ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ: ವಿಫುಲ್ ಅಂಬಾನಿ ಸೇರಿ ಐವರ ಬಂಧನ

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈರ್ ಸ್ಟಾರ್ ಡೈಮಂಡ್ಸ್ ಅಧ್ಯಕ್ಷ ವಿಫುಲ್ ಅಂಬಾನಿ ಸೇರಿದಂತೆ ಐವರು ಆರೋಪಿಗಳನ್ನು ಸಿಬಿಐ ಮಂಗಳವಾರ ಬಂಧಿಸಿದೆ.   

Last Updated : Feb 21, 2018, 01:14 PM IST
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ: ವಿಫುಲ್ ಅಂಬಾನಿ ಸೇರಿ ಐವರ ಬಂಧನ title=

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈರ್ ಸ್ಟಾರ್ ಡೈಮಂಡ್ಸ್ ಅಧ್ಯಕ್ಷ ವಿಫುಲ್ ಅಂಬಾನಿ ಸೇರಿದಂತೆ ಐವರು ಆರೋಪಿಗಳನ್ನು ಸಿಬಿಐ ಮಂಗಳವಾರ ಬಂಧಿಸಿದೆ. 

ಫೈನಾನ್ಸ್ ಫೈರ್ಸ್ಟಾರ್ ಇಂಟರ್ನ್ಯಾಶನಲ್ ಅಧ್ಯಕ್ಷ ವಿಪುಲ್ ಅಂಬಾನಿ, ಕಾರ್ಯನಿರ್ವಾಹಕ ಸಹಾಯಕಿ ಕವಿತಾ ಮಂಕಿಕರ್ ಮತ್ತು ಫೈರ್ಸ್ಟಾರ್ ಗ್ರೂಪ್ ನ ಹಿರಿಯ ಕಾರ್ಯನಿರ್ವಾಹಕ ಅರ್ಜುನ್ ಪಾಟೀಲ್ ಅವರನ್ನು ಸಿಬಿಐ ಬಂಧಿಸಿದೆ. ಇವರೊಂದಿಗೆ ನಕ್ಷತ್ರ ಮತ್ತು ಗೀತಾಂಜಲಿ ಗ್ರೂಪ್'ನ ಮುಖ್ಯ ಹಣಕಾಸು ಅಧಿಕಾರಿ ಕಪಿಲ್ ಖಂಡೇಲ್ವಾಲ್, ಚೋಕ್ಸಿ ನೇತೃತ್ವದ ಗೀತಾಂಜಲಿ ಗ್ರೂಪ್'ನ ವ್ಯವಸ್ಥಾಪಕ ನಿತನ್ ಶಾಹಿ ಅವರನ್ನೂ ಬಂಧಿಸಲಾಗಿದೆ. 

ಏತನ್ಮಧ್ಯೆ, ಮಂಗಳವಾರ ಆದಾಯ ತೆರಿಗೆ ಇಲಾಖೆ ಗೀತಾಂಜಲಿ ಜೆಮ್ಸ್ ಮತ್ತು ಶಂಕಿತ ಶೆಲ್ ಕಂಪೆನಿಗಳಿಗೆ ಸೇರಿದ 20 ಕಡೆಗಳಲ್ಲಿ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Trending News