Pollution: ಹೆಚ್ಚುತ್ತಿರುವ ವಾಯುಮಾಲಿನ್ಯ, ನೋಯ್ಡಾದಲ್ಲಿ ವಾಹನ ಪ್ರವೇಶಕ್ಕೆ ನಿಷೇಧ!

ಹೆಚ್ಚುತ್ತಿರುವ ಮಾಲಿನ್ಯದ ಕಾರಣ ನೋಯ್ಡಾದಲ್ಲಿ Grape-4 ಜಾರಿಗೊಳಿಸಲಾಗಿದೆ. ನೋಯ್ಡಾದಲ್ಲಿ ಡೀಸೆಲ್ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

Written by - Puttaraj K Alur | Last Updated : Nov 5, 2022, 08:10 AM IST
  • ಉತ್ತರಪ್ರದೇಶದ ನೋಯ್ಡಾದಲ್ಲಿ ಮಾಲಿನ್ಯದ ಮಟ್ಟವು ತೀವ್ರ ಹದಗೆಟ್ಟಿದೆ
  • ಎಲ್ಲಾ ನಿರ್ಮಾಣ ಕಾರ್ಯಗಳನ್ನು ನಿಷೇಧಿಸಿ ನೋಯ್ಡಾ ಪ್ರಾಧಿಕಾರದ ಆದೇಶ
  • Euro 6/VI ಎಂಜಿನ್ ವಾಹನ ಹೊರತುಪಡಿಸಿ ಎಲ್ಲಾ ವಾಹನಗಳ ಪ್ರವೇಶಕ್ಕೆ ನಿಷೇಧ
Pollution: ಹೆಚ್ಚುತ್ತಿರುವ ವಾಯುಮಾಲಿನ್ಯ, ನೋಯ್ಡಾದಲ್ಲಿ ವಾಹನ ಪ್ರವೇಶಕ್ಕೆ ನಿಷೇಧ! title=
ನೋಯ್ಡಾದಲ್ಲಿ ಹದಗೆಟ್ಟ ವಾಯುಮಾಲಿನ್ಯ

ನವದೆಹಲಿ: ದೆಹಲಿಯ ಪಕ್ಕದಲ್ಲಿರುವ ನೋಯ್ಡಾದಲ್ಲಿ ಮಾಲಿನ್ಯದ ಮಟ್ಟವು ತೀವ್ರ ಹದಗೆಟ್ಟಿದೆ. ಏತನ್ಮಧ್ಯ ಮಾಲಿನ್ಯವನ್ನು ಕಡಿಮೆ ಮಾಡಲು ಪ್ರಮುಖ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ನೋಯ್ಡಾ ಪ್ರಾಧಿಕಾರವು ನೋಯ್ಡಾದಲ್ಲಿ ಎಲ್ಲಾ ನಿರ್ಮಾಣ ಕಾರ್ಯಗಳನ್ನು ನಿಷೇಧಿಸಿದೆ. ಇದಲ್ಲದೆ ನೋಯ್ಡಾದಲ್ಲಿ ಅಗತ್ಯ ಸೇವೆಗಳಲ್ಲಿ ಓಡುವ ಡೀಸೆಲ್ ವಾಹನ ಹೊರತುಪಡಿಸಿ ಎಲ್ಲಾ ರೀತಿಯ ಡೀಸೆಲ್ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಡೀಸೆಲ್ ವಾಹನಗಳಿಗೆ ಮಾತ್ರ ವಿನಾಯಿತಿ ನೀಡಲಾಗುತ್ತದೆ, ಅದರ ಯುರೋ ಸಿಕ್ಸ್(Euro 6/VI) ಎಂಜಿನ್ ಹೊಂದಿರುವ ವಾಹನಗಳಿಗೆ ಮಾತ್ರ ಅವಕಾಶವಿದೆ.

ನೋಯ್ಡಾದಲ್ಲಿ ನಿರ್ಮಾಣ ಕಾರ್ಯ(Construction Work) ನಿಷೇಧ

ಹೆಚ್ಚುತ್ತಿರುವ ವಾಯು ಗುಣಮಟ್ಟ ಸೂಚ್ಯಂಕದ (AQI) ದೃಷ್ಟಿಯಿಂದ ನೋಯ್ಡಾ ಜಿಲ್ಲಾಡಳಿತ ಮತ್ತು ನೋಯ್ಡಾ ಪ್ರಾಧಿಕಾರವು ಎಚ್ಚರಿಕೆ ವಹಿಸಿದೆ. ನೋಯ್ಡಾದ ಎಲ್ಲಾ ನಿರ್ಮಾಣ ಸ್ಥಳಗಳಲ್ಲಿ ಕೆಲಸವನ್ನು ನಿಷೇಧಿಸಲಾಗಿದೆ. ಯಾವುದೇ ಬಿಲ್ಡರ್ ಅಥವಾ ಇತರ ವ್ಯಕ್ತಿ ಯಾವುದೇ ರೀತಿಯ ನಿರ್ಮಾಣ ಕಾರ್ಯ ಮಾಡಲು ಸಾಧ್ಯವಾಗುವುದಿಲ್ಲ. ಗೌತಮ್ ಬುದ್ಧ ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ಸಾಮಾನ್ಯ ಮಟ್ಟಕ್ಕೆ ಬರುವವರೆಗೆ ಎಲ್ಲಾ ರೀತಿಯ ಖಾಸಗಿ ಮತ್ತು ವಾಣಿಜ್ಯ ನಿರ್ಮಾಣ ಸೈಟ್‌ಗಳನ್ನು ನಿಷೇಧಿಸಲಾಗಿದೆ. ಇಲ್ಲಿ ಯಾರಿಗೂ ಕೆಲಸ ಮಾಡಲು ಅನುಮತಿ ಇರುವುದಿಲ್ಲ. ಒಂದು ವೇಳೆ ನಿಯಮ ಮೀರಿ ಯಾರಾದರೂ ಕೆಲಸ ಮಾಡುತ್ತಿರುವುದು ಕಂಡುಬಂದರೆ ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತದೆ.

ಇದನ್ನೂ ಓದಿ: EPFO Pension : ಉದ್ಯೋಗಾಕಾಂಕ್ಷಿಗಳಿ ಬಿಗ್ ಶಾಕ್! ಪಿಂಚಣಿ ಹೆಚ್ಚಳ ಪ್ರಸ್ತಾಪ ತಿರಸ್ಕರಿಸಿದ ಸರ್ಕಾರ 

ಡೀಸೆಲ್ ವಾಹನಗಳ ಪ್ರವೇಶಕ್ಕೆ ನಿಷೇಧ

ಡೀಸೆಲ್ ಎಂಜಿನ್ ಹೊಂದಿರುವ ಅಗತ್ಯ ಸೇವೆಗಳಲ್ಲಿ ಚಲಿಸುವ ವಾಹನಗಳನ್ನು ಹೊರತುಪಡಿಸಿ ಎಲ್ಲಾ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ. ಇವುಗಳಲ್ಲಿ ಯುರೋ ಸಿಕ್ಸ್(Euro 6/VI)  ಎಂಜಿನ್ ಹೊಂದಿರುವ ವಾಹನಗಳಿಗೆ ಮಾತ್ರ ವಿನಾಯಿತಿ ನೀಡಲಾಗುತ್ತದೆ.

ನೋಯ್ಡಾದಲ್ಲಿ Grape-4 ಜಾರಿ  

Grape-4 ಜಾರಿಗೆ ಬಂದ ತಕ್ಷಣ ಈಗ ಅನೇಕ ನಿರ್ಬಂಧಗಳನ್ನು ವಿಧಿಸಲಾಗಿದೆ. ಕಟ್ಟಡ ನಿರ್ಮಾಣ ಮತ್ತು ಕಸ ಸುಡುವುದನ್ನು ನಿಷೇಧಿಸಲಾಗಿದೆ. ನಿರ್ಮಾಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಹೊರಗೆ ತೆರೆದಿಡುವಂತಿಲ್ಲ ಮತ್ತು ಇಟ್ಟರೂ ಸಂಪೂರ್ಣವಾಗಿ ಮುಚ್ಚಿಡಬೇಕಾಗುತ್ತದೆ. ಹೆಚ್ಚುತ್ತಿರುವ ಮಾಲಿನ್ಯದ ದೃಷ್ಟಿಯಿಂದ ನೋಯ್ಡಾದಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. 1 ರಿಂದ 8ನೇ ತರಗತಿಯವರೆಗೆ ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ಅದೇ ರೀತಿ 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಹೊರಾಂಗಣ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಹೆಚ್ಚುತ್ತಿರುವ ಮಾಲಿನ್ಯದ ದೃಷ್ಟಿಯಿಂದ ಕಟ್ಟುನಿಟ್ಟಾಗಿ Grape-4 ಜಾರಿಗೆ ತರಲಾಗಿದೆ.

ಇದನ್ನೂ ಓದಿ: LIC ಈ ಪ್ಲಾನ್​ನಲ್ಲಿ ಒಂದೇ ಪ್ರೀಮಿಯಂ ಪಾವತಿಸಿ, ಲೈಫ್ ಲಾಂಗ್ ಪಿಂಚಣಿ ಪಡೆಯಿರಿ!

ಶೇ.50ರಷ್ಟು ಸಿಬ್ಬಂದಿಗೆ ವರ್ಕ್ ಫ್ರಮ್ ಹೋಂ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ದಿನೇ ದಿನೇ ಹದಗೆಡುತ್ತಿರುವ ಹಿನ್ನೆಲೆ ಶೇ.50ರಷ್ಟು ಸಿಬ್ಬಂದಿಗೆ ಮನೆಯಿಂದಲೇ ಕೆಲಸ (Work From Home) ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News