ಪ್ರತಾಪ್ ಗಡ್: ರಾಜಸ್ಥಾನದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಶಿವನಾ, ಜಖಂ, ಹಾಗೂ ಇತರ ನದಿಗಳು ತುಂಬಿರುವುದರಿಂದ ಪ್ರವಾಹವು ಅಪಾಯದ ಮಟ್ಟವನ್ನು ತಲುಪಿದೆ.
ಹೀಗಾಗಿ ಈಗ ಪ್ರತಾಪ್ ಗಡ್ ನಲ್ಲಿ ಪ್ರವಾಹ ಉಂಟಾಗಿ ಜನರ ಜೀವನವು ಅಸ್ತವ್ಯಸ್ತಗೊಂಡಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪಾಂಚಾಲಿ,ರೋಸಾದ್, ಶಿವನಾ ಮತ್ತು ಜಖಂ ನದಿಗಳ ಪ್ರವಾಹ ಉಂಟಾಗಿತ್ತು ಇದರಿಂದ ಈಗ ಜನಸಾಮಾನ್ಯರ ಜನಜೀವನ ಅಸ್ತ್ಯವ್ಯಸ್ತಗೊಂಡಿದೆ.
ಬಹುತೇಕ ಸ್ಥಳಗಳಲ್ಲಿ ಈಗ ನೀರಿನ ಮಟ್ಟವು ಈಗ ಅಧಿಕ ಪ್ರಮಾಣದಲ್ಲಿ ಇರುವುದರಿಂದಾಗಿ ಸೇತುವೆಗಳು ಮುಚ್ಚಿ ಹೋಗಿವೆ. ಸಾಮಾನ್ಯವಾಗಿ ರಾಜಸ್ತಾನದಲ್ಲಿ ಜುಲೈ ತಿಂಗಳಲ್ಲಿ ಬರುವ ಮಾನ್ಸೂನ್ ಈ ಬಾರಿ ಬೇಗ ಬಂದಿದ್ದರಿಂದ ಈ ಬಾರಿ ಸಾಕಷ್ಟು ಸಮಸ್ಯೆಯನ್ನು ಸೃಷ್ಟಿಸಿದೆ.