ಕಡಬ ಹಳೆಸ್ಟೇಷನ್ ಕೆರೆಯ ನೀರಿನಿಂದ ರಸ್ತೆ ಮುಳುಗಡೆ ಮನೆಯಿಂದ ಹೊರ ಹೋಗಲು ಕುಟುಂಬದವರ ಪರದಾಟ... ಅಧಿಕಾರಿಗಳು ಇತ್ತ ಗಮನಹರಿಸುವರೇ?

Rain In Kadaba: ಹಳೆಸ್ಟೇಷನ್ ನಿವಾಸಿ ಪೊಡಿಯ ಎಂಬವರ ಕುಟುಂಬ ಈ ಸಮಸ್ಯೆ ಗೆ ಸಿಳುಕಿದ್ದು ಸಂಬಂಧಪಟ್ಟವರು ಕೂಡಲೇ ಗಮನಹರಿಸಬೇಕಾಗಿದೆ. 

Written by - Zee Kannada News Desk | Last Updated : Jul 5, 2024, 07:59 PM IST
  • ಕಡಬ ಹಳೆಸ್ಟೇಷನ್ ಕೆರೆಯ ನೀರಿನಿಂದ ರಸ್ತೆ ಮುಳುಗಡೆ
  • ಮನೆಯಿಂದ ಹೊರ ಹೋಗಲು ಕುಟುಂಬದವರ ಪರದಾಟ
  • ಅಧಿಕಾರಿಗಳು ಇತ್ತ ಗಮನಹರಿಸುವರೇ?
ಕಡಬ ಹಳೆಸ್ಟೇಷನ್ ಕೆರೆಯ ನೀರಿನಿಂದ ರಸ್ತೆ ಮುಳುಗಡೆ ಮನೆಯಿಂದ ಹೊರ ಹೋಗಲು ಕುಟುಂಬದವರ ಪರದಾಟ... ಅಧಿಕಾರಿಗಳು ಇತ್ತ ಗಮನಹರಿಸುವರೇ? title=

ಕಡಬ: ಕುಟ್ರುಪಾಡಿ ಗ್ರಾಮದ ವ್ಯಾಪ್ತಿಗೆ ಬರುವ ಕಡಬ ಹಳೇಸ್ಟೇಷನ್ ಕೆರೆಯಲ್ಲಿ ನೀರು ತುಂಬಿ ಸಮೀಪ ಇರುವ ರಸ್ತೆಗೆ ನೀರು ನುಗ್ಗಿರುವುದರಿಂದ ದಲಿತ ಕುಟುಂಬವೊಂದು ಮನೆಯಿಂದ ಹೊರಹೋಗಲು ಕಷ್ಟ ಪಡುವಂತಾಗಿದೆ.

ಹಳೆಸ್ಟೇಷನ್ ನಿವಾಸಿ ಪೊಡಿಯ ಎಂಬವರ ಕುಟುಂಬ ಈ ಸಮಸ್ಯೆ ಗೆ ಸಿಳುಕಿದ್ದು ಸಂಬಂಧಪಟ್ಟವರು ಕೂಡಲೇ ಗಮನಹರಿಸಬೇಕಾಗಿದೆ. ಹೆಚ್ಚಿನ ಮಳೆಯಾದಾಗ ಮನೆಗೆ ನೀರು ನುಗ್ಗುವ ಸಂಭವವೂ ಇದೆ. ಈ ಮನೆಯಿಂದ ದಿನನಿತ್ಯ ಸಣ್ಣ ಮಕ್ಕಳು ಶಾಲೆಗೆ ಹೋಗುತ್ತಿದ್ದು, ಮಕ್ಕಳ ತಾಯಿಯೂ ಅಪಾಯಕಾರಿ ರೀತಿಯಲ್ಲಿ ನೀರಿನಲ್ಲಿ ಕೊಂಡೊಯ್ಯುತ್ತಿರುವುದು ಕಂಡು ಬಂದಿದೆ. 

ಇದನ್ನೂ ಓದಿ : ವಸತಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು: ಮುಖ್ಯಮಂತ್ರಿ ಸಿದ್ದರಾಮಯ್ಯ 

ಸ್ವಲ್ಪ ಹೆಚ್ಚು ಕಮ್ಮಿ ಆದರೂ ದೊಡ್ಡ ತೊಂದರೆ ಆಗಲಿದೆ. ಈ ಕೆರೆಯಿಂದ ಮೋರಿ ಹಾಕಿ ನೀರನ್ನು ಹೊರಗಡೆ ಬಿಡಲಾಗುತ್ತಿದ್ದರೂ ಸರಗಾವಾಗಿ ನೀರು ಹೋಗದೆ ಇರುವುದರಿಂದ ದೊಡ್ಡ ಮಟ್ಟದ ನೀರು ಸಂಗ್ರಾಹವಾಗಿದೆ. 

ಜು.5 ರಂದು ಕಡಬ ಸಮುದಾಯ ಕೇಂದ್ರದ ಆರೋಗ್ಯ ಸಹಾಯಕಿ ಹಾಗೂ ಆಶಾ ಕಾರ್ಯಕರ್ತೆ ಮನೆ ಭೇಟಿ ಗೆ ಹೋಗುವ ಸಂಧರ್ಭದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಅವರಿಗೆ ಆ ಮನೆಯನ್ನು ಸಂಪರ್ಕ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಕುಮಾರಸ್ವಾಮಿ ಒಬ್ಬ ಹುಚ್ಚ, ಚಿಕಿತ್ಸೆ ಪಡೆಯುವುದು ಉತ್ತಮ: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News