Publish Later: 
No
Publish At: 
Saturday, January 18, 2020 - 16:37
Created By: 
Manjunath Naragund
Updated By: 
Manjunath Naragund
Published By: 
Manjunath Naragund