ಹಳೆಯ ಪಠ್ಯಕ್ರಮದಂತೆಯೇ ನಡೆಯಲಿದೆ ನೀಟ್ ಪಿಜಿ ಪರೀಕ್ಷೆ: ಸುಪ್ರೀಂಗೆ ಕೇಂದ್ರದ ಸ್ಪಷ್ಟನೆ

 ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ್ದ ಹೊಸ ಪರೀಕ್ಷಾ ಮಾದರಿಯನ್ನು ಮುಂದಿನ ವರ್ಷ 2022-23ರಿಂದ ಜಾರಿಗೆ ತರಲಾಗುವುದು ಎಂದು ಕೇಂದ್ರವು ಸ್ಪಷ್ಟನೆ ನೀಡಿದೆ.   

Written by - Puttaraj K Alur | Last Updated : Oct 6, 2021, 01:05 PM IST
  • ಪ್ರಸಕ್ತ ವರ್ಷದ ನೀಟಿ ಪಿಜಿ ಪರೀಕ್ಷೆಯು ಹಳೆಯ ಪರೀಕ್ಷಾ ಮಾದರಿಯಂತೆ ನಡೆಯಲಿದೆ
  • ಹೊಸ ಮಾದರಿಯಲ್ಲಿ ಪರೀಕ್ಷೆ ನಡೆಸುವ NEB ನಿರ್ಧಾರವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು
  • ನೀಟ್ ಪಿಜಿ ಪರೀಕ್ಷೆ ಕುರಿತು ಸುಪ್ರೀಂಕೋರ್ಟ್ ಗೆ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ
ಹಳೆಯ ಪಠ್ಯಕ್ರಮದಂತೆಯೇ ನಡೆಯಲಿದೆ ನೀಟ್ ಪಿಜಿ ಪರೀಕ್ಷೆ: ಸುಪ್ರೀಂಗೆ ಕೇಂದ್ರದ ಸ್ಪಷ್ಟನೆ title=
ಹಳೆ ಪಠ್ಯಕ್ರಮದಲ್ಲಿಯೇ ನಡೆಯಲಿದೆ ನೀಟ್ ಪಿಜಿ ಪರೀಕ್ಷೆ

ನವದೆಹಲಿ: ಪ್ರಸಕ್ತ ವರ್ಷದ ನೀಟ್ ಸೂಪರ್ ಸ್ಪೆಷಾಲಿಟಿ (Post-graduate NEET-SS 2021) ಪರೀಕ್ಷೆಯು ಹಳೆಯ ಪರೀಕ್ಷಾ ಮಾದರಿಯಂತೆ ನಡೆಯಲಿದೆ ಎಂದು ಕೇಂದ್ರ ಸರ್ಕಾರವು ಬುಧವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಹೊಸ ಪರೀಕ್ಷಾ ಮಾದರಿಯನ್ನು ಮುಂದಿನ ವರ್ಷ 2022-23ರಿಂದ ಜಾರಿಗೆ ತರಲಾಗುವುದು ಎಂದು ಕೇಂದ್ರವು ಸ್ಪಷ್ಟನೆ ನೀಡಿದೆ.   

ಕೇಂದ್ರದ ಈ ಹೇಳಿಕೆಯನ್ನು ಸುಪ್ರೀಂಕೋರ್ಟ್(Supreme Court) ದಾಖಲಿಸಿಕೊಂಡಿದ್ದು, 41 ವೈದ್ಯರ ಗುಂಪು ಸಲ್ಲಿಸಿದ್ದ ಅರ್ಜಿಯ ಆಧಾರದ ಮೇಲೆ NEET SSಗೆ ಸಂಬಂಧಿಸಿದಂತೆ ಬಾಕಿ ಇರುವ ಎಲ್ಲಾ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿದೆ. ಈ ಹಿನ್ನೆಲೆ 2018ರಿಂದ ಬಳಸಿದ ಹಳೆಯ ಮಾದರಿಯ ಆಧಾರದ ಮೇಲೆ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: LPG Price Hike: ಹಬ್ಬದ ಮೊದಲು ಹಣದುಬ್ಬರದ ಹೊಡೆತ! ಮತ್ತೆ LPG ಸಿಲಿಂಡರ್ ಬೆಲೆ ಏರಿಕೆ

ಸ್ನಾತಕೋತ್ತರ ಪದವಿ ವೈದ್ಯರಾದ ಅರ್ಜಿದಾರರು ನೀಟ್-ಎಸ್‌ಎಸ್‌ ಪರೀಕ್ಷೆ(Post-graduate NEET-SS Exam)ಯಲ್ಲಿ ತೇರ್ಗಡೆಯಾಗಿ ಸೂಪರ್ ಸ್ಪಷ್ಟಲಿಸ್ಟ್ ಅರ್ಹತೆ ಪಡೆಯುವ ಆಕಾಂಕ್ಷೆ ಹೊಂದಿದ್ದಾರೆ. ಜುಲೈ 23ರಂದು ನೀಟ್ ಎಸ್‌ಎಸ್‌ ಪರೀಕ್ಷೆಗೆ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಆಗಸ್ಟ್ 31 ರಂದು ನೀಟ್-ಎಸ್‌ಎಸ್ ನಡೆಸುವ ರಾಷ್ಟ್ರೀಯ ಪರೀಕ್ಷಾ ಮಂಡಳಿ (NEB) ಪರೀಕ್ಷಾ ಮಾದರಿಯಲ್ಲಿ ಬದಲಾವಣೆ ಘೋಷಿಸಿದೆ ಎಂದು ವೈದ್ಯರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು. ಪರೀಕ್ಷೆಯು ನವೆಂಬರ್ 13 ಮತ್ತು 14 ರಂದು ನಡೆಯಬೇಕಿತ್ತು. ಹಳೆಯ ಮಾದರಿಯಂತೆ ಪರೀಕ್ಷೆಯನ್ನು ನಡೆಸಲು ಕೇಂದ್ರವು ಎರಡು ತಿಂಗಳುಗಳ ಕಾಲಾವಕಾಶವನ್ನು ಕೋರಿದೆ.

ಇದನ್ನೂ ಓದಿ: Renewal Of Car Registration: ಹಳೆಯ ಕಾರಿನ ನೋಂದಣಿ ನವೀಕರಣ ತುಂಬಾ ದುಬಾರಿ

ಮುಂದಿನ ವರ್ಷ ಜನವರಿ 10, 11ರಂದು ನೀಟ್ ಎಸ್ಎಸ್ 2021 ಪರೀಕ್ಷೆ ನಡೆಯಲಿದೆ. ಡಿಎಂ (ಡಾಕ್ಟರೇಟ್ ಆಫ್ ಮೆಡಿಸಿನ್), ಎಮ್‌ಸಿಎಚ್ (ಮಾಸ್ಟರ್ ಆಫ್ ಸರ್ಜರಿ) ಮತ್ತು DrNB (ರಾಷ್ಟ್ರೀಯ ಮಂಡಳಿಯ ಡಾಕ್ಟರೇಟ್) ಗೆ 4,200 ಸೀಟುಗಳಿಗೆ ಪ್ರವೇಶಕ್ಕಾಗಿ ಪರೀಕ್ಷೆ ನಡೆಯಲಿದೆ. ನ್ಯಾಯಾಧೀಶರಾದ ಧನಂಜಯ ವೈ ಚಂದ್ರಚೂಡ್, ವಿಕ್ರಮ್ ನಾಥ್ ಮತ್ತು ಬಿವಿ ನಾಗರತ್ನ ಅವರ ಪೀಠವು ಈ ಆದೇಶವನ್ನು ಅಂಗೀಕರಿಸುವಾಗ ಹೊಸ ಪರೀಕ್ಷಾ ಮಾದರಿಯ ಸಿಂಧುತ್ವಕ್ಕೆ ವಿರುದ್ಧವಾಗಿ ಪ್ರಸ್ತಾಪಿಸಲಾದ ಎಲ್ಲಾ ಸಮಸ್ಯೆಗಳು ಸವಾಲಿಗೆ ಮುಕ್ತವಾಗಿರುತ್ತವೆ ಎಂದು ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News