ಉ.ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶ ಯಾವುದೇ ಪರಿಣಾಮ ಬೀರುವುದಿಲ್ಲ- ಯೋಗಿ ಆದಿತ್ಯನಾಥ್

ನೂತನವಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ  ಪ್ರಿಯಾಂಕಾ ಗಾಂಧಿ ವಾದ್ರಾ ಅವರ ರಾಜಕೀಯ ಪ್ರವೇಶ ಉತ್ತರ ಪ್ರದೇಶದ ರಾಜಕೀಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

Last Updated : Mar 16, 2019, 05:50 PM IST
ಉ.ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶ ಯಾವುದೇ ಪರಿಣಾಮ ಬೀರುವುದಿಲ್ಲ- ಯೋಗಿ ಆದಿತ್ಯನಾಥ್ title=

ನವದೆಹಲಿ: ನೂತನವಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ  ಪ್ರಿಯಾಂಕಾ ಗಾಂಧಿ ವಾದ್ರಾ ಅವರ ರಾಜಕೀಯ ಪ್ರವೇಶ ಉತ್ತರ ಪ್ರದೇಶದ ರಾಜಕೀಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

"ಈ ಬಾರಿ ಕಾಂಗ್ರೆಸ್ ಪ್ರಿಯಾಂಕಾ ಗಾಂಧಿಯವರನ್ನು ಪೂರ್ವ ಉತ್ತರ ಪ್ರದೇಶ ಭಾಗದ ಕಾರ್ಯದರ್ಶಿಯನ್ನಾಗಿ ಮಾಡಿದೆ.ಇದು ಆ ಪಕ್ಷದ ಆಂತರಿಕ ವಿಷಯವಾಗಿದೆ.ಹಿಂದೆ ಅವರು ಕಾಂಗ್ರೆಸ್ ಗಾಗಿ ಪ್ರಚಾರ ಮಾಡಿದ್ದರು.ಈ ಬಾರಿ ಅದು ಬಿಜೆಪಿಗೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ" ಎಂದು ಯೋಗಿ ಆದಿತ್ಯನಾಥ್ ಹೇಳಿದರು.

ಅಲ್ಲದೆ ಬಿಎಸ್ಪಿ ಹಾಗೂ ಎಸ್ಪಿಯ ಚುನಾವಣಾ ಮೈತ್ರಿಕೂಟವು ಸಹಿತ ಬಿಜೆಪಿಗೆ ಯಾವುದೇ ಸವಾಲೋನ್ನೋಡ್ದುವುದಿಲ್ಲ. ಅದು ಈಗಾಗಲೇ ವಿವಾದದಲ್ಲಿ ಸಿಲುಕಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.ಪ್ರಿಯಾಂಕಾ ಗಾಂಧಿ 2019 ರ ಲೋಕಸಭೆ ಚುನಾವಣಾ ಪ್ರಚಾರವನ್ನು ಮಾರ್ಚ್ 18 ರಂದು ಪ್ರಯಾಗ್ ರಾಜ್ ನಿಂದ ಆರಂಭಿಸಲಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಬಂದಿದೆ.

Trending News