ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಟ್ವಿ ಟರ್ ಖಾತೆಯನ್ನು ಹ್ಯಾಕ್(PM Modi's Twitter Account Hacked)ಮಾಡಲಾಗಿದೆ. ನಿನ್ನೆ ರಾತ್ರಿ(ಡಿ.11) ಪ್ರಧಾನಿ ಮೋದಿಯವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದ್ದ ಹ್ಯಾಕರ್ಸ್ ಗಳು ಬಿಟ್‌ಕಾಯಿನ್(Bitcoin) ಸಂಬಂಧಿಸಿದಂತೆ ಕೆಲವು ಸಾಲುಗಳನ್ನು ಬರೆದು ಟ್ವೀಟ್ ಮಾಡಿದ್ದರು.
ಹೌದು, ಪ್ರಧಾನಿ ಮೋದಿಯವರ ಅಧಿಕೃತ ಟ್ವಿಟರ್ ಖಾತೆಯನ್ನೇ ಹ್ಯಾಕ್ ಮಾಡಿದ್ದ ಚಾಲಾಕಿ ಹ್ಯಾಕರ್ಸ್ ಗಳು ಬಿಟ್‌ಕಾಯಿನ್(Bitcoin) ಸಂಬಂಧ ಟ್ವೀಟ್ ಮಾಡಿದ್ದರು. ಕೂಡಲೇ ಎಚ್ಚೆತ್ತುಕೊಂಡ ಟ್ವಿಟರ್ ಸಂಸ್ಥೆ ಪ್ರಧಾನಿ(PM Modi)ಯವರ ಟ್ವಿಟರ್ ಖಾತೆಯನ್ನು ಸರಿಮಾಡಿದೆ. ‘ಭಾರತವು ಅಧಿಕೃತವಾಗಿ ಬಿಟ್‌ಕಾಯಿನ್ ಅನ್ನು ಕಾನೂನು ಬದ್ಧಗೊಳಿಸಿದೆ. ಕೇಂದ್ರ ಸರ್ಕಾರವೇ ಖುದ್ದು 500 ಬಿಟ್‌ಕಾಯಿನ್(Bitcoin) ಗಳನ್ನು ಖರೀದಿಸಿದ್ದು, ದೇಶದ ನಾಗರಿಕರಿಗೆ ವಿತರಿಸುತ್ತಿದೆ’ ಎಂದು ಕ್ಯಾಪ್ಶನ್ ಬರೆದು ಕೆಳಗೆ ಒಂದು ಲಿಂಕ್ ಶೇರ್ ಮಾಡಲಾಗಿತ್ತು.
The Twitter handle of PM @narendramodi was very briefly compromised. The matter was escalated to Twitter and the account has been immediately secured.
In the brief period that the account was compromised, any Tweet shared must be ignored.
— PMO India (@PMOIndia) December 11, 2021
ಇದನ್ನೂ ಓದಿ: ಮುಂದಿನ ಐದು ದಿನಗಳಲ್ಲಿ ಈ 8 ರಾಜ್ಯಗಳಲ್ಲಿ ಭಾರಿ ಮಳೆ, ಹವಾಮಾನ ಇಲಾಖೆ ಎಚ್ಚರಿಕೆ
ಭಾರತದಲ್ಲಿ ಬಿಟ್‌ಕಾಯಿನ್ ಅನ್ನು ಅಧಿಕೃತ ಕರೆನ್ಸಿಯಾಗಿ ಸ್ವೀಕರಿಸುವ ಯಾವುದೇ ಯೋಜನಗಳಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman)ಈ ಹಿಂದೆ ಸ್ಪಷ್ಟಪಡಿಸಿದ್ದರು. ಬಿಟ್‌ಕಾಯಿನ್‌ಗೆ ಯಾವುದೇ ಕಾನೂನುಬದ್ಧ ಮಾನ್ಯತೆ ನೀಡಲಾಗಿಲ್ಲ. ಬಿಟ್‌ಕಾಯಿನ್ ವಹಿವಾಟಿನ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ದತ್ತಾಂಶ ಸಂಗ್ರಹಿಸಲ್ಲವೆಂದು ಕೇಂದ್ರ ಸರ್ಕಾರ ಕೂಡ ಸಂಸತ್‌ಗೆ ಲಿಖಿತ ಉತ್ತರ ನೀಡಿತ್ತು.
ಪ್ರಧಾನಿ ಮೋದಿಯವರ ಟ್ವಿಟರ್ ಖಾತೆ(PM Modi Twitter Account)ಯಿಂದ ಈ ಹಿಂದೆ ಮಾಡಿರುವ ಟ್ವೀಟ್ ಅನ್ನು ಪರಿಗಣಿಸದಂತೆ ಹಾಗೂ ಪ್ರಧಾನಿ ಮೋದಿ ಖಾತೆಯಿಂದ ಬಿಟ್‌ಕಾಯಿನ್ ಸಂಬಂಧ ಮಾಡಲಾಗಿರುವ ಟ್ವಿಟರ್ ಲಿಂಗ್ ಶೇರ್ ಮಾಡದಂತೆ @PMOIndia ಮನವಿ ಮಾಡಿದೆ.
ಇದನ್ನೂ ಓದಿ: ಮನೆಗೆ ಮರಳುತ್ತಿದ್ದಾಗ ಟಿಕ್ರಿ ಬಾರ್ಡರ್ ನಲ್ಲಿ ಇಬ್ಬರು ರೈತರು ಸಾವು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.