ಬಿ‌ಎಸ್‌ಎನ್‌ಎಲ್ ಪೈಸಾ ವಸೂಲ್ ಪ್ಲಾನ್ : ಒಮ್ಮೆ ರಿಚಾರ್ಜ್ ಮಾಡಿದ್ರೆ 10 ತಿಂಗಳು ನಿಶ್ಚಿಂತೆಯಿಂದ ಇರಬಹುದು!

BSNL Offer: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿ‌ಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯಲ್ಲಿ ಅತ್ಯಾಕರ್ಷಕ ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿದೆ. ಬರೋಬ್ಬರಿ 300 ದಿನಗಳ ವ್ಯಾಲಿಡಿಟಿಯೊಂದಿಗೆ ಲಭ್ಯವಿರುವ ಈ ಯೋಜನೆಯಲ್ಲಿ ಹಲವು ಇತರ ಸೌಲಭ್ಯಗಳನ್ನು ಸಹ ನೀಡಲಾಗಿದೆ. 

Written by - Yashaswini V | Last Updated : Jan 23, 2025, 10:42 AM IST
  • ಬಿ‌ಎಸ್‌ಎನ್‌ಎಲ್ ಕೈಗೆಟುಕುವ ಬೆಲೆಯಲ್ಲಿ ದೀರ್ಘಾವಧಿ ವ್ಯಾಲಿಡಿಟಿ ಹೊಂದಿರುವ ಮಸ್ತ್ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ.
  • ಇದರ ವ್ಯಾಲಿಡಿಟಿ 10 ತಿಂಗಳು (ಬರೋಬ್ಬರಿ 300 ದಿನಗಳ)ವರೆಗೆ ಇರಲಿದೆ
  • ಯಾವುದೀ ಬಿ‌ಎಸ್‌ಎನ್‌ಎಲ್ ಪ್ರಿಪೇಯ್ಡ್ ಯೋಜನೆ
ಬಿ‌ಎಸ್‌ಎನ್‌ಎಲ್ ಪೈಸಾ ವಸೂಲ್ ಪ್ಲಾನ್ : ಒಮ್ಮೆ ರಿಚಾರ್ಜ್ ಮಾಡಿದ್ರೆ 10 ತಿಂಗಳು  ನಿಶ್ಚಿಂತೆಯಿಂದ ಇರಬಹುದು! title=

BSNL Best Offer: ಮೊಬೈಲ್ ರಿಚಾರ್ಜ್ ದರ ಹೆಚ್ಚಳದಿಂದ ಬೇಸತ್ತಿರುವ ಮೊಬೈಲ್ ಗ್ರಾಹಕರಿಗೆ ಸರ್ಕಾರಿ ಟೆಲಿಕಾಂ ಕಂಪನಿ ಬಿ‌ಎಸ್‌ಎನ್‌ಎಲ್ ಪರಿಹಾರ ನೀಡಿದ್ದು ಪೈಸಾ ವಸೂಲ್ ಪ್ಲಾನ್ ಪರಿಚಯಿಸಿದೆ. ಒಮ್ಮೆ ಈ ಪ್ರಿಪೇಯ್ಡ್ ಪ್ಲಾನ್ ರಿಚಾರ್ಜ್ ಮಾಡಿದರೆ ಮತ್ತೆ ಮತ್ತೆ ರಿಚಾರ್ಜ್ ಮಾಡಬೇಕೆನ್ನುವ ಗೊಡವೆಯೇ ಇರುವುದಿಲ್ಲ. ಯಾವುದೀ ರಿಚಾರ್ಜ್ ಪ್ಲಾನ್, ಇದರ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿ ತಿಳಿಯಲು ಮುಂದೆ ಓದಿ. 

ಬಿ‌ಎಸ್‌ಎನ್‌ಎಲ್ ಕೈಗೆಟುಕುವ ರಿಚಾರ್ಜ್ ಪ್ಲಾನ್: 
ಬಿ‌ಎಸ್‌ಎನ್‌ಎಲ್ ಕೈಗೆಟುಕುವ ಬೆಲೆಯಲ್ಲಿ ದೀರ್ಘಾವಧಿ ವ್ಯಾಲಿಡಿಟಿ ಹೊಂದಿರುವ ಮಸ್ತ್ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಇದರ ವ್ಯಾಲಿಡಿಟಿ 10 ತಿಂಗಳು (ಬರೋಬ್ಬರಿ 300 ದಿನಗಳ)ವರೆಗೆ ಇರಲಿದ್ದು ಒಮ್ಮೆ ರಿಚಾರ್ಜ್ ಮಾಡಿದರೆ ನಿಶ್ಚಿಂತೆಯಿಂದ ಇರಬಹುದು. ಈ ಬಿ‌ಎಸ್‌ಎನ್‌ಎಲ್ ಪ್ರಿಪೇಯ್ಡ್ ಯೋಜನೆಯ ಬೆಲೆ ₹797 ಗಳು ಮಾತ್ರ.

ಇದನ್ನೂ ಓದಿ- Recharge ಚಿಂತೆಯೇ ಇಲ್ಲ: ಬರೀ 10ರೂ.ಗೆ ಸಿಗುತ್ತೆ 365ದಿನಗಳ ವ್ಯಾಲಿಡಿಟಿ: ನಿಮಗೂ ತಿಳಿದಿರಲಿ TRAI ಹೊಸ ನಿಯಮ

ಬಿ‌ಎಸ್‌ಎನ್‌ಎಲ್ ₹797 ಪ್ರಿಪೇಯ್ಡ್ ಪ್ಲಾನ್ ಪ್ರಯೋಜನ: 
ಬಿ‌ಎಸ್‌ಎನ್‌ಎಲ್ ಪರಿಚಯಿಸಿರುವ ₹797 ರಿಚಾರ್ಜ್ ಯೋಜನೆ ಮೊದಲೇ ತಿಳಿಸಿದಂತೆ ದೀರ್ಘಾವಧಿಯ ಯೋಜನೆಯಾಗಿದೆ. 
>> ಈ ರಿಚಾರ್ಜ್ ಪ್ಲಾನ್ ನಲ್ಲಿ ಮೊದಲ 60 ದಿನಗಳವರೆಗೆ ಎಂದರೆ 2 ತಿಂಗಳವಾರೆಗೆ ಅನಿಯಮಿತ ಕರೆ ಸೌಲಭ್ಯವೂ ಲಭ್ಯವಿದೆ. ಈ ಅವಧಿಯಲ್ಲಿ ದಿನಕ್ಕೆ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯವೂ ಲಭ್ಯವಿದೆ. 
>> ಮೊದಲ 60ದಿನಗಳವರೆಗೆ ಇದರಲ್ಲಿ ನಿತ್ಯ 2ಜಿ‌ಬಿ ಡೇಟಾ ಸೌಲಭ್ಯವೂ ಸಿಗಲಿದೆ. 
>> 60 ದಿನಗಳು ಪೂರ್ಣಗೊಂಡ ಬಳಿಕ ಡೇಟಾ, ಕರೆ ಮತ್ತು ಎಸ್‌ಎಮ್‌ಎಸ್ ಸೌಲಭ್ಯ ನಿಲ್ಲುತ್ತವೆ ಆದರೂ 300 ದಿನಗಳವರೆಗೆ ಸಿಮ್ ಸಕ್ರಿಯವಾಗಿರುತ್ತದೆ. 

ಇದನ್ನೂ ಓದಿ- ತನ್ನ ಕೋಟ್ಯಾಂತರ ಗ್ರಾಹಕರಿಗಾಗಿ VoNR ಸೇವೆ ಆರಂಭಿಸಿದ ಜಿಯೋ.. ಇದರ ವೈಶಿಷ್ಟ್ಯ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ..!

ಗಮನಾರ್ಹವಾಗಿ ಬಿ‌ಎಸ್‌ಎನ್‌ಎಲ್ ನ ಈ ಯೋಜನೆಯು ಬಿ‌ಎಸ್‌ಎನ್‌ಎಲ್ ಸಿಮ್ ಅನ್ನು ದ್ವಿತೀಯ ಸಂಖ್ಯೆಯಾಗಿ ಬಳಸುವ ಬಳಕೆದಾರರಿಗೆ ತುಮಾ ಲಾಭದಾಯಕ ಎಂದು ಹೇಳಬಹುದು. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News