ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದ ಬಿಜೆಪಿ ಸಂಸದ ರಾಜ್ಯವರ್ಧನ್ ಸಿಂಗ್ ರಾಥೋಡ್ ಕೈಚಳಕ!

ಕಾಯಿನ್ ಟ್ರಿಕ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ ಮಾಜಿ ಕ್ರೀಡಾ ಸಚಿವ ಹಾಗೂ ಬಿಜೆಪಿ ಸಂಸದ ರಾಜ್ಯವರ್ಧನ್ ಸಿಂಗ್ ರಾಥೋಡ್.  

Last Updated : Jul 3, 2019, 03:39 PM IST
ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದ ಬಿಜೆಪಿ ಸಂಸದ ರಾಜ್ಯವರ್ಧನ್ ಸಿಂಗ್ ರಾಥೋಡ್ ಕೈಚಳಕ! title=
Pic Courtesy:DNA (File Image)

ನವದೆಹಲಿ: ಮಾಜಿ ಕ್ರೀಡಾ ಸಚಿವ ಹಾಗೂ ಬಿಜೆಪಿ ಸಂಸದ ರಾಜ್ಯವರ್ಧನ್ ಸಿಂಗ್ ರಾಥೋಡ್ ನಾಣ್ಯ ಚಿಮ್ಮುವ(ಕಾಯಿನ್ ಟ್ರಿಕ್) ಟ್ರಿಕ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

ಹಸ್ತದ ಹಿಂಭಾಗ ಮೂರು ನಾಣ್ಯಗಳನ್ನಿಟ್ಟು ಅದನ್ನು ಚಿಮ್ಮಿಸಿ ಒಂದೊಂದೆ ನಾಣ್ಯ ಹಿಡಿಯುವ ತಮ್ಮ ತಂತ್ರಗಾರಿಕೆಯನ್ನು ತೋರಿಸಿದ್ದಾರೆ. ಈ ವಿಡಿಯೋ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಆಪ್​​ಲೋಡ್​​ ಮಾಡುವ ಮೂಲಕ ನೆಲವನ್ನು ಮುಟ್ಟಲು ಬಿಡಬೇಡಿ! ಕೈ ಮತ್ತು ಕಣ್ಣಿನ ಸಮನ್ವಯವನ್ನು ನಿರ್ಮಿಸಲು ನನ್ನ ಶೂಟಿಂಗ್ ದಿನಗಳಲ್ಲಿ ನಾನು ಮಾಡುತ್ತಿದ್ದ ಟ್ರಿಕ್ ಎಂದು ಬರೆದುಕೊಂಡಿದ್ದಾರೆ.

ತಮ್ಮ ಹಳೆಯ ನೆನಪುಗಳನ್ನು ಬಿಚ್ಚಿಟ್ಟ ಬಿಜೆಪಿ ಸಂಸದರ ವಿಡಿಯೋ ಒಮ್ಮೆ ನೋಡಿ...

Trending News