Ration Card ಹೊಂದಿರುವವರಿಗೆ ಸಿಗಲಿದೆ 2,500 ರೂ. ಈ ರಾಜ್ಯದ 2.5 ಕೋಟಿ ಜನರಿಗೆ ಲಾಭ

ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರ ಹೊಸ ಘೋಷಣೆಗಳನ್ನು ಮಾಡುತ್ತದೆ. ಇವುಗಳ ಲಾಭವೂ ಜನರಿಗೆ ಸಿಗುತ್ತದೆ. ಈಗ ಈ ರಾಜ್ಯದ ಜನರಿಗೆ 2500 ರೂ.ಗಳ ನಗದು ಬಹುಮಾನವನ್ನು ಸರ್ಕಾರ ಘೋಷಿಸಿದೆ.

Written by - Yashaswini V | Last Updated : Dec 21, 2020, 02:59 PM IST
  • ರಾಜ್ಯದ 2.6 ಕೋಟಿ ಜನರಿಗೆ 2500 ರೂ. ನಗದು ನೀಡಲು ನಿರ್ಧಾರ
  • ಸುಗ್ಗಿ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ
Ration Card ಹೊಂದಿರುವವರಿಗೆ ಸಿಗಲಿದೆ 2,500 ರೂ. ಈ ರಾಜ್ಯದ 2.5 ಕೋಟಿ ಜನರಿಗೆ ಲಾಭ title=
Ration Card holders will get Rs 2,500 (File Image)

ಚೆನ್ನೈ: ಕರ್ನಾಟಕ, ಆಂಧ್ರಪ್ರದೇಶದಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸುವಂತೆ ತಮಿಳುನಾಡಿನಲ್ಲಿ ಪೊಂಗಲ್ ಹಬ್ಬವನ್ನು ಆಚರಿಸಲಾಗುತ್ತದೆ. ಪೊಂಗಲ್ ತಮಿಳುನಾಡಿನ ಪ್ರಮುಖ ಹಬ್ಬವಾಗಿದೆ. ಈ ಹಿನ್ನಲೆಯಲ್ಲಿ ತಮಿಳುನಾಡು ರಾಜ್ಯ ಸರ್ಕಾರವು ಪಡಿತರ ಚೀಟಿ ಹೊಂದಿರುವ ತನ್ನ ರಾಜ್ಯದ 2.6 ಕೋಟಿ ಜನರಿಗೆ 2500 ರೂ. ನಗದು ನೀಡಲು ನಿರ್ಧರಿಸಿದೆ. ಪೊಂಗಲ್ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರೋತ್ಸಾಹಕ ಮೊತ್ತವನ್ನು ಜನವರಿ 4 ರಿಂದ ವಿತರಿಸಲಾಗುವುದು ಇದರಿಂದ ಎಲ್ಲರೂ ಸುಗ್ಗಿಯ ಹಬ್ಬವನ್ನು ಸಂತೋಷದಿಂದ ಆಚರಿಸಲು ಸಾಧ್ಯವಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

2500 ರೂ.ಗಳ ಜೊತೆಗೆ ಈ ವಸ್ತುಗಳೂ ಲಭ್ಯವಿರುತ್ತದೆ:
ಈ ಪ್ಯಾಕೇಜ್ ಅಡಿಯಲ್ಲಿ ಸರ್ಕಾರವು ಒಂದು ಕೆಜಿ ಅಕ್ಕಿ, ಸಕ್ಕರೆ, ಒಣದ್ರಾಕ್ಷಿ, ಗೋಡಂಬಿ, ಏಲಕ್ಕಿ, ಬಟ್ಟೆ ಚೀಲ ಮತ್ತು ಕಬ್ಬನ್ನು ಪಡಿತರ ಚೀಟಿ (Ration Card) ಹೊಂದಿರುವವರಿಗೆ ಉಚಿತವಾಗಿ ನೀಡುತ್ತದೆ. ಕಳೆದ ವರ್ಷವೂ ತಮಿಳುನಾಡು ಸರ್ಕಾರ ಅಕ್ಕಿ ಖರೀದಿಸಲು ಸಾರ್ವಜನಿಕರಿಗೆ ಸಾವಿರ ರೂಪಾಯಿಗಳನ್ನು ನೀಡಿತ್ತು ಮತ್ತು ಈ ವರ್ಷ ಅದನ್ನು 1500 ರೂಪಾಯಿಯಿಂದ 2500 ರೂಪಾಯಿಗೆ ಹೆಚ್ಚಿಸಲಾಗಿದೆ. 

ಇದನ್ನೂ ಓದಿ: Ration Card Rules: ಈ ತಪ್ಪು ಮಾಡಿದರೆ ನಿಮ್ಮ ರೇಷನ್ ಕಾರ್ಡ್ ಸಹ ರದ್ದಾಗಬಹುದು!

2014 ರಲ್ಲಿ 100 ರೂ. ಜೊತೆಗೆ ಆರಂಭ:
ಎಐಎಡಿಎಂಕೆ (AIADMK) ಸರ್ಕಾರ 2014 ರಲ್ಲಿ 1 ಕೆಜಿ ಅಕ್ಕಿ ಮತ್ತು 1 ಕೆಜಿ ಸಕ್ಕರೆಯೊಂದಿಗೆ ರಾಜ್ಯದ ಜನರಿಗೆ 100 ರೂ. ನೀಡಿತು. 2018 ರಲ್ಲಿ ಈ ಮೊತ್ತವನ್ನು 1000 ರೂ.ಗೆ ಹೆಚ್ಚಿಸಲಾಗಿತ್ತು ಮತ್ತು ಈಗ ಮುಖ್ಯಮಂತ್ರಿ ಎಡಪ್ಪಾಡಿ  ಕೆ. ಪಳನಿಸ್ವಾಮಿ ಅದನ್ನು 2,500 ರೂ.ಗೆ ಹೆಚ್ಚಿಸಿದ್ದಾರೆ.

ಸರ್ಕಾರದ ಘೋಷಣೆಯನ್ನು ಪ್ರಶ್ನಿಸಿದ ಪ್ರತಿಪಕ್ಷಗಳು:
ಮುಖ್ಯಮಂತ್ರಿ ಪಳನಿಸ್ವಾಮಿ ಅವರ ನಿರ್ಧಾರವನ್ನು ವಿರೋಧ ಪಕ್ಷದ ಮುಖಂಡ ಎಂ.ಕೆ. ಸ್ಟಾಲಿನ್ ಪ್ರಶ್ನಿಸಿದ್ದಾರೆ. ಜನರು ಸಂಕಷ್ಟದಲ್ಲಿದ್ದಾಗ ಯಾವುದೇ ಆರ್ಥಿಕ ಪರಿಹಾರವನ್ನು ನೀಡಲಿಲ್ಲ. ಆದರೆ ಈಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮುಖ್ಯಮಂತ್ರಿ 2,500 ರೂ.ಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಕನಿಷ್ಠ ಈಗಲಾದರೂ ಅವರು ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಮತ್ತು ಚಂಡಮಾರುತದಿಂದಾಗಿ ತೊಂದರೆಗೀಡಾಗಿರುವವರಿಗೆ 5,000 ರೂ.ಗಳನ್ನು ಘೋಷಿಸಲಿ ಎಂದು ಆಗ್ರಹಿಸಿದ್ದಾರೆ. ಆದರೆ ಪ್ರತಿಪಕ್ಷ ಮುಖಂಡರ ಈ ಆರೋಪಗಳನ್ನು ಮುಖ್ಯಮಂತ್ರಿ ನಿರಾಕರಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ 'ಒನ್ ನೇಶನ್ ಒನ್ ರೇಷನ್ ಕಾರ್ಡ್' ಜಾರಿ!

ತಮಿಳುನಾಡಿನಲ್ಲಿ ಚುನಾವಣೆಗೆ ಸಿದ್ಧತೆಗಳು ಪ್ರಾರಂಭ:
ತಮಿಳುನಾಡಿನ ಚುನಾವಣೆಗೆ ಸಿದ್ಧತೆಗಳನ್ನು ತೀವ್ರಗೊಳಿಸಲಾಗಿದೆ. ತಮಿಳುನಾಡಿನಲ್ಲಿ 2021 ರ ವಿಧಾನಸಭಾ ಚುನಾವಣೆ ಸಂಪೂರ್ಣವಾಗಿ ಹೊಸ ಸನ್ನಿವೇಶಗಳಲ್ಲಿ ನಡೆಯಲಿದೆ ಎಂಬುದು ಗಮನಿಸಬೇಕಾದ ಸಂಗತಿ. ರಾಜ್ಯದ ಪ್ರಭಾವಿ ಪಕ್ಷಗಳಾದ ಎಐಎಡಿಎಂಕೆ (AIADMK) ಮತ್ತು ಡಿಎಂಕೆ (DMK) ತಮ್ಮ ನಾಯಕರಾದ ಜಯಲಲಿತಾ ಮತ್ತು ಕರುಣಾನಿಧಿ ಇಲ್ಲದೆ ಮತದಾನಕ್ಕೆ ಹೋಗಲಿವೆ. ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ಸಾಕಷ್ಟು ಯಶಸ್ಸನ್ನು ಕಂಡಿತು, ಆದರೆ ಪಕ್ಷದ ನಾಯಕ ಸ್ಟಾಲಿನ್ ಅವರಿಗೆ 2021 ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯೇ ನಿಜವಾದ ಪರೀಕ್ಷೆ ಎಂದು ಪರಿಗಣಿಸಲಾಗಿದೆ. ಮತ್ತೊಂದೆಡೆ ಎಐಎಡಿಎಂಕೆ ಅಧಿಕಾರದಲ್ಲಿದ್ದರೂ ವಿವಿಧ ಬಣಗಳ ನಡುವೆ ವಿಭಜನೆಯಾಗಿರುವುದರಿಂದ ದುರ್ಬಲವಾಗಿದೆ. ಆಳುವ ಬಣ ಮತ್ತು ದಿನಕರನ್ ನೇತೃತ್ವದ ಬಣ ಒಗ್ಗೂಡಿದರೆ ಅದು ಬಲವಾಗಿ ಹೊರಹೊಮ್ಮಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News