EPF ನಿಂದ ಹಣ ಹಿಂಪಡೆಯುವುದು ಇದೀಗ ಮತ್ತಷ್ಟು ಸುಲಭವಾಗಿದೆ

ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ EPFO, ಮಹಾಮಾರಿ ಕೊವಿಡ್-19 ಪ್ರಕೋಪದ ಹಿನ್ನೆಲೆ ವಿಥ್ ಡ್ರಾ ಕ್ಲೈಮ್ ವಾಡುವ ಸಂದರ್ಭದಲ್ಲಿ EPF ಸದಸ್ಯರು ಯಾವುದೇ ರೀತಿಯ ದಾಖಲೆ ಅಥವಾ ಪ್ರಮಾಣಪತ್ರ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿದೆ.

Last Updated : Jul 12, 2020, 06:55 PM IST
EPF ನಿಂದ ಹಣ ಹಿಂಪಡೆಯುವುದು ಇದೀಗ ಮತ್ತಷ್ಟು ಸುಲಭವಾಗಿದೆ title=

ನವದೆಹಲಿ: ನೌಕರಿಯಲ್ಲಿ ನಿರತ ಜನರಿಗೆ ಸಂತಸದ ಸುದ್ದಿಯೊಂದು ಹೊರಬಂದಿದೆ. ಹೌದು, ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ಪ್ರಕಾರ ಕೊವಿಡ್ 19 ಪ್ರಕೋಪದ ಹಿನ್ನೆಲೆ ವಿಥ್ ಡ್ರಾ ಕ್ಲೈಮ್ ಮಾಡುವ ಸಂದರ್ಭದಲ್ಲಿ EPF ಸದಸ್ಯರು ಯಾವುದೇ ರೀತಿಯ ಪ್ರಮಾಣಪತ್ರ ಅಥವಾ ದಾಖಲೆ ನೀಡಬೇಕಾಗುವ ಅವಶ್ಯಕತೆ ಇಲ್ಲ. ಇಂತಹುದರಲ್ಲಿ ಕೊರೊನಾ ಮಹಾಮಾರಿಯ ಕಾಲದಲ್ಲಿ ಒಂದು ವೇಳೆ ನಿಮಗೆ ಹಣಕಾಸಿನ ಅಗತ್ಯತೆ ಬಿದ್ದರೆ, ಅತ್ಯಂತ ಸುಲಭವಾಗಿ ನೀವು ನಿಮ್ಮ EPF ಖಾತೆಯಿಂದ ಹಣ ಹಿಂಪಡೆಯಬಹುದು.

ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ EPFO, ಮಹಾಮಾರಿ ಕೊವಿಡ್-19 ಪ್ರಕೋಪದ ಹಿನ್ನೆಲೆ ವಿಥ್ ಡ್ರಾ ಕ್ಲೈಮ್ ವಾಡುವ ಸಂದರ್ಭದಲ್ಲಿ EPF ಸದಸ್ಯರು ಯಾವುದೇ ರೀತಿಯ ದಾಖಲೆ ಅಥವಾ ಪ್ರಮಾಣಪತ್ರ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿದೆ. ಇದೇ ವೇಳೆ ಸಾಮಾಜಿಕ ಮಾಧ್ಯಮಗಳ ಮೇಲೆ ನಿರ್ಮಿಸಲಾಗಿರುವ EPFOನ ಅಕ್ರಮ ಹ್ಯಾಂಡಲ್ ಗಳಿಗೆ ಸಬ್ ಸ್ಕ್ರೈಬ್ ಮಾಡದಿರಲು ತನ್ನ ಸದಸ್ಯರಿಗೆ ಸಲಹೆಯನ್ನು ಕೂಡ ಸಂಘಟನೆ ನೀಡಿದೆ. ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಕೇಂದ್ರದ ಮೋದಿ ನೇತೃತ್ವದ ಸರ್ಕಾರ EPFO ಸದಸ್ಯರಿಗೆ ತಮ್ಮ ಪಿಎಫ್ ಖಾತೆಯಿಂದ ಮೂರು ತಿಂಗಳಿಗೆ ವೇತನಕ್ಕೆ ಸಮನಾದ ಮೊತ್ತವನ್ನು ಹಿಂಪಡೆಯಲು ಅನುಮತಿ ನೀಡಿದೆ.

ಆನ್ಲೈನ್ ಮೂಲಕ ಕೂಡ EPF ಟ್ರಾನ್ಸ್ಫರ್ ಮಾಡಬಹುದು
ನೀವು ನಿಮ್ಮ EPFO ಖಾತೆಯಲ್ಲಿರುವ ಹಣವನ್ನು ಆನ್ಲೈನ್ ಮೂಲಕ ಕೂಡ ಟ್ರಾನ್ಸ್ಫರ್ ಮಾಡಬಹುದಾಗಿದೆ. UAN ಬಂದ ಬಳಿಕ ನೌಕರರ ಎಲ್ಲ ಖಾತೆಗಳು ಒಂದೇ ಸ್ಥಾನದಲ್ಲಿ ಇರಲಿವೆ. ಆದರೆ ಹಣ ಮಾತ್ರ ಬೇರೆ ಬೇರೆ ಖಾತೆಗಳಲ್ಲಿ ಇರಲಿದೆ. ಹೀಗಾಗಿ ಇದಕ್ಕಾಗಿ ನೀವು ನಿಮ್ಮ ಹೊಸ ಕಂಪನಿಯ ಜೊತೆಗೆ ನಿಮ್ಮ UAN ಹಂಚಿಕೊಳ್ಳುವುದು ಅಗತ್ಯವಾಗಿದೆ. ಬಳಿಕ ನೀವು ನಿಮ್ಮ ಹೊಸ PF ಖಾತೆಗೆ ನಿಮ್ಮ ಹಳೆ ಖಾತೆಯ ಹಣವನ್ನು ವರ್ಗಾಯಿಸಬಹುದಾಗಿದೆ.

ಹೇಗೆ ವರ್ಗಾಯಿಸಬೇಕು?
- ಮೊದಲು ನೀವು ಇಪಿಎಫ್‌ಒನ ಉನಿಫೈಡ್ ಮೆಂಬರ್ ಪೋರ್ಟಲ್ ಆಗಿರುವ https://unifiedportal-mem.epfindia.gov.in/memberinterface/ ಗೆ ಭೇಟಿ ನೀಡಬೇಕು.  - ಯುನಿವರ್ಸಲ್ ಅಕೌಂಟ್ ಸಂಖ್ಯೆ (ಯುಎಎನ್) ಮತ್ತು ಪಾಸ್‌ವರ್ಡ್ ಬಳಸಿ ಇಲ್ಲಿ ಲಾಗಿನ್ ಮಾಡಿ.
- ಲಾಗಿನ್ ಮಾಡಿದ ನಂತರ, ಆನ್‌ಲೈನ್ ಸೇವೆಗಳಿಗೆ ಹೋಗಿ ಮತ್ತು ಸದಸ್ಯ-ಒನ್ ಇಪಿಎಫ್ ಖಾತೆ ವರ್ಗಾವಣೆ ವಿನಂತಿ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಿಮ್ಮ ಪ್ರಸ್ತುತ ನೇಮಕಾತಿ ವೈಯಕ್ತಿಕ ಮಾಹಿತಿ ಮತ್ತು ಪಿಎಫ್ ಖಾತೆಯನ್ನು ಪರಿಶೀಲಿಸಿ.
- ಗೆಟ್ ಡಿಟೇಲ್ಸ್ ಆಯ್ಕೆಯನ್ನು ಕ್ಲಿಕ್ ಮಾಡಿ. ಹಿಂದಿನ ನೇಮಕಾತಿಯ ಪಿಎಫ್ ಖಾತೆ ವಿವರವು ಪರದೆಯ ಮೇಲೆ ಕಾಣಿಸುತ್ತದೆ.
- ನಿಮ್ಮ ಆನ್‌ಲೈನ್ ಕ್ಲೈಮ್ ಫಾರ್ಮ್ ಅನ್ನು ದೃಢಪಡಿಸಲು ಹಿಂದಿನ ಉದ್ಯೋಗದಾತ ಮತ್ತು ಪ್ರಸ್ತುತ ಉದ್ಯೋಗದಾತರ ನಡುವೆ ಆಯ್ಕೆ ಮಾಡುವ ಆಯ್ಕೆಯನ್ನು ನೀವು ಪಡೆಯುವಿರಿ./
- ಅಧಿಕೃತ ಸಿಗ್ನೇಟರಿ ಹೋಲ್ಡಿಂಗ್ ಡಿಎಸ್ಸಿಯ ಲಭ್ಯತೆಯ ಆಧಾರದ ಮೇಲೆ ನೀವು ಅದನ್ನು ಆರಿಸುತ್ತೀರಿ. ಇಬ್ಬರು ಉದ್ಯೋಗದಾತರಲ್ಲಿ ಯಾರನ್ನಾದರೂ ಆರಿಸಿ ಮತ್ತು ಸದಸ್ಯ ID ಅಥವಾ UAN ಅನ್ನು ಒದಗಿಸಿ.
- ಕೊನೆಯದಾಗಿ ಗೆಟ್ ಒಟಿಪಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ಬರುತ್ತದೆ. ನಂತರ ಆ ಒಟಿಪಿಯನ್ನು ನಮೂದಿಸಿ ಮತ್ತು ಸಲ್ಲಿಸು ಆಯ್ಕೆಯನ್ನು ಕ್ಲಿಕ್ ಮಾಡಿ.
- ಒಟಿಪಿಯನ್ನು ಪರಿಶೀಲಿಸಿದ ನಂತರ, ಹಿಂದಿನ ಕಂಪನಿಯು ಆನ್‌ಲೈನ್ ಹಣ ವರ್ಗಾವಣೆ ಪ್ರಕ್ರಿಯೆಯನ್ನು ಕೋರಲು ವಿನಂತಿಸಲಾಗುತ್ತದೆ.
- ಮುಂದಿನ ಮೂರು ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮೊದಲು ಕಂಪನಿಯು ಅದನ್ನು ವರ್ಗಾಯಿಸುತ್ತದೆ.
- ನಂತರ ಇಪಿಎಫ್‌ಒ ಕ್ಷೇತ್ರ ಅಧಿಕಾರಿ ಅದನ್ನು ಪರಿಶೀಲಿಸುತ್ತಾರೆ.
- ಇಪಿಎಫ್‌ಒ ಅಧಿಕಾರಿಯ ಪರಿಶೀಲನೆಯ ನಂತರವೇ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ.

Trending News