Priyanka Gandhi: ಪ್ರಿಯಾಂಕಾ ಗಾಂಧಿಗೆ ಟೀ ಎಸ್ಟೇಟ್​ನಲ್ಲಿ ಕೆಲಸ! ವೈರಲ್​ ಆಯ್ತು ವಿಡಿಯೋ

ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ಅಸ್ಸಾಂಗೆ ಎರಡು ದಿನಗಳ ಭೇಟಿ ನೀಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ.

Last Updated : Mar 2, 2021, 03:37 PM IST
  • ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ಅಸ್ಸಾಂಗೆ ಎರಡು ದಿನಗಳ ಭೇಟಿ ನೀಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ.
  • ರಾಹುಲ್ ಗಾಂಧಿಯಂತೆ ಕಾರ್ಮಿಕರ ಜೊತೆ ಕೈ ಜೋಡಿಸಿದ್ದಾರೆ. ಪ್ರಿಯಾಂಕಾ ಅವರು ಭೇಟಿ ವೇಳೆ ಕಾರ್ಯಕರ್ತರೊಂದಿಗೆ ಸಂವಾದ.
  • ಪ್ರಿಯಾಂಕಾ ಗಾಂಧಿ ವಾದ್ರಾ ಬುಟ್ಟಿ ಹಿಡಿದು ಚಹಾ ಕಿತ್ತ ಫೋಟೋ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
Priyanka Gandhi: ಪ್ರಿಯಾಂಕಾ ಗಾಂಧಿಗೆ ಟೀ ಎಸ್ಟೇಟ್​ನಲ್ಲಿ ಕೆಲಸ! ವೈರಲ್​ ಆಯ್ತು ವಿಡಿಯೋ title=

ಅಸ್ಸಾಂ: ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ಅಸ್ಸಾಂಗೆ ಎರಡು ದಿನಗಳ ಭೇಟಿ ನೀಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಸಹೋದರ ರಾಹುಲ್ ಗಾಂಧಿಯಂತೆ ಕಾರ್ಮಿಕರ ಜೊತೆ ಕೈ ಜೋಡಿಸಿದ್ದಾರೆ. ಪ್ರಿಯಾಂಕಾ ಅವರು ಭೇಟಿ ವೇಳೆ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ, ಬುಟ್ಟಿ ಹಿಡಿದು ಚಹಾ ಕಿತ್ತ ಫೋಟೋ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಹಿಂದೂ ಮಹಾಸಾಗರದಲ್ಲಿ ತಮ್ಮ ಸಹೋದರ ರಾಹುಲ್ ಗಾಂಧಿ(Rahul Gandhi) ತಮಿಳುನಾಡಿನ ಮೀನುಗಾರರೊಂದಿಗೆ ಈಜುತ್ತಿರುವ ವಿಡಿಯೋ ವೈರಲ್ ಆದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.

Indian Army Recruitment : ಆರ್ಮಿಯಲ್ಲಿ ಸ್ಟೆನೋಗ್ರಾಫರ್ ಹುದ್ದೆಗೆ ನೇಮಕಾತಿ, ಇಲ್ಲಿದೆ ಅಗತ್ಯ ಮಾಹಿತಿ.

ಚಹಾ ತೋಟದಲ್ಲಿ, ಪ್ರಿಯಾಂಕಾ(Priyanka Gandhi) ಅವರು ಕಾರ್ಯಕರ್ತರೊ೦ದಿಗೆ ಸಂವಾದ ನಡೆಸಿ, 'ಅವರ ಚಿಂತೆಗಳು ಮತ್ತು ಆತಂಕಗಳು, ಅವರ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳನ್ನು ಅರ್ಥಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

Petrol-Diesel Price: ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ, ಶೀಘ್ರವೇ ಸರ್ಕಾರದಿಂದ ಕಡಿವಾಣ

ಚಹಾ ತೋಟ(Tea Estate)ಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಕಾರ್ಯಕರ್ತರ ಪ್ರೀತಿ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

ರಾಜ್ಯಸಭಾ ಮತ್ತು ಲೋಕಸಭಾ ಚಾನೆಲ್ ವಿಲೀನ...ಹೊಸ ಚಾನೆಲ್ ನ ಹೆಸರೇನು ಗೊತ್ತೇ?

'ಟೀ ತೋಟದ ಕಾರ್ಮಿಕರ ಬದುಕು ಸತ್ಯ ಮತ್ತು ಸರಳತೆಯಿಂದ ತುಂಬಿದ್ದು, ಅವರ ಶ್ರಮ ದೇಶಕ್ಕೆ ಅಮೂಲ್ಯವಾಗಿದೆ. ಇಂದು ಅವರ ಕೆಲಸ ಮತ್ತು ಕುಟುಂಬ(Family)ದ ಯೋಗಕ್ಷೇಮದ ಬಗ್ಗೆ ಅವರೊಂದಿಗೆ ಮಾತನಾಡಿದೆ ಮತ್ತು ಅವರ ಜೀವನದ ಕಷ್ಟಗಳನ್ನು ಅರಿತುಕೊಂಡೆ. ಅವರಿಂದ ನನಗೆ ದೊರೆತ ಪ್ರೀತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ' ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ.

'ಚುನಾವಣಾ ಚತುರ' ಪ್ರಶಾಂತ್ ಕಿಶೋರ್ ಗೆ ಕ್ಯಾಬಿನೆಟ್ ರ್ಯಾಂಕ್ ಹುದ್ದೆ ನೀಡಿದ ಪಂಜಾಬ್ ಸಿಎಂ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News