ನವದೆಹಲಿ : HTM ಬಂಡವಾಳ ಮತ್ತು ಇತರ ವಿಷಯಗಳ ನೇರ ಮಾರಾಟದ ಸುರಕ್ಷತೆಗೆ ಸಂಬಂಧಿಸಿದಂತೆ ಆರ್ಬಿಐ ನೀಡಿದ್ದ ನಿರ್ದೇಶನಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಐಸಿಐಸಿಐ ಬ್ಯಾಂಕ್ ಲಿಮಿಟೆಡ್ (ಬ್ಯಾಂಕ್) ಮೇಲೆ 589 ಮಿಲಿಯನ್ ರೂ. ದಂಡ ವಿಧಿಸಿದೆ.
ಈ ಸಂಬಂಧ ಮಾರ್ಚ್ 26ರಂದು ಆದೇಶ ಹೊರಡಿಸಿರುವ ಕೇಂದ್ರ ಬ್ಯಾಂಕ್, ಬ್ಯಾಂಕ್ ತನ್ನ ನಿರ್ದೇಶನಗಳನ್ನು ಪಾಲಿಸುವಲ್ಲಿ ವಿಫಾಲವಾದ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ.
ಆರ್ಬಿಐನ ನೀತಿ, ನಿಯಮಗಳನ್ನು ಪಾಲಿಸದ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆಯೇ ಹೊರತು, ಈ ಆದೇಶವು ಬ್ಯಾಂಕ್ ತನ್ನ ಗ್ರಾಹಕರೊಂದಿಗೆ ಹೊಂದಿರುವ ಒಪ್ಪಂದಗಳು ಅಥವಾ ವ್ಯವಹಾರಗಳ ಮೇಲಿನ ವಾಯಿದೆಗೆ ಸಂಬಂಧಿಸಿಲ್ಲ ಎಂದು ಆರ್ಬಿಐ ತಿಳಿಸಿದೆ. ಆದರೆ, ಐಸಿಐಸಿಐ ಬ್ಯಾಂಕ್ ಯಾವ ರೀತಿಯಲ್ಲಿ ನಿಯಮಗಳನ್ನು ಪಾಲಿಸುವಲ್ಲಿ ವಿಫಲವಾಗಿದೆ ಎಂಬುದನ್ನು ಆರ್ಬಿಐ ತನ್ನ ಅಧಿಸೂಚನೆಯಲ್ಲಿ ತಿಳಿಸಿಲ್ಲ.
ಆರ್ಬಿಐ ನೀಡಿರುವ ಆದೇಶದ ಪ್ರತಿ ಇಲ್ಲಿದೆ:
The Reserve Bank of India (RBI) has imposed through an order dated March 26, 2018, a monetary penalty of Rs 589 million on ICICI Bank Limited (the bank) for non-compliance with directions issued by RBI on direct sale of securities from its HTM portfolio and specified disclosure in this regard. This penalty has been imposed in exercise of powers vested in RBI under the provisions of Section 47A(1)(c) read with Section 46(4)(i) of the Banking Regulation Act, 1949, taking into account failure of the bank to adhere to the aforesaid directions/guidelines issued by RBI. This action is based on the deficiencies in regulatory compliance and is not intended to pronounce upon the validity of any transaction or agreement entered into by the bank with its customers.
Jose J. Kattoor
Chief General Manager