ಮತಾಂತರದ ಹಕ್ಕು ಮೂಲಭೂತ ಹಕ್ಕಿನ ಆಯ್ಕೆಯ ಭಾಗವಾಗಿದೆ: ಸುಪ್ರೀಂ ಕೋರ್ಟ್

    

Last Updated : Apr 10, 2018, 01:07 PM IST
ಮತಾಂತರದ ಹಕ್ಕು ಮೂಲಭೂತ ಹಕ್ಕಿನ ಆಯ್ಕೆಯ ಭಾಗವಾಗಿದೆ: ಸುಪ್ರೀಂ ಕೋರ್ಟ್  title=

ನವದೆಹಲಿ: ಸೋಮವಾರದಂದು ಸುಪ್ರೀಂ ಕೋರ್ಟ್ ಧರ್ಮವನ್ನು ಆಯ್ಕೆಮಾಡಿಕೊಳ್ಳುವ ಮತ್ತು ತನ್ನ ಇಚ್ಚೆಯಂತೆ ಮದುವೆಯಾಗುವ ಹಕ್ಕು ವ್ಯಕ್ತಿಯ ಅಸ್ತಿತ್ವದ ಭಾಗವಾಗಿರುವುದರಿಂದ  ರಾಜ್ಯ ಅಥವಾ ಇನ್ಯಾವುದೇ ಶಕ್ತಿಗಳು ಇದರಲ್ಲಿ ಮದ್ಯಪ್ರವೇಶಿಸುವ ಹಾಗಿಲ್ಲ ಎಂದು ಎಂದು ತಿಳಿಸಿದೆ.

ಹಾಡಿಯಾ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ತನ್ನ  61 ಪುಟಗಳ ತೀರ್ಪಿನಲ್ಲಿ ಸುಪ್ರಿಂ ಕೋರ್ಟ್ ಅಭಿಪ್ರಾಯ ಪಟ್ಟಿದೆ. 26 ವರ್ಷದ ಹಾಡಿಯಾ ಇತ್ತೀಚಿಗೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಳು.

ನಂಬಿಕೆ ಮತ್ತು ನಂಬಿಕೆಯ ವಿಷಯಗಳು, ಸಂವಿಧಾನಾತ್ಮಕ ಸ್ವಾತಂತ್ರ್ಯದ ಕೇಂದ್ರ ಬಿಂದುವಾಗಿದೆ. ಸಂವಿಧಾನವು ಮತ್ತು ಆಸ್ತಿಕರಿಗೂ ಮತ್ತು ನಾಸ್ತಿಕರಿಗೂ ಸಮಾನ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅಭಿಪ್ರಾಯಪಟ್ಟರು.

ಇನ್ನು ಮುಂದುವರೆದು "ಅದು ಉಡುಪು,ಆಹಾರ ,ವಿಚಾರ ಮತ್ತು ಸಿದ್ದಾಂತಗಳ ವಿಚಾರವಾಗಿರಬಹುದು ,ಪ್ರೀತಿ ಮತ್ತು ಸಹಭಾಗಿತ್ವಗಳು ವ್ಯಕ್ತಿಯ ಅಸ್ಮಿತೆಯ ಕೇಂದ್ರ ಭಾಗವಾಗಿವೆ.ಆದ್ದರಿಂದ ಇದರಲ್ಲಿ  ನಮ್ಮ ಸಂಗಾತಿಯನ್ನು ಆಯ್ಕೆಯನ್ನು ಮಾಡಿಕೊಳ್ಳುವಲ್ಲಿ ಸಮಾಜದ್ದು ಯಾವುದೇ ಪಾತ್ರವಿಲ್ಲ ಎಂದು ಚಂದ್ರಚೂಡ್ ತಿಳಿಸಿದರು.

Trending News