ಒಬ್ಬ ಮೋದಿ 'ಅಚ್ಚೆದೀನ್' ಮಾರಿದ್ರೆ, ಮತ್ತೊಬ್ಬರು 'ಡೈಮಂಡ್' ಮಾರುತ್ತಾರೆ- ರಾಹುಲ್ ಗಾಂಧಿ

    

Last Updated : Feb 21, 2018, 06:14 PM IST
ಒಬ್ಬ ಮೋದಿ 'ಅಚ್ಚೆದೀನ್' ಮಾರಿದ್ರೆ, ಮತ್ತೊಬ್ಬರು 'ಡೈಮಂಡ್' ಮಾರುತ್ತಾರೆ- ರಾಹುಲ್ ಗಾಂಧಿ title=

ನವದೆಹಲಿ: ಮೇಘಾಲಯದ ಶಿಲಾಂಗ್ ನಲ್ಲಿ ಚುನಾವಣಾ ರ್ಯಾಲಿ ಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ "ನರೇಂದ್ರ ಮೋದಿಯವರು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಮತ್ತು ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ ಎನ್ನುವ ಕನಸುಗಳನ್ನು ಮಾರಿ ಜನರನ್ನು ಮೂರ್ಖರನ್ನಾಗಿಸಿದರೆ, ಅದೇ ರೀತಿ ನೀರವ್ ಮೋದಿ ಡೈಮಂಡ್ ಗಳನ್ನು ಮಾರುತ್ತಾ ಮೂರ್ಖರನ್ನಾಗಿಸಿದ್ದಾರೆ ಎಂದು ರಾಹುಲ್  ಗಾಂಧಿ ಮೋದಿ ಸರ್ಕಾರದ ವಿರುದ್ದ ಟೀಕಾ ಪ್ರಹಾರ ಮಾಡಿದರು. 

ಕೇಂದ್ರ ಸರ್ಕಾರವು ನಿರುದ್ಯೋಗ, ನಿರಾಶಾವಾದ ಹೆಚ್ಚಳಕ್ಕೆ ಉತ್ತೇಜನ ನೀಡಿದೆ, ಅಲ್ಲದೆ ಭದ್ರತೆ ಮತ್ತು ಆರ್ಥಿಕ ಪ್ರಗತಿ ಬಗ್ಗೆ ಯಾವುದೇ ಕಾಳಜಿ ವಹಿಸಿಲ್ಲ ಎಂದು ಅವರು ತಿಳಿಸಿದರು. ಫೆಬ್ರುವರಿ 27 ರಂದು ವಿಧಾನಸಭಾ ಚುನಾವಣೆ ಇರುವ ಹಿನ್ನಲೆಯಲ್ಲಿ  ರಾಹುಲ್ ಗಾಂಧಿ ಶಿಲ್ಲಾಂಗ ನಲ್ಲಿ ರೋಡ ಶೋ ಕೂಡಾ ನಡೆಸಿದರು ಎಂದು ತಿಳಿದು ಬಂದಿದೆ.

Trending News