ಲಕ್ನೋದಿಂದ ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಕಣಕ್ಕೆ

ಇತ್ತೀಚಿಗಷ್ಟೇ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಶತ್ರುಘ್ನ ಸಿನ್ಹಾ ಅವರ ಪತ್ನಿ ಪೂನಂ ಸಿನ್ಹಾ ಗುರುವಾರದಂದು ಲಕ್ನೋ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

Last Updated : Apr 18, 2019, 04:45 PM IST
ಲಕ್ನೋದಿಂದ ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಕಣಕ್ಕೆ title=

ನವದೆಹಲಿ: ಇತ್ತೀಚಿಗಷ್ಟೇ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಶತ್ರುಘ್ನ ಸಿನ್ಹಾ ಅವರ ಪತ್ನಿ ಪೂನಂ ಸಿನ್ಹಾ ಗುರುವಾರದಂದು ಲಕ್ನೋ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಈಗ ಅವರು ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ಅಭ್ಯರ್ಥಿಯಾಗಿ ಲಕ್ನೋ ದಿಂದ ಸ್ಪರ್ಧಿಸಲಿದ್ದಾರೆ.ಇವರಿಗೆ ಕಾಂಗ್ರೆಸ್ ಪಕ್ಷವು ಕೂಡ ಬಾಹ್ಯ ಬೆಂಬಲ ನೀಡಲಿದೆ ಎನ್ನಲಾಗುತ್ತಿದೆ.ಲಕ್ನೋ ಕ್ಷೇತ್ರವು ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರು ಸ್ಪರ್ಧಿಸುತ್ತಿರುವ ಪ್ರಬಲ ಕ್ಷೇತ್ರವಾಗಿದ್ದು. ಈ ಹಿನ್ನಲೆಯಲ್ಲಿ ಈಗ ಮೈತ್ರಿಕೂಟದ ಅಭ್ಯರ್ಥಿಯಾಗಿ ಪೂನಂ ಅವರನ್ನು ಕಣಕ್ಕೆ ಇಳಿಸಲಾಗಿದೆ.ಉತ್ತರಪ್ರದೇಶದಲ್ಲಿ ಎಸ್ಪಿಗೆ 37 ಸ್ಥಾನಗಳು, ಬಿಎಸ್ಪಿಗೆ 38, ಆರ್ಎಲ್ಡಿಗೆ 3 ಸ್ಥಾನಗಳನ್ನು ಮೈತ್ರಿಕೂಟದಲ್ಲಿ ಹಂಚಿಕೆ ಮಾಡಿಕೊಳ್ಳಲಾಗಿದೆ. 

1991 ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಲಕ್ನೋದಿಂದ ಗೆಲ್ಲುವು ಮೂಲಕ ಮೊದಲ ಬಾರಿಗೆ ಬಿಜೆಪಿ ಇಲ್ಲಿ ಗೆಲುವು ಸಾಧಿಸಿತ್ತು.ವಾಜಪೇಯಿ ಈ ಕ್ಷೇತ್ರವನ್ನು 1991 ರಿಂದ 2009ರವರೆಗೆ ಸತತ ಐದು ಬಾರಿ ಪ್ರತಿನಿಧಿಸಿದ್ದರು.ಇದಾದ ನಂತರ 2009 ರಲ್ಲಿ ಲಾಲ್ಜಿ ಟಂಡನ್ ಮತ್ತು  2014 ರಲ್ಲಿ ರಾಜ್ ನಾಥ್ ಸಿಂಗ್ ಈ ಸ್ಥಾನವನ್ನು ಗೆದ್ದುಕೊಂಡಿದ್ದರು.ಹೀಗಾಗಿ ಲಕ್ನೋ ಕ್ಷೇತ್ರ 1991 ರಿಂದ ಬಿಜೆಪಿಯ ಭದ್ರಕೋಟೆಯಾಗಿದೆ.
 

Trending News