ಫ್ರಾನ್ಸ್‌ನಲ್ಲಿ ಮೊದಲ ರಫೇಲ್ ಯುದ್ಧ ವಿಮಾನ ಸ್ವೀಕರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಫ್ರಾನ್ಸ್‌ನ ಮೆರಿಗ್ನಾಕ್‌ಗೆ ತಲುಪಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಭಾರತೀಯ ವಾಯುಪಡೆಯ (ಐಎಎಫ್) ಪರವಾಗಿ 36 ರಫೇಲ್ ಫೈಟರ್ ಜೆಟ್‌ಗಳಲ್ಲಿ ಮೊದಲನೆಯದನ್ನು ಸ್ವೀಕರಿಸಿದ್ದಾರೆ. 

Last Updated : Oct 8, 2019, 06:26 PM IST
 ಫ್ರಾನ್ಸ್‌ನಲ್ಲಿ ಮೊದಲ ರಫೇಲ್ ಯುದ್ಧ ವಿಮಾನ ಸ್ವೀಕರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ title=
Photo courtesy: Twitter

ನವದೆಹಲಿ: ಫ್ರಾನ್ಸ್‌ನ ಮೆರಿಗ್ನಾಕ್‌ಗೆ ತಲುಪಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಭಾರತೀಯ ವಾಯುಪಡೆಯ (ಐಎಎಫ್) ಪರವಾಗಿ 36 ರಫೇಲ್ ಫೈಟರ್ ಜೆಟ್‌ಗಳಲ್ಲಿ ಮೊದಲನೆಯದನ್ನು ಸ್ವೀಕರಿಸಿದ್ದಾರೆ. 

ಫ್ರಾನ್ಸ್ ನ ಅವರ ಭೇಟಿಯ ವೇಳೆ ಅವರು ಶಾಸ್ತ್ರ ಪೂಜೆಯನ್ನು ಮಾಡಿ ನಂತರ ರಫೇಲ್ ಯುದ್ದ ವಿಮಾನದಲ್ಲಿ ವಿಹರಿಸಿದ್ದಾರೆ. ಈ ರಫೇಲ್ ಹಸ್ತಾಂತರದ ವೇಳೆ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್  'ಇದು ಒಂದು ಐತಿಹಾಸಿಕ ದಿನ ಮತ್ತು ಭಾರತ ಮತ್ತು ಫ್ರಾನ್ಸ್ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ' ಎಂದು ಹೇಳಿದರು. 

ಪ್ಯಾರಿಸ್ ನಿಂದ 590 ಕಿ.ಮೀ ದೂರದಲ್ಲಿರುವ ಬೋರ್ಡೆಕ್ಸ್ ಮೆರಿಗ್ನಾಕ್ ನಲ್ಲಿ ವಿಮಾನ ತಯಾರಕರಾದ ಡಸಾಲ್ಟ್ ಏವಿಯೇಷನ್ ಮೂಲಕ ಹಸ್ತಾಂತರ ಸಮಾರಂಭ ನಡೆಯಿತು. ಸೆಪ್ಟೆಂಬರ್ 2016 ರಲ್ಲಿನ 59,000 ಕೋಟಿ ರೂ. ಒಪ್ಪಂದದ ಭಾಗವಾಗಿ ನಾಲ್ಕು ರಾಫೆಲ್ ಜೆಟ್‌ಗಳ ಮೊದಲ ಬ್ಯಾಚ್ ಮುಂದಿನ ವರ್ಷ ಮೇ ತಿಂಗಳಲ್ಲಿ ಭಾರತಕ್ಕೆ ಬರುವ ನಿರೀಕ್ಷೆಯಿದೆ. ಸೆಪ್ಟೆಂಬರ್ 2022 ರ ವೇಳೆಗೆ ಉಳಿದ ವಿಮಾನಗಳು ಆಗಮಿಸಲಿದ್ದು, ಇದಕ್ಕಾಗಿ ಐಎಎಫ್ ಪೈಲಟ್‌ಗಳ ತರಬೇತಿ ಸೇರಿದಂತೆ ಸಿದ್ಧತೆಗಳನ್ನು ನಡೆಸುತ್ತಿದೆ.

ಇದಕ್ಕೂ ಮುನ್ನ ಮಂಗಳವಾರದಂದು ರಾಜನಾಥ್ ಸಿಂಗ್ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ರನ್ನು ಪ್ಯಾರಿಸ್‌ನ ಎಲಿಸೀ ಪ್ಯಾಲೇಸ್‌ನಲ್ಲಿ ಭೇಟಿಮಾಡಿ ದ್ವೀಪಕ್ಷೀಯ ವಿಷಯಗಳ ಕುರಿತಾಗಿ ಮಾತುಕತೆ ನಡೆಸಿದರು. 

Trending News