ಬಿಹಾರದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಪ್ರಿನ್ಸಿಪಾಲ್ ಅತ್ಯಾಚಾರ

 ಪಾಟ್ನಾದ ಫುಲ್ವಾರಿ ಶರೀಫ್ ಖಾಸಗಿ ಶಾಲೆಯ ಪ್ರಿನ್ಸಿಪಾಲ್ ಮತ್ತು ಕ್ಲರ್ಕ್  5 ನೇ ತರಗತಿಯ 5ನೇ ತರಗತಿ ವಿದ್ಯಾರ್ಥಿನಿಯನ್ನು ಒಂಬತ್ತು ತಿಂಗಳ ಕಾಲ ಶಾಲಾ ಆವರಣದಲ್ಲಿ ಅತ್ಯಾಚಾರ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ.

Last Updated : Sep 20, 2018, 12:31 PM IST
ಬಿಹಾರದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಪ್ರಿನ್ಸಿಪಾಲ್ ಅತ್ಯಾಚಾರ title=

ನವದೆಹಲಿ: ಪಾಟ್ನಾದ ಫುಲ್ವಾರಿ ಶರೀಫ್ ಖಾಸಗಿ ಶಾಲೆಯ ಪ್ರಿನ್ಸಿಪಾಲ್ ಮತ್ತು ಕ್ಲರ್ಕ್  5 ನೇ ತರಗತಿಯ 5ನೇ ತರಗತಿ ವಿದ್ಯಾರ್ಥಿನಿಯನ್ನು ಒಂಬತ್ತು ತಿಂಗಳ ಕಾಲ ಶಾಲಾ ಆವರಣದಲ್ಲಿ ಅತ್ಯಾಚಾರ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ.

ವಿದ್ಯಾರ್ಥಿನಿ ಶಾಲೆಯಿಂದ ಹಿಂದಿರುಗಿ ವಾಂತಿ ಮಾಡಲು ಪ್ರಾರಂಭಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.ಈ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆಕೆ ಗರ್ಭಿಣಿ ಎಂದು ಹೇಳಲಾಗಿದೆ. 

ಈ ಸಂಗತಿ ತಿಳಿದ ನಂತರ ವಿದ್ಯಾರ್ಥಿನಿಯನ್ನು ನಂತರ ಪ್ರಿನ್ಸಿಪಾಲ್ ಮತ್ತು ಗುಮಾಸ್ತರಿಂದ ಲೈಂಗಿಕವಾಗಿ ಬಳಸಿಕೊಂಡಿದ್ದರೆಂದು ಆಕೆ ಪೋಷಕರ ಎದುರು ಬಾಯಿಬಿಟ್ಟಿದ್ದಾಳೆ. ಇದಾದ ನಂತರ ಆಕೆಯ ಪೋಷಕರು ಪೊಲೀಸರಿಗೆ ದೂರುಸಲ್ಲಿಸಿದ್ದಾರೆ.

ಪಾಟ್ನಾ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ (ಎಸ್ಎಸ್ಪಿ) ಮನು ಮಹಾರಾಜ್ ಈ ಘಟನೆಯನ್ನು ದೃಢಪಡಿಸಿದ್ದು ಮತ್ತು ಈ ಘಟನೆಯ ವಿಚಾರವಾಗಿ  ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

Trending News