ಪಡಿತರ ಚೀಟಿದಾರರಿಗೆ ಜಾಕ್ ಪಾಟ್ ! ನಾಳೆಯಿಂದಲೇ ದೇಶಾದ್ಯಂತ ಈ ನಿಯಮ ಜಾರಿ !

Ration Card New Rules 2023 : ಏಪ್ರಿಲ್ 20 ರಿಂದ ಅಂದರೆ ನಾಳೆಯಿಂದ ಈ ನಿಯಮ ಜಾರಿಯಾಗುತ್ತಿದೆ. ಸರ್ಕಾರದ ಯೋಜನೆಗಳ ಮೂಲಕ ಪೌಷ್ಠಿಕ ಆಹಾರಗಳನ್ನು  ವಿತರಿಸಲಾಗುವುದು ಎಂದು ಪ್ರಧಾನಿ ಮೋದಿ  ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಸಾರವರ್ಧಿತ ಅಕ್ಕಿ ವಿತರಿಸಲು ನಿರ್ಧರಿಸಿದೆ. 

Written by - Ranjitha R K | Last Updated : Apr 19, 2023, 03:11 PM IST
  • ಏಪ್ರಿಲ್ 20 ರಿಂದ ಪಡಿತರ ನಿಯಮಗಳಲ್ಲಿ ಬದಲಾವಣೆ
  • ನಾಳೆಯಿಂದಲೇ ಹೊಸ ನಿಯಮ ಜಾರಿ
  • ಮಾರ್ಚ್ 2024 ರೊಳಗೆ ದೇಶಾದ್ಯಂತ ಜಾರಿಗೆ
ಪಡಿತರ ಚೀಟಿದಾರರಿಗೆ ಜಾಕ್ ಪಾಟ್ ! ನಾಳೆಯಿಂದಲೇ  ದೇಶಾದ್ಯಂತ ಈ ನಿಯಮ ಜಾರಿ !  title=

Ration Card New Rules 2023 : ಏಪ್ರಿಲ್ 20 ರಿಂದ ಪಡಿತರ ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಏಪ್ರಿಲ್ 20 ರಿಂದ ಪಡಿತರ ಹೊಸ ನಿಯಮ ಜಾರಿಗೆ ಬರಲಿದೆ. ನೀವು ಸಹ ಪಡಿತರ ಚೀಟಿದಾರರಾಗಿದ್ದು, ಉಚಿತ ಪಡಿತರ ಯೋಜನೆಯ ಲಾಭವನ್ನು ಪಡೆಯುತ್ತಿದ್ದರೆ, ಹೊಸ ನಿಯಮವನ್ನು ತಿಳಿದುಕೊಳ್ಳಲೇಬೇಕು. ಈ ಹೊಸ ನಿಯಮವು 269 ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ.   

ಮಾರ್ಚ್ 2024 ರೊಳಗೆ ದೇಶಾದ್ಯಂತ ಜಾರಿಗೆ :
ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಸಾರ ವರ್ಧಿತ ಅಕ್ಕಿಯನ್ನು ವಿತರಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ದೇಶದ ಹಲವು ಜಿಲ್ಲೆಗಳಲ್ಲಿ ಈ ಸೌಲಭ್ಯವನ್ನು ಆರಂಭಿಸಲಾಗಿದೆ. ಇದರೊಂದಿಗೆ ಮಾರ್ಚ್ 2024 ರೊಳಗೆ ಎಲ್ಲಾ ಜಿಲ್ಲೆಗಳಲ್ಲಿ ಇದು ಜಾರಿಯಾಗಲಿದೆ. 

ಇದನ್ನೂ ಓದಿ : ನೀರಡಿಕೆಯಿಂದ ಬಳಲುತ್ತಿದ್ದ ತೋಳಕ್ಕೆ ನೀರುಣಿಸಿದ ವ್ಯಕ್ತಿ..! ಹೃದಯಸ್ಪರ್ಶಿ ವಿಡಿಯೋ ವೈರಲ್‌

ಕೇಂದ್ರ ಆಹಾರ ಸಚಿವರ ನೀಡಿದ ಮಾಹಿತಿ : 
ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ನೀಡಿರುವ ಮಾಹಿತಿ ಪ್ರಕಾರ, ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ 20 ರಿಂದ ಅಂದರೆ ನಾಳೆಯಿಂದ ಈ ನಿಯಮ ಜಾರಿಯಾಗುತ್ತಿದೆ. ಸರ್ಕಾರದ ಯೋಜನೆಗಳ ಮೂಲಕ ಪೌಷ್ಠಿಕ ಆಹಾರಗಳನ್ನು ವಿತರಿಸಲಾಗುವುದು ಎಂದು ಪ್ರಧಾನಿ ಮೋದಿ  ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಸಾರವರ್ಧಿತ ಅಕ್ಕಿ ವಿತರಿಸಲು ನಿರ್ಧರಿಸಿದೆ. 

ಮಹಿಳೆಯರಲ್ಲಿ ರಕ್ತಹೀನತೆಯ ಸಮಸ್ಯೆ ದೂರವಾಗಲಿದೆ :
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಮಕ್ಕಳು ಮತ್ತು ಮಹಿಳೆಯರಲ್ಲಿನ ರಕ್ತಹೀನತೆಯ ಸಮಸ್ಯೆ ದೂರವಾಗಲಿದೆ. ಇದರೊಂದಿಗೆ, ಮೈಕ್ರೋನ್ಯೂಟ್ರಿಯಂಟ್‌ಗಳನ್ನು ಹೊಂದಿರುವ ಸಾರವರ್ಧಿತ ಅಕ್ಕಿಯನ್ನು ಹಂತ ಹಂತವಾಗಿ ವಿತರಿಸುವ ಯೋಜನೆಯನ್ನು ಅಕ್ಟೋಬರ್ 2021 ರಲ್ಲಿ ಪ್ರಾರಂಭಿಸಲಾಯಿತು.

ಇದನ್ನೂ ಓದಿ : ಬಿಜೆಪಿ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮೇಲೆ ಗುಂಡಿನ ದಾಳಿ..!

ದೇಶದಲ್ಲಿ 17 ಲಕ್ಷ ಟನ್ ಅಕ್ಕಿ ಉತ್ಪಾದನೆಯಾಗುತ್ತಿದೆ. ಇದುವರೆಗೆ 269 ಜಿಲ್ಲೆಗಳಲ್ಲಿ ಪಿಡಿಎಸ್ (ಪಡಿತರ ಅಂಗಡಿ) ಮೂಲಕ ಅಕ್ಕಿಯನ್ನು ವಿತರಿಸಲಾಗುತ್ತಿದೆ. ದೇಶದಲ್ಲಿ ಸುಮಾರು 735 ಜಿಲ್ಲೆಗಳಿದ್ದು, ಈ ಪೈಕಿ ಶೇ.80ಕ್ಕೂ ಹೆಚ್ಚು ಜನರು ಅನ್ನ ಸೇವಿಸುವವರು. ದೇಶದಲ್ಲಿ ಸಾಕಷ್ಟು ಸಾರವರ್ಧಿತ ಅಕ್ಕಿ ಇದೆ. ಪ್ರಸ್ತುತ ಈ ಅಕ್ಕಿಯ ಉತ್ಪಾದನಾ ಸಾಮರ್ಥ್ಯ ಸುಮಾರು 17 ಲಕ್ಷ ಟನ್‌ಗಳಷ್ಟಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News