"ದೋ ಹಜಾರ್ ಬೀಸ್, ಹಟಾವೋ ನಿತೀಶ್": ಜೈಲಿನಿಂದಲೇ ಲಾಲೂ ಪ್ರಸಾದ್ ಕಹಳೆ

2020 ರಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಬಿಹಾರದಲ್ಲಿ ಅಧಿಕಾರದಿಂದ ಕಿತ್ತೊಗೆಯಲು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಶನಿವಾರ ಕರೆ ನೀಡಿದ್ದು, ಜೆಡಿಯು ಸರ್ಕಾರದ ಮೇಲೆ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

Last Updated : Jan 5, 2020, 08:33 AM IST
"ದೋ ಹಜಾರ್ ಬೀಸ್, ಹಟಾವೋ ನಿತೀಶ್": ಜೈಲಿನಿಂದಲೇ ಲಾಲೂ ಪ್ರಸಾದ್ ಕಹಳೆ  title=

ನವದೆಹಲಿ: 2020 ರಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಬಿಹಾರದಲ್ಲಿ ಅಧಿಕಾರದಿಂದ ಕಿತ್ತೊಗೆಯಲು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಶನಿವಾರ ಕರೆ ನೀಡಿದ್ದು, ಜೆಡಿಯು ಸರ್ಕಾರದ ಮೇಲೆ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮೇವು ಹಗರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಂಚಿ ಜೈಲಿನಲ್ಲಿರುವ ಮಾಜಿ ಮುಖ್ಯಮಂತ್ರಿ, ಬಿಹಾರಕ್ಕೆ ಕೇಂದ್ರ ಸರ್ಕಾರ ನೀಡಿದ್ದು ಶೂನ್ಯ ಎಂದು ಇತ್ತೀಚಿನ ಎನ್ಐಟಿಐ ಆಯೋಗ್ ವರದಿಯನ್ನು ಉಲ್ಲೇಖಿಸಿದ್ದಾರೆ. ಇದೇ ವೇಳೆ ಈಗ ಚುನಾವಣಾ ವರ್ಷವಾಗಿರುವುದರಿಂದ ಲಾಲೂ ಪ್ರಸಾದ್ ಯಾದವ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ನಲ್ಲಿ 'ದೋ ಹಜಾರ್ ಬೀಸ್, ಹಟಾವೊ ನಿತೀಶ್' (2020 ರಲ್ಲಿ ನಿತೀಶ್ ಅಧಿಕಾರದಿಂದ ಓಡಿಸಿ) ಎಂದು ಬರೆದಿದ್ದಾರೆ.

ಕಳೆದ ವರ್ಷ ಡಿಸೆಂಬರ್ 30 ರಂದು ನೀತಿ ಆಯೋಗ್ ಬಿಡುಗಡೆ ಮಾಡಿದ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) ಸೂಚ್ಯಂಕ ವರದಿ ದೊಡ್ಡ ವೈಫಲ್ಯ ಎಂದು ಲಾಲೂ ಪ್ರಸಾದ್ ಯಾದವ್ ರಾಜ್ಯ ಸರ್ಕಾರವನ್ನು ಟೀಕಿಸಿದರು.ಸಾಮಾಜಿಕ, ಆರ್ಥಿಕ ಮತ್ತು ಪರಿಸರ ನಿಯತಾಂಕಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಗತಿಯನ್ನು ಮೌಲ್ಯಮಾಪನ ಮಾಡುವ ನೀತಿ ಆಯೋಗ್‌ನ ಎಸ್‌ಡಿಜಿ ಇಂಡಿಯಾ ಇಂಡೆಕ್ಸ್ 2019 ರಲ್ಲಿ ಕೇರಳವು ಪ್ರಥಮ ಸ್ಥಾನ ಗಳಿಸಿತು.

ಇನ್ನೊಂದೆಡೆಗೆ ಈ ಹಿಂದಿನ ಲಾಲು-ರಾಬ್ರಿ ಆಡಳಿತವನ್ನು "ಹದಗೆಟ್ಟ ರಸ್ತೆಗಳು, ಲಾಟೀನು ಬೆಳಕಿನಲ್ಲಿ ಕಲಿಯುವ ವಿದ್ಯಾರ್ಥಿಗಳು, ರಕ್ತಪಾತ ಮತ್ತು ಜನರು ಬಂದೂಕುಗಳನ್ನು ಹೊಂದಿರುವ ಜನರು" ಎಂದು ಬಿಂಬಿಸುವ ಪೋಸ್ಟರ್ ಅನ್ನು ಜೆಡಿಯು ಗುರುವಾರ ಬಿಡುಗಡೆ ಮಾಡಿದೆ. ಅಲ್ಲದೆ ತಮ್ಮ ಪ್ರಸಕ್ತ ಸರ್ಕಾರವನ್ನು ಅದು ಭ್ರಷ್ಟಾಚಾರ ಮುಕ್ತ ಎಂದು ಘೋಷಿಸಿಕೊಂಡಿದೆ.

Trending News