VIDEO: ಚಾಪರ್ ತುರ್ತು ಲ್ಯಾಂಡಿಂಗ್ ಬಳಿಕ ಕ್ರಿಕೆಟ್ ಆಡಿದ ರಾಹುಲ್ ಗಾಂಧಿ

ಬ್ಯಾಟಿಂಗ್ ಮಾಡಿದ ರಾಹುಲ್ ಗಾಂಧಿ ಕೆಲವು ಆಕ್ರಮಣಕಾರಿ ಡ್ರೈವ್‌ಗಳೊಂದಿಗೆ ತಮ್ಮ ಕ್ರಿಕೆಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿದರು.

Last Updated : Oct 19, 2019, 11:36 AM IST
VIDEO: ಚಾಪರ್ ತುರ್ತು ಲ್ಯಾಂಡಿಂಗ್ ಬಳಿಕ ಕ್ರಿಕೆಟ್ ಆಡಿದ ರಾಹುಲ್ ಗಾಂಧಿ title=
Photo credits: ANI

ರೇವಾರಿ (ಹರಿಯಾಣ): ಹವಾಮಾನ ವೈಪರೀತ್ಯದಿಂದಾಗಿ ಇಲ್ಲಿನ ಕೆಎಲ್‌ಪಿ ಕಾಲೇಜು ಮೈದಾನದಲ್ಲಿ ಚಾಪರ್ ತುರ್ತು ಲ್ಯಾಂಡಿಂಗ್ ಮಾಡಿದ ನಂತರ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ ಸ್ಥಳೀಯ ಹುಡುಗರೊಂದಿಗೆ ಕ್ರಿಕೆಟ್ ಆಡಿದ್ದಾರೆ.

ಮಹೇಂದ್ರಗಢದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡ ಬಳಿಕ ರಾಹುಲ್ ಗಾಂಧಿ ದೆಹಲಿಗೆ ಹಿಂದಿರುಗುತ್ತಿದ್ದಾಗ ಹವಾಮಾನ ವೈಪರೀತ್ಯದಿಂದಾಗಿ ಚಾಪರ್ ತುರ್ತು ಲ್ಯಾಂಡಿಂಗ್ ಆಯಿತು.

ತುರ್ತು ಲ್ಯಾಂಡಿಂಗ್ ಬಳಿಕ ತನ್ನ ಚಾಪರ್‌ನಿಂದ ಕೆಳಗಿಳಿದ ರಾಹುಲ್ ಗಾಂಧಿ ಸ್ಥಳೀಯ ಯುವಕರೊಂದಿಗೆ ಕ್ರಿಕೆಟ್ ಆಡಲು ನಿರ್ಧರಿಸಿದರು. ಬ್ಯಾಟಿಂಗ್ ಮಾಡಿದ ರಾಹುಲ್ ಗಾಂಧಿ ಕೆಲವು ಆಕ್ರಮಣಕಾರಿ ಡ್ರೈವ್‌ಗಳೊಂದಿಗೆ ತಮ್ಮ ಕ್ರಿಕೆಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿದರು.

49 ವರ್ಷದ ನಾಯಕ ನಂತರ ರಸ್ತೆ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದರು. ಅಕ್ಟೋಬರ್ 21 ರಂದು ಹರಿಯಾಣದಲ್ಲಿ ಮತದಾನ ನಡೆಯಲಿದೆ.

(INPUT: ANI)

Trending News