Rajasthan Political Crisis: ಸಚಿನ್ ಪೈಲಟ್ ವಿರುದ್ಧ ಸೋನಿಯಾ ಗಾಂಧಿಗೆ ಗೆಹಲೋಟ್ ದೂರು! ಬಹಿರಂಗಗೊಂಡ ಪತ್ರದಲ್ಲೆನಿದೆ?

Ashok Gehlot: ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ಜೊತೆಗೆ ಇತ್ತೀಚಿನ ದಿನಗಳಲ್ಲಿ ರಾಜಸ್ಥಾನದ ಕಾಂಗ್ರೆಸ್ ಪಾಳೆಯದಲ್ಲಿ ಭಾರಿ ಬಿರುಗಾಳಿಯೇ ಎದ್ದಿದೆ. ಏತನ್ಮಧ್ಯೆ ರಾಜಸ್ಥಾನದ ಮುಖ್ಯಮಂತ್ರಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಭೇಟಿಯ ಬಳಿಕ ಅವರ ಕೈಯಲ್ಲಿ ಪತ್ರವೊಂದು ಕಂಡುಬಂದಿದ್ದು, ಪತ್ರದಲ್ಲಿ ಪೈಲಟ್ ಬಣದ ವಿರುದ್ಧ ದೂರುಗಳಿದ್ದವು ಎನ್ನಲಾಗಿದೆ.

Written by - Nitin Tabib | Last Updated : Sep 30, 2022, 09:32 PM IST
  • ಪತ್ರದಲ್ಲಿ ಪೈಲಟ್ ಬಣದ ವಿರುದ್ಧ ಸರಣಿ ಆರೋಪಗಳಿದ್ದವು ಎನ್ನಲಾಗಿದೆ.
  • ಆದರೆ, ಉಳಿದವುಗಳು ಗೆಹ್ಲೋಟ್ ಅವರ ಕೈಯಿಂದ ಮುಚ್ಚಲ್ಪಟ್ಟಿದ್ದರಿಂದ ಈ ಅರ್ಧದಷ್ಟು ಅಂಶಗಳು ಮಾತ್ರ ಕ್ಯಾಮರಾ ಕಣ್ಣಿಗೆ ಬಿದ್ದಿವೆ.
  • ಅಧಿಕಾರದಲ್ಲಿದ್ದಾಗ ಬಂಡಾಯವೆದ್ದ ಮೊದಲ ರಾಜ್ಯಾಧ್ಯಕ್ಷ ಎಂದು ಗೆಹ್ಲೋಟ್ ಬರೆದಿದ್ದರು.
Rajasthan Political Crisis: ಸಚಿನ್ ಪೈಲಟ್ ವಿರುದ್ಧ ಸೋನಿಯಾ ಗಾಂಧಿಗೆ ಗೆಹಲೋಟ್ ದೂರು! ಬಹಿರಂಗಗೊಂಡ ಪತ್ರದಲ್ಲೆನಿದೆ? title=
Rajasthan Political Crisis

Rajasthan Politics: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಗುರುವಾರ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸೋನಿಯಾ ಗಾಂಧಿಯನ್ನು ಅವರ ನಿವಾಸದಲ್ಲಿ ಭೇಟಿಯಾಗಲು ತೆರಳುತ್ತಿದ್ದ ಗೆಹ್ಲೋಟ್ ಮಾಧ್ಯಮದವರ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಈ ಸಮಯದಲ್ಲಿ, ಗೆಹ್ಲೋಟ್ ಅವರ ಕೈಯಲ್ಲಿ ಒಂದು ಕಾಗದವಿತ್ತು, ಅದರಲ್ಲಿ ಪೈಲಟ್ ಬಣದ ಗುಂಡಾಗಿರಿಯ ವಿವರಗಳಿದ್ದವು ಎನ್ನಲಾಗಿದೆ, ಬಿಜೆಪಿಯೊಂದಿಗಿನ ಒಪ್ಪಂದದಿಂದ ಪಕ್ಷವನ್ನು ತೊರೆಯುವವರೆಗಿನ ವಿಷಯಗಳನ್ನು ಅದರಲ್ಲಿ ಉಲ್ಲೇಖಿಸಲಾಗಿದೆ. ಗೆಹ್ಲೋಟ್ ಅವರು ಕ್ಷಮಾಪಣೆಯೊಂದಿಗೆ ಪೈಲಟ್ ಬಣದ ವಿರುದ್ಧದ ಆರೋಪಗಳನ್ನು ಒಳಗೊಂಡಿರುವ ಕೈ ಬರಹದ ಪತ್ರವನ್ನು ತೆಗೆದುಕೊಂಡಿದ್ದರು ಎನ್ನಲಾಗಿದೆ.

ಈ ಪತ್ರದಲ್ಲಿ 102 Vs 18 ಎಂದು ಬರೆಯಲಾಗಿತ್ತು
ಸಚಿನ್ ಪೈಲಟ್ ಪಕ್ಷ ತೊರೆಯುತ್ತಾರೆ ಎಂದು ಪತ್ರದಲ್ಲಿ ಬರೆಯಲಾಗಿತ್ತು, ಅದರಲ್ಲಿ '102 ವಿರುದ್ಧ 18' ಎಂದೂ ಕೂಡ ಉಲ್ಲೇಖಿಸಲಾಗಿತ್ತು, ಅಂದರೆ ಗೆಹ್ಲೋಟ್‌ಗೆ 102 ಶಾಸಕರ ಬೆಂಬಲವಿದೆ ಮಾತು ಪೈಲಟ್‌ ಬಳಿ ಕೇವಲ 18 ಶಾಸಕರ ಬೆಂಬಲವಿದೆ ಎಂದು ಪತ್ರದಲ್ಲಿ ಬರೆಯಲಾಗಿತ್ತು, ಇದರ ಜೊತೆಗೆ ನಡೆದದ್ದು ತುಂಬಾ ದುಃಖವಾಗಿದೆ, ನನಗೂ ತುಂಬಾ ದುಃಖವಾಗಿದೆ ಮತ್ತು ನೋವಾಗಿದೆ ಎಂದು ಬರೆಯಲಾಗಿತ್ತು ಎನ್ನಲಾಗಿದೆ.

ಪೈಲಟ್ ಗುಂಪಿನ ವಿರುದ್ಧ ಆರೋಪಗಳ ಸರಣಿ ಆರೋಪಗಳಿದ್ದವು
ಪತ್ರದಲ್ಲಿ ಪೈಲಟ್ ಬಣದ ವಿರುದ್ಧ ಸರಣಿ ಆರೋಪಗಳಿದ್ದವು ಎನ್ನಲಾಗಿದೆ. ಆದರೆ, ಉಳಿದವುಗಳು ಗೆಹ್ಲೋಟ್ ಅವರ ಕೈಯಿಂದ ಮುಚ್ಚಲ್ಪಟ್ಟಿದ್ದರಿಂದ ಈ ಅರ್ಧದಷ್ಟು ಅಂಶಗಳು  ಮಾತ್ರ ಕ್ಯಾಮರಾ ಕಣ್ಣಿಗೆ ಬಿದ್ದಿವೆ. ಅಧಿಕಾರದಲ್ಲಿದ್ದಾಗ ಬಂಡಾಯವೆದ್ದ ಮೊದಲ ರಾಜ್ಯಾಧ್ಯಕ್ಷ ಎಂದು ಗೆಹ್ಲೋಟ್ ಬರೆದಿದ್ದರು.

ಇದನ್ನೂ ಓದಿ-Congress President Election : ಸ್ಲಾಗ್ ಓವರ್​ನಲ್ಲಿ ಸಿಕ್ಸರ್ ಎಸೆದ ಖರ್ಗೆ, 51 ವರ್ಷಗಳ ಬಳಿಕ ಕಾಂಗ್ರೆಸ್​ಗೆ ದಲಿತ ಅಧ್ಯಕ್ಷ!

ಪುಷ್ಕರ್ ಘಟನೆಯನ್ನೂ ಉಲ್ಲೇಖಿಸಿದ್ದಾರೆ
ನಮ್ಮ ಬಳಿ 102 ಶಾಸಕರಿದ್ದು, ಪೈಲಟ್‌ಗೆ 18 ಶಾಸಕರ ಬೆಂಬಲವಿದೆ ಎಂದು ಪತ್ರಿಕೆಯಲ್ಲಿ ಬರೆಯಲಾಗಿದೆ. ಬಿಜೆಪಿ ಶಾಸಕರಿಗೆ 10-50 ಕೋಟಿ ರೂ ಆಫರ್ ನೀಡಲಾಗಿದ್ದು, ಆರೋಪದಲ್ಲಿ ಪುಷ್ಕರ್ ಘಟನೆಯನ್ನೂ ಉಲ್ಲೇಖಿಸಲಾಗಿದೆ. ಪುಷ್ಕರ್‌ನಲ್ಲಿ ರಾಜ್ಯ ಸಚಿವ ಅಶೋಕ್ ಚಂದನಾ ಅವರ ಮೇಲೆ ಶೂಗಳನ್ನು ಎಸೆಯಲಾಯಿತು ಮತ್ತು ಪೈಲಟ್ ಪರವಾಗಿ ಘೋಷಣೆಗಳನ್ನು ಮೊಳಗಿಸಲಾಗಿತ್ತು.

ಇದನ್ನೂ ಓದಿ-ಗಾಂಧಿ ಕುಟುಂಬ ಯಾರಿಗೂ ಬೆಂಬಲಿಸಿಲ್ಲ- ಖರ್ಗೆ ಸ್ಪಷ್ಟನೆ

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ನಕಾರ
ಗುರುವಾರ, ಅಶೋಕ್ ಗೆಹ್ಲೋಟ್, ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಬಳಿಕ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರು. ಕಳೆದ 50 ವರ್ಷಗಳಲ್ಲಿ ನಾನು ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಸೈನಿಕನಾಗಿ ಕೆಲಸ ಮಾಡಿದ್ದೇನೆ. ಹೈಕಮಾಂಡ್ ಸಂಪೂರ್ಣ ವಿಶ್ವಾಸದಿಂದ ನನಗೆ ಜವಾಬ್ದಾರಿ ನೀಡಿದೆ. ಇದೇ ವೇಳೆ ಇಂದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಸ್ತಾವಿಕರನ್ನಾಗಿ ನಾಮಕರಣ ಮಾಡಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News