ಪ್ರಧಾನಿ ಮೋದಿಯನ್ನು 'ಭಾರತದ ಪಿತಾಮಹ' ಎಂದು ಕರೆಯಬಹುದು: ಡೊನಾಲ್ಡ್ ಟ್ರಂಪ್

ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೋದಿ ಅವರು ಭಾರತವನ್ನು ಒಗ್ಗೂಡಿಸಿದ್ದಾರೆ. ನಾವು ಅವರನ್ನು 'ಭಾರತದ ಪಿತಾಮಹ' ಎಂದು ಕರೆಯುತ್ತೇವೆ ಎಂದು ಹೇಳಿದ್ದಾರೆ.

Last Updated : Sep 25, 2019, 10:56 AM IST
ಪ್ರಧಾನಿ ಮೋದಿಯನ್ನು 'ಭಾರತದ ಪಿತಾಮಹ' ಎಂದು ಕರೆಯಬಹುದು: ಡೊನಾಲ್ಡ್ ಟ್ರಂಪ್ title=

ನ್ಯೂಯಾರ್ಕ್: ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೋದಿ ಅವರು ಭಾರತವನ್ನು ಒಗ್ಗೂಡಿಸಿದ್ದಾರೆ. ನಾವು ಅವರನ್ನು 'ಭಾರತದ ಪಿತಾಮಹ' ಎಂದು ಕರೆಯುತ್ತೇವೆ ಎಂದು ಹೇಳಿದ್ದಾರೆ. ಯುಎನ್‌ಜಿಎ ಸಭೆಯಲ್ಲಿ ಮಾತನಾಡಿದ ಟ್ರಂಪ್, "ಪ್ರಧಾನಿ ಮೋದಿಯವರೊಂದಿಗೆ ನನ್ನ ಕೆಮಿಸ್ಟ್ರಿ ತುಂಬಾ ಚೆನ್ನಾಗಿದೆ" ಎಂದಿದ್ದಾರೆ.

ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯ (ಯುಎನ್‌ಜಿಎ) 74 ನೇ ಅಧಿವೇಶನದ ಹೊರತಾಗಿ ಎರಡನೇ ಬಾರಿಗೆ ಭೇಟಿಯಾದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಅಮೆರಿಕನ್ ರಾಕ್ 'ಎನ್' ರೋಲ್ ದಂತಕಥೆ ಎಲ್ವಿಸ್ ಪ್ರೀಸ್ಲಿಯೊಂದಿಗೆ ಹೋಲಿಸಿದ್ದಾರೆ.

ಹೌಡಿ, ಮೋದಿ! ನಲ್ಲಿ ಪ್ರಧಾನಿ ಮೋದಿಯವರಿಗೆ ಬ್ಲಾಕ್ಬಸ್ಟರ್ ಸ್ವಾಗತ ದೊರೆತ ನಂತರ ಈ ಹೇಳಿಕೆ ಬಂದಿದೆ. ಹೂಸ್ಟನ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಟ್ರಂಪ್ ಕೂಡ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಆಯೋಜಿಸಿದ್ದ ಎನ್‌ಆರ್‌ಜಿ ಕ್ರೀಡಾಂಗಣದಲ್ಲಿ ಪಿಎಂ ಮೋದಿಯವರು 50,000 ಕ್ಕೂ ಹೆಚ್ಚು ಜನರಿಂದ ಸಂಪೂರ್ಣ ಬೆಂಬಲ ಪಡೆದರು.

"ಅವರು ಮಹಾನ್ ವ್ಯಕ್ತಿ ಮತ್ತು ಶ್ರೇಷ್ಠ ನಾಯಕ ... ನನಗೆ ನೆನಪಿದೆ, ಮೊದಲಿಗೆ ಭಾರತ ಹರಿದು ಹಂಚಿಹೋಗಿತ್ತು. ದೇಶದಲ್ಲಿ ಜಗಳ, ಒಡಕುಗಳಿದ್ದವು. ಪ್ರಧಾನಮಂತ್ರಿ ನರೇಂದ್ರ ಮೋದಿ ಒಬ್ಬ ತಂದೆಯಂತೆ ಎಲ್ಲವನ್ನೂ ಒಂದುಗೂಡಿಸಿದರು. ಬಹುಶಃ ಅವರು ಭಾರತದ ಪಿತಾಮಹನಂತೆ' ಎಂದು ಟ್ರಂಪ್ ಹೇಳಿದರು. "ನಾವು ಅವರನ್ನು ಭಾರತದ ಪಿತಾಮಹ ಎಂದು ಕರೆಯುತ್ತೇವೆ. ಅವರು ವಿಷಯಗಳನ್ನು ಒಟ್ಟಿಗೆ ತಂದಿದ್ದಾರೆ. ಅವರು ದೊಡ್ಡ ಕೆಲಸ ಮಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಒಬ್ಬರನ್ನೊಬ್ಬರು ಅರಿತುಕೊಂಡ ಬಳಿಕ ದ್ವಿಪಕ್ಷೀಯ ಮಾತುಕತೆ ನಡೆಸುತ್ತಾರೆಂದು ನಾನು ನಂಬಿದ್ದೇನೆ. ಬಳಿಕ ಸಾಕಷ್ಟು ಒಳ್ಳೆಯ ಸಂಗತಿಗಳನ್ನು ನೋಡಬಹುದು ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದರು.

Trending News