ಹೆಚ್ಚುತ್ತಿರುವ ಅಸಹಿಷ್ಣುತೆ ದೇಶದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಲಿದೆ- ಆದಿ ಗೋದ್ರೇಜ್

ಹೆಚ್ಚುತ್ತಿರುವ ಅಸಹಿಷ್ಣುತೆ, ದ್ವೇಷದ ಅಪರಾಧಗಳು ಮತ್ತು ನೈತಿಕ ನೀತಿ ನಿರೂಪಣೆ ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಗಂಭೀರ ಹಾನಿ ಉಂಟು ಮಾಡುತ್ತದೆ ಎಂದು ಖ್ಯಾತ ಕೈಗಾರಿಕೋದ್ಯಮಿ ಆದಿ ಗೋದ್ರೇಜ್ ಶನಿವಾರ ಎಚ್ಚರಿಸಿದ್ದಾರೆ.

Last Updated : Jul 13, 2019, 05:36 PM IST
ಹೆಚ್ಚುತ್ತಿರುವ ಅಸಹಿಷ್ಣುತೆ ದೇಶದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಲಿದೆ- ಆದಿ ಗೋದ್ರೇಜ್  title=
file photo

ಮುಂಬೈ: ಹೆಚ್ಚುತ್ತಿರುವ ಅಸಹಿಷ್ಣುತೆ, ದ್ವೇಷದ ಅಪರಾಧಗಳು ಮತ್ತು ನೈತಿಕ ನೀತಿ ನಿರೂಪಣೆ ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಗಂಭೀರ ಹಾನಿ ಉಂಟು ಮಾಡುತ್ತದೆ ಎಂದು ಖ್ಯಾತ ಕೈಗಾರಿಕೋದ್ಯಮಿ ಆದಿ ಗೋದ್ರೇಜ್ ಶನಿವಾರ ಎಚ್ಚರಿಸಿದ್ದಾರೆ.

ಆದಾಗ್ಯೂ ಆದಿ ಗೋದ್ರೇಜ್ ಅವರು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಎರಡನೇ ಅವಧಿಯ ಅಧಿಕಾರಾವಧಿಯಲ್ಲಿ ನವ ಭಾರತ ಮತ್ತು ಸುಮಾರು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ನಿರ್ಮಿಸಲು ಭವ್ಯ ದೃಷ್ಟಿಕೋನ ಹೊಂದಿರುವುದಕ್ಕೆ ಅಭಿನಂದಿಸಿದರು.

ಮುಂಬೈನ ಸೇಂಟ್ ಕ್ಸೇವಿಯರ್ಸ್ ಕಾಲೇಜಿನ 150 ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು " ಈಗಿರುವುದೆಲ್ಲ ಗುಲಾಬಿ ಚಿತ್ರಣವಲ್ಲ, ನಮ್ಮ ರಾಷ್ಟ್ರವನ್ನು ಪೀಡಿಸುತ್ತಿರುವ ಬಡತನ ಅದು ಮುಂದುವರೆದದ್ದೇ ಆದಲ್ಲಿ ಬೆಳವಣಿಗೆ ವೇಗಕ್ಕೆ ಗಂಭೀರ ಹಾನಿಯಾಗುತ್ತದೆ ಮತ್ತು ನಮ್ಮ ಸಾಮರ್ಥ್ಯದ ಅರಿವಿಗೆ ತಡೆಯನ್ನೋಡ್ದುತ್ತದೆ' ಎಂದು ಗೋದ್ರೆಜ್ ಎಚ್ಚರಿಸಿದರು."ಹೆಚ್ಚುತ್ತಿರುವ ಅಸಹಿಷ್ಣುತೆ, ಸಾಮಾಜಿಕ ಅಸ್ಥಿರತೆ, ದ್ವೇಷ-ಅಪರಾಧಗಳು, ಮಹಿಳೆಯರ ಮೇಲಿನ ದೌರ್ಜನ್ಯ, ನೈತಿಕ ನೀತಿ, ಜಾತಿ ಮತ್ತು ಧರ್ಮ ಆಧಾರಿತ ಹಿಂಸಾಚಾರ ಮತ್ತು ದೇಶಾದ್ಯಂತ ವ್ಯಾಪಿಸಿರುವ ಅನೇಕ ರೀತಿಯ ಅಸಹಿಷ್ಣುತೆ ಹಿಡಿತವಿಲ್ಲದೆ ಹೋದಲ್ಲಿ ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಎಚ್ಚರಿಸಿದರು. 

ನಿರುದ್ಯೋಗವು ಶೇಕಡಾ 6.1 ರಷ್ಟಿದೆ, ಇದು ನಾಲ್ಕು ದಶಕಗಳ ಗರಿಷ್ಠವಾಗಿದೆ ಮತ್ತು ಅದನ್ನು ಶೀಘ್ರವಾಗಿ ನಿಭಾಯಿಸಬೇಕಾಗಿದೆ ಎಂದು ಅವರು ಹೇಳಿದರು. ನೀರಿನ ಬಿಕ್ಕಟ್ಟು, ಪರಿಸರ-ಹಾನಿಕಾರಕ ಪ್ಲಾಸ್ಟಿಕ್‌ಗಳ ಬಳಕೆ ಮತ್ತು ದುರ್ಬಲ ವೈದ್ಯಕೀಯ ಸೌಲಭ್ಯಗಳು, ಇಂತಹ ವಿಷಯಗಳನ್ನು ಈಗ ನಿಭಾಯಿಸಬೇಕಾಗಿದೆ ಎಂದು ಅವರು ಹೇಳಿದರು. ಅನೇಕ ಸಮಸ್ಯೆಗಳನ್ನು ಮೂಲಭೂತ ಮಟ್ಟದಲ್ಲಿ ಬಗೆಹರಿಸಬೇಕು ಎಂದು ಎಚ್ಚರಿಸಿದ ಅವರು, ಒಂದು ವೇಳೆ  ಹಾಗೆ ಮಾಡದೆ ಇದ್ದಲ್ಲಿ ದೇಶವು ತನ್ನ ನಿಜವಾದ ಬೆಳವಣಿಗೆಯ ಸಾಮರ್ಥ್ಯವನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಇನ್ನು ಮುಂದುವರೆದು ಮಾತನಾಡಿದ ಗೋದ್ರೆಜ್  "ನಾವು ಭಯ ಮತ್ತು ಅನುಮಾನದಿಂದ ಬದುಕುವುದಿಲ್ಲ ಮತ್ತು ಜವಾಬ್ದಾರಿಯುತ ರಾಜಕೀಯ ನಾಯಕತ್ವವನ್ನು ನಂಬಬಲ್ಲೆವು' ಎಂದು ಅವರು ಹೇಳಿದರು.

Trending News