EPFO: ಇನ್ಮುಂದೆ ಇಪಿಎಫ್‌ಒ ಸದಸ್ಯರ ಪ್ರೊಫೈಲ್ ನವೀಕರಣ ಮತ್ತಷ್ಟು ಸುಲಭ ..! 

2024-25ರ ಹಣಕಾಸು ವರ್ಷದಲ್ಲಿ ಉದ್ಯೋಗದಾತರ ಮೂಲಕ ತಿದ್ದುಪಡಿಗಾಗಿ ಇಪಿಎಫ್‌ಒನಲ್ಲಿ ಸ್ವೀಕರಿಸಿದ ಒಟ್ಟು 8 ಲಕ್ಷ ವಿನಂತಿಗಳಲ್ಲಿ, ಸುಮಾರು ಶೇ.45 ರಷ್ಟು ಬದಲಾವಣೆ ವಿನಂತಿಗಳನ್ನು ಉದ್ಯೋಗದಾತರ ಪರಿಶೀಲನೆ ಅಥವಾ ಇಪಿಎಫ್‌ಒ ಅನುಮೋದನೆ ಇಲ್ಲದೆ ಸದಸ್ಯರು ಸ್ವಯಂ ಅನುಮೋದಿಸಬಹುದು. 

Written by - Manjunath N | Last Updated : Jan 23, 2025, 03:07 PM IST
  • ಸರಳೀಕರಣವು ಸದಸ್ಯರ ವಿನಂತಿಗಳನ್ನು ತಕ್ಷಣವೇ ತೆರವುಗೊಳಿಸಲು ಅನುವು ಮಾಡಿಕೊಡುತ್ತದೆ,
  • ದತ್ತಾಂಶ ಸ್ಥಿರತೆಯನ್ನು ಖಚಿತಪಡಿಸುತ್ತದೆ, ದೋಷಗಳ ಅಪಾಯವನ್ನು ಕಡಿಮೆ ಮಾಡುತ್ತದೆ
  • ಸದಸ್ಯರಿಗೆ ಪರಿಣಾಮಕಾರಿ ಸೇವಾ ವಿತರಣೆಯನ್ನು ಮಾಡುತ್ತದೆ
EPFO: ಇನ್ಮುಂದೆ ಇಪಿಎಫ್‌ಒ ಸದಸ್ಯರ ಪ್ರೊಫೈಲ್ ನವೀಕರಣ ಮತ್ತಷ್ಟು ಸುಲಭ ..!  title=

ಬಳ್ಳಾರಿ: ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ)ಯು ತನ್ನ ಸದಸ್ಯರ ಸೇವೆಗಳನ್ನು ಸುಧಾರಿಸುವ ಮತ್ತು ಸದಸ್ಯರ ದತ್ತಾಂಶದ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಪ್ರೊಫೈಲ್ (ವೈಯಕ್ತಿಕ ವಿವರ) ಅನ್ನು ನವೀಕರಿಸುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿದೆ ಎಂದು ಬಳ್ಳಾರಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ತಿಳಿಸಿದ್ದಾರೆ.

ಪರಿಷ್ಕೃತ ಕಾರ್ಯವಿಧಾನದಡಿ ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಅನ್ನು ಈಗಾಗಲೇ ಆಧಾರ್ ಮೂಲಕ ಮೌಲ್ಯೀಕರಿಸಿದ ಸದಸ್ಯರು ಯಾವುದೇ ದಾಖಲೆ ಅಪ್ಲೋಡ್ ಮಾಡುವ ಅಗತ್ಯವಿಲ್ಲದೆ ಹೆಸರು, ಹುಟ್ಟಿದ ದಿನಾಂಕ, ಲಿಂಗ, ರಾಷ್ಟಿçÃಯತೆ, ತಂದೆ-ತಾಯಿಯ ಹೆಸರು, ವೈವಾಹಿಕ ಸ್ಥಿತಿ, ಸಂಗಾತಿಯ ಹೆಸರು, ಸೇರಿದ ದಿನಾಂಕ ಮತ್ತು ತೊರೆದ ದಿನಾಂಕಗಳನ್ನು ತಮ್ಮ ಪ್ರೊಫೈಲ್ ನಲ್ಲಿ ನವೀಕರಿಸಬಹುದು.1-10-2017 ಕ್ಕಿಂತ ಮೊದಲು ಯುಎಎನ್ ಪಡೆದ ಕೆಲವು ಸಂದರ್ಭಗಳಲ್ಲಿ ಮಾತ್ರ ನವೀಕರಣಕ್ಕೆ ಉದ್ಯೋಗದಾತರ ಪ್ರಮಾಣೀಕರಣ ಮಾತ್ರ ಅಗತ್ಯ ಇತ್ತು.

ಸೇವೆಗಳನ್ನು ತಡೆರಹಿತವಾಗಿ ಒದಗಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಮತ್ತು ನಿಧಿಯಿಂದ ತಪ್ಪು / ಮೋಸದ ಪಾವತಿಯ ಅಪಾಯವನ್ನು ತಪ್ಪಿಸಲು ಇಪಿಎಫ್‌ಓ ಡೇಟಾಬೇಸ್ ನಲ್ಲಿ ಇಪಿಎಫ್ ಸದಸ್ಯರ ವೈಯಕ್ತಿಕ ಡೇಟಾದ ಸ್ಥಿರತೆ ಮತ್ತು ಸತ್ಯಾಸತ್ಯತೆ ಅತ್ಯಂತ ಮಹತ್ವದ್ದಾಗಿದೆ.ಸದಸ್ಯರ ವಿವರಗಳನ್ನು ಬದಲಾಯಿಸುವ ಅಥವಾ ಸರಿಪಡಿಸುವ ಯಾವುದೇ ಅಗತ್ಯವಿದ್ದರೆ, ಸದಸ್ಯರಿಗೆ ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಲು ಮತ್ತು ಅವರ ವಿನಂತಿಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಲು ಈಗಾಗಲೇ ಒಂದು ಕಾರ್ಯಚಟುವಟಿಕೆಯನ್ನು ಒದಗಿಸಲಾಗಿದೆ. ಅಂತಹ ವಿನಂತಿಗಳನ್ನು ಉದ್ಯೋಗದಾತರು ಆನ್‌ಲೈನ್ ನಲ್ಲಿ ಅನುಮೋದಿಸುತ್ತಿದ್ದರು ಮತ್ತು ಅಂತಿಮ ಅನುಮೋದನೆಗಾಗಿ ಇಪಿಎಫ್‌ಒಗೆ ಕಳುಹಿಸುತ್ತಿದ್ದರು.

ಇದನ್ನೂ ಓದಿ: ಮಹಾಕುಂಭಮೇಳ  2025: ಪ್ರಯಾಗರಾಜ್‌ಗೆ ರೈಲಿನಲ್ಲಿ ಹೋಗುವುದು ಹೇಗೆ? ಮಾಹಿತಿ ಇಲ್ಲಿದೆ

2024-25ರ ಹಣಕಾಸು ವರ್ಷದಲ್ಲಿ ಉದ್ಯೋಗದಾತರ ಮೂಲಕ ತಿದ್ದುಪಡಿಗಾಗಿ ಇಪಿಎಫ್‌ಒನಲ್ಲಿ ಸ್ವೀಕರಿಸಿದ ಒಟ್ಟು 8 ಲಕ್ಷ ವಿನಂತಿಗಳಲ್ಲಿ, ಸುಮಾರು ಶೇ.45 ರಷ್ಟು ಬದಲಾವಣೆ ವಿನಂತಿಗಳನ್ನು ಉದ್ಯೋಗದಾತರ ಪರಿಶೀಲನೆ ಅಥವಾ ಇಪಿಎಫ್‌ಒ ಅನುಮೋದನೆ ಇಲ್ಲದೆ ಸದಸ್ಯರು ಸ್ವಯಂ ಅನುಮೋದಿಸಬಹುದು. ಇದು ಜಂಟಿ ಘೋಷಣೆಗಳನ್ನು (ಜೆಡಿ) ಅನುಮೋದಿಸಲು ಉದ್ಯೋಗದಾತರು ತೆಗೆದುಕೊಳ್ಳುವ ಸುಮಾರು 28 ದಿನಗಳ ವಿಳಂಬವನ್ನು ನಿವಾರಿಸುತ್ತದೆ. ಪೂರ್ಣ ಇ-ಕೆವೈಸಿ ಹೊಂದಿರದ ಇಪಿಎಫ್ ಖಾತೆದಾರರ ಬದಲಾವಣೆ, ತಿದ್ದುಪಡಿಯ ವಿನಂತಿಯನ್ನು ಇಪಿಎಫ್‌ಒ ನಲ್ಲಿ ಯಾವುದೇ ಅನುಮೋದನೆಯ ಅಗತ್ಯವಿಲ್ಲದೆ ಸರಿಸುಮಾರು ಶೇ.50 ರಷ್ಟು ಪ್ರಕರಣಗಳಲ್ಲಿ ಉದ್ಯೋಗದಾತರ ಮಟ್ಟದಲ್ಲಿ ಅನುಮೋದಿಸಲಾಗುತ್ತದೆ.

ಈ ಪರಿಷ್ಕರಣೆಯು ವಿವಿಧ ಹಂತಗಳಲ್ಲಿ ಬಾಕಿ ಇರುವ ಸುಮಾರು 3.9 ಲಕ್ಷ ಸದಸ್ಯರಿಗೆ ತಕ್ಷಣವೇ ಪ್ರಯೋಜನವನ್ನು ನೀಡುತ್ತದೆ. ಸ್ವಯಂ ಅನುಮೋದಿಸಬಹುದಾದ ಯಾವುದೇ ಸದಸ್ಯರು ಈಗಾಗಲೇ ಉದ್ಯೋಗದಾತರೊಂದಿಗೆ ಬಾಕಿ ಇರುವ ತಮ್ಮ ವಿನಂತಿಯನ್ನು ಸಲ್ಲಿಸಿದ್ದರೆ, ಸದಸ್ಯರು ಈಗಾಗಲೇ ಸಲ್ಲಿಸಿದ ವಿನಂತಿಯನ್ನು ಅಳಿಸಬಹುದು ಮತ್ತು ಸರಳೀಕೃತ ಪ್ರಕ್ರಿಯೆಯ ಪ್ರಕಾರ ಸ್ವಯಂ ಅನುಮೋದನೆ ನೀಡಬಹುದು. ಹೆಚ್ಚಿನ ಪ್ರಕರಣಗಳನ್ನು ಸದಸ್ಯರೇ ನೇರವಾಗಿ ಸ್ವಯಂ ಅನುಮೋದಿಸಬಹುದು ಅಥವಾ ಕೆಲವು ಆಯ್ದ ಸಂದರ್ಭಗಳಲ್ಲಿ ಉದ್ಯೋಗದಾತರು ಸ್ವಯಂ ಅನುಮೋದಿಸಬಹುದು.

ಇದನ್ನೂ ಓದಿ: VI ನಿಂದ ಹೊಸ ಆಫರ್ - ಮಹಾ ಕುಂಭ ಮೇಳದ ನೇರ ದರ್ಶನ!

ಪ್ರಸ್ತುತ ಸದಸ್ಯರು ಸಲ್ಲಿಸಿದ ಸುಮಾರು ಶೇ.27 ರಷ್ಟು ಕುಂದುಕೊರತೆಗಳು ಸದಸ್ಯರ ಪ್ರೊಫೈಲ್ / ಕೆವೈಸಿ ಸಮಸ್ಯೆಗಳಿಗೆ ಸಂಬAಧಿಸಿವೆ ಮತ್ತು ಪರಿಸ್ಕೃತ ಜೆಡಿ ಕಾರ್ಯವನ್ನು ಪರಿಚಯಿಸುವುದರೊಂದಿಗೆ, ಸದಸ್ಯರು ಸಲ್ಲಿಸುವ ಕುಂದುಕೊರತೆಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.ಆನ್‌ಲೈನ್ ಪ್ರಕ್ರಿಯೆಯಲ್ಲಿನ ಈ ಸರಳೀಕರಣವು ಸದಸ್ಯರ ವಿನಂತಿಗಳನ್ನು ತಕ್ಷಣವೇ ತೆರವುಗೊಳಿಸಲು ಅನುವು ಮಾಡಿಕೊಡುತ್ತದೆ, ದತ್ತಾಂಶ ಸ್ಥಿರತೆಯನ್ನು ಖಚಿತಪಡಿಸುತ್ತದೆ, ದೋಷಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಸದಸ್ಯರಿಗೆ ಪರಿಣಾಮಕಾರಿ ಸೇವಾ ವಿತರಣೆಯನ್ನು ಮಾಡುತ್ತದೆ ಮತ್ತು ಜೀವನವನ್ನು ಸುಲಭಗೊಳಿಸುತ್ತದೆ. ಅದೇ ಸಮಯದಲ್ಲಿ ಅಂತಹ ವಿವರಗಳ ಪರಿಶೀಲನೆಗಾಗಿ ಉದ್ಯೋಗದಾತರ ಕಡೆಯಿಂದ ಹೆಚ್ಚುವರಿ ಕೆಲಸದ ಹೊರೆಯನ್ನು ತಪ್ಪಿಸುವ ಮೂಲಕ, ಸರಳೀಕೃತ ಪ್ರಕ್ರಿಯೆಯು ವ್ಯವಹಾರವನ್ನು ಸುಲಭಗೊಳಿಸುವುದನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News