ಪಾಟ್ನಾ ಸಾಹಿಬ್ ನಿಂದ ಶತ್ರುಘ್ನ ಸಿನ್ಹಾಗಿಲ್ಲ ಟಿಕೆಟ್; ರವಿಶಂಕರ್ ಪ್ರಸಾದ್ ಸ್ಪರ್ಧೆ

ಖ್ಯಾತ ಹಿರಿಯ ಬಾಲಿವುಡ್ ನಟ ಶತೃಘ್ನ ಸಿನ್ಹಾ ಅವರಿಗೆ ಈ ಬಾರಿ ಲೋಕಸಭೆ ಟಿಕೆಟ್ ನಿರಾಕರಿಸಲಾಗಿದ್ದು, ಅವರು ಪ್ರತಿನಿಧಿಸುತ್ತಿದ್ದ ಬಿಹಾರದ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಟಿಕೆಟ್ ನೀಡಲಾಗಿದೆ.

Last Updated : Mar 23, 2019, 01:53 PM IST
ಪಾಟ್ನಾ ಸಾಹಿಬ್ ನಿಂದ ಶತ್ರುಘ್ನ ಸಿನ್ಹಾಗಿಲ್ಲ ಟಿಕೆಟ್; ರವಿಶಂಕರ್ ಪ್ರಸಾದ್ ಸ್ಪರ್ಧೆ title=

ನವದೆಹಲಿ: ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟ ಎಲ್ಲಾ 40 ಲೋಕಸಭಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಶನಿವಾರ ಘೋಷಣೆ ಮಾಡಿದೆ. 

ನಿರೀಕ್ಷೆಯಂತೆಯೇ ಬಿಜೆಪಿ ಫೈರ್ ಬ್ರಾಂಡ್ ಖ್ಯಾತ ಹಿರಿಯ ಬಾಲಿವುಡ್ ನಟ ಶತೃಘ್ನ ಸಿನ್ಹಾ ಅವರಿಗೆ ಈ ಬಾರಿ ಲೋಕಸಭೆ ಟಿಕೆಟ್ ನಿರಾಕರಿಸಲಾಗಿದ್ದು, ಅವರು ಪ್ರತಿನಿಧಿಸುತ್ತಿದ್ದ ಬಿಹಾರದ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಟಿಕೆಟ್ ನೀಡಲಾಗಿದೆ.

ಸತತ ಎರಡು ಬಾರಿ ಪಾಟ್ನಾ ಸಾಹಿಬ್  ಶತ್ರುಘ್ನ ಸಿನ್ಹಾ ಅವರು ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಜಯಗಳಿಸಿ ಸಂಸದರಾಗಿದ್ದರೂ ಸಹ ಶತ್ರುಘ್ನ ಸಿನ್ಹಾ ಅವರಿಗೆ ಬಿಜೆಪಿ ಈ ಬಾರಿ ಅ ಕ್ಷೇತ್ರದಿಂದ ಟಿಕೆಟ್ ನೀಡಿಲ್ಲ ಎಂಬುದು ಇದೀಗ ಅಧಿಕೃತವಾಗಿದೆ.  

ಉಳಿದಂತೆ ಗಿರಿರಾಜ್ ಸಿಂಗ್ ಅವರು ಬೇಗುಸರಾಯ್ ನಿಂದ ಸ್ಪರ್ಧಿಸುತ್ತಿದ್ದು, ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಒಡಿಶಾದ ಪುರಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಬಿಜೆಪಿ ಮೈತ್ರಿ ಪಕ್ಷ ಲೋಕಜನಶಕ್ತಿ ಪಕ್ಷದ ಮುಖಂಡ ಚಿರಾಗ್ ಪಾಸ್ವಾನ್ ಜಮುಲ್ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದು, ರಾಮ್ ಕಿರ್ಪಾಲ್ ಯಾದವ್ ಅವರು ಪಾಟಲಿಪುತ್ರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಅರಾಹ್ ದಿಂದ ಆರ್ ಕೆ ಸಿಂಗ್, ಬಕ್ಸಾರ್ ನಿಂದ ಅಶ್ವಿನ್ ಚೌಬೆ, ಈಸ್ಟ್ ಚಂಪಾರಣ್ ಕ್ಷೇತ್ರದಿಂದ ರಾಧಾ ಮೋಹನ್ ಸಿಂಗ್, ಸರಣ್ ಕ್ಷೇತ್ರ ರಾಜೀವ್ ಪ್ರತಾಪ್ ರೂಡಿ ಸ್ಪರ್ಧೆ ಮಾಡುತ್ತಿದ್ದಾರೆ.

ಬಿಹಾರ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ಪಟ್ಟಿ

ವಾಲ್ಮೀಕಿ ನಗರ-ವೈದ್ಯನಾಥ ಮಹತೋ (ಜೆಡಿಯು)
ಪಾ. ಚಂಪಾರಣ್ - ಡಾ. ಸಂಜಯ್ ಜೈಸ್ವಾಲ್ (ಬಿಜೆಪಿ)
ಪೂ. ಚಂಪಾರಣ್ - ರಾಧಾ ಮೋಹನ್ ಸಿಂಗ್ (ಬಿಜೆಪಿ)
ಶಿವಹರ್-ರಮಾದೇವಿ (ಬಿಜೆಪಿ)
ಸೀತಾಮಡಿ-ವರುಣ್ ಕುಮಾರ್ (ಜೆಡಿಯು)
ಮಧುಬನಿ - ಅಶೋಕ್ ಕುಮಾರ್ ಯಾದವ್ (ಬಿಜೆಪಿ)
ಝಾನ್ಜಾರ್ಪುರ್ - ರಾಮ್ ಪ್ರಿತ್ ಮಂಡಲ್ (ಜೆಡಿಯು)
ಸುಪೌಲ್- ದಿಲೇಶ್ವರ ಕಾಮತ್ (ಜೆಡಿಯು)
ಅರರಿಯಾ - ಪ್ರತಾಪ್ ಸಿಂಗ್ (ಬಿಜೆಪಿ)
ಕಿಶನ್ಗಂಜ್ - ಮಹಮೂದ್ ಅಶ್ರಫ್ (ಜೆಡಿಯು)
ಕಟಿಹಾರ್-ದುರಾಲ್ ಚಾಂದ್ ಗೋಶ್ವಾಮಿ (ಜೆಡಿಯು)
ಪೂರ್ಣಿಯಾ - ಸಂತೋಷ್ ಕುಮಾರ್ ಕುಶ್ವಾಹ (ಜೆಡಿಯು)
ಮಧೇಪುರಾ - ದಿನೇಶ್ ಚಂದ್ರ ಯಾದವ್ (ಜೆಡಿಯು)
ದರ್ಬಂಘ - ಗೋಪಾಲ್ ಜಿ ಠಾಕೂರ್ (ಬಿಜೆಪಿ)
ಮುಜಫರ್ ಪುರ್ - ಅಜಯ್ ನಿಶಾದ್ (ಬಿಜೆಪಿ)
ವೈಶಾಲಿ-ವೀಣಾ ದೇವಿ (ಎಲ್ಜೆಪಿ)
ಗೋಪಾಲ್ಗಂಜ್ - ಅಲೋಕ್ ಕುಮಾರ್ ಸುಮನ್ (ಜೆಡಿಯು)
ಸಿವಾನ್-ಕವಿತಾ ಸಿಂಗ್ (ಜೆಡಿಯು)
ಮಹಾರಾಜ್ ಗಂಜ್ - ಜನಾರ್ಧನ್ ಸಿಂಗ್ ಸಿಗರ್ವಾಲ್ (ಬಿಜೆಪಿ)
ಸರನ್-ರಾಜೀವ್ ಪ್ರತಾಪ್ ರೂಡಿ (ಬಿಜೆಪಿ)
ಹಾಜಿಪುರ್-ಪಶುಪತಿ ಕುಮಾರ್ ಪರಾಸ್ (ಎಲ್ಜೆಪಿ)
ಉಜಿಯಾರ್ಪುರ್-ನಿತ್ಯಾನಂದ ರೈ (ಬಿಜೆಪಿ)
ಸಮಸ್ತಿಪುರ್ - ರಾಮ್ ಚಂದ್ರ ಪಾಸ್ವಾನ್ (ಎಲ್ಜೆಪಿ)
ಬೆಂಗೂಸರೈ- ಗಿರಿರಾಜ್ ಸಿಂಗ್
ಖಗ್ರಿಯಾ - ಘೋಷಿಸಲಾಗಿಲ್ಲ
ಭಾಗಲ್ಪುರ್ - ಅಜಯ್ ಕುಮಾರ್ (ಬಿಜೆಪಿ)
ಬಂಕಾ - ಗಿರಿಧಾರಿ ಯಾದವ್ (ಜೆಡಿಯು)
ಮುಗೇರ್ - ರಾಜೀವ್ ರಂಜನ್ ಸಿಂಗ್ (ಜೆಡಿಯು)
ನಳಂದ - ಕೌಶಲೇಂದ್ರಕುಮಾರ್ (ಜೆಡಿಯು)
ಪಟ್ನಾ ಸಾಹಿಬ್ - ರವಿಶಂಕರ್ ಪ್ರಸಾದ್ (ಬಿಜೆಪಿ)
ಪಾಟಲಿಪುತ್ರ - ರಾಮಕೃಪ ಯಾದವ್ (ಬಿಜೆಪಿ)
ಅರಾ - ರಾಜ್ ಕುಮಾರ್ ಸಿಂಗ್ (ಬಿಜೆಪಿ)
ಬಕ್ಸಾರ್-ಅಶ್ವಿನಿ ಕುಮಾರ್ ಚೌಬೆ (ಬಿಜೆಪಿ)
ಸಸಾರಾಮ್-ಛೇಡಿ ಪಾಸ್ವಾನ್ (ಬಿಜೆಪಿ)
ಕರಕಟ್- ಮಹಾಬಲಿ ಸಿಂಗ್ (ಜೆಡಿಯು)
ಜಹಾನಾಬಾದ್ - ಚಂದ್ರೇಶ್ವರ ಪ್ರಸಾದ್ (ಜೆಡಿಯು)
ಔರಂಗಬಾದ್ - ಸುಶೀಲ್ ಕುಮಾರ್ ಸಿಂಗ್ (ಬಿಜೆಪಿ)
ಗಯಾ - ವಿಜಯ್ ಕುಮಾರ್ ಮಾಂಝಿ (ಜೆಡಿಯು)
ನವಾಡಾ - ಚಂದನ್ ಕುಮಾರ್ (ಎಲ್ಜೆಪಿ)
ಜಮುಯಿ - ಚಿರಾಗ್ ಪಾಸ್ವಾನ್ (ಎಲ್ಜೆಪಿ)

Trending News