ತಮ್ಮ SOCIAL MEDIA ಖಾತೆಗಳ ಕುರಿತಾದ PM ಮೋದಿಯ ಮತ್ತೊಂದು TWEET ವೈರಲ್

ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮಗಳಿಂದ ಹೊರಬರಲಿದ್ದಾರೆ ಎಂಬ ಸುದ್ದಿಗಳ ಮಧ್ಯೆ ಇದೀಗ ಪ್ರಧಾನಿ ಅವರ ಮತ್ತೊಂದು ಟ್ವೀಟ್ ಭಾರಿ ವೈರಲ್ ಆಗಲಾರಂಭಿಸಿದೆ.

Last Updated : Mar 3, 2020, 02:58 PM IST
ತಮ್ಮ SOCIAL MEDIA ಖಾತೆಗಳ ಕುರಿತಾದ PM ಮೋದಿಯ ಮತ್ತೊಂದು TWEET ವೈರಲ್ title=

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮಗಳಿಂದ ಹೊರಬರಲಿದ್ದಾರೆ ಎಂಬ ಸುದ್ದಿಗಳ ಮಧ್ಯೆ ಇದೀಗ ಪ್ರಧಾನಿ ಅವರ ಮತ್ತೊಂದು ಟ್ವೀಟ್ ಭಾರಿ ವೈರಲ್ ಆಗಲಾರಂಭಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 8ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ತಮ್ಮ ಎಲ್ಲ ಸಾಮಾಜಿಕ ಮಾಧ್ಯಮ ಖಾತೆಗಳು ಮಹಿಳೆಯರಿಗೆ ಸಮರ್ಪಿತವಾಗಲಿವೆ ಎಂದು ಹೇಳಿದ್ದಾರೆ.

ಯಾವ ಮಹಿಳೆಯರ ಜೀವನ ಮತ್ತು ಅವರ ಕೆಲಸ ನಮಗೆ ಸ್ಫೂರ್ತಿ ನೀಡುತ್ತದೆಯೋ ಆ ಮಹಿಳೆಯರಿಗಾಗಿ ಮಾರ್ಚ್ 8 ರಂದು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಮೀಸಲಿಡಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಮಹಿಳೆಯರ ಕಥೆಗಳು ಲಕ್ಷಾಂತರ ಜನರಿಗೆ ಪ್ರೇರಣೆ ಮತ್ತು ಸ್ಫೂರ್ತಿ ನೀಡುತ್ತಿವೆ ಎಂದು ಅವರು ಹೇಳಿದ್ದಾರೆ. ನೀವೂ ಕೂಡ ಇಂತಹ ಮಹಿಳೆಯರಾಗಿದ್ದೀರಾ ಅಥವಾ ಸ್ಫೂರ್ತಿದಾಯಕ ಮಹಿಳೆಯರ ಬಗ್ಗೆ ನಿಮಗೆ ತಿಳಿದಿದೆಯೇ?

ಮಾರ್ಚ್ 8 ರಂದು ತಮ್ಮ ಎಲ್ಲ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಆ ಸೋಷಿಯಲ್ ಮೀಡಿಯಾ ಖಾತೆಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು ಮತ್ತು ಅವರ ಜೀವನ ಮತ್ತು ಕೆಲಸ ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಪಿಎಂ ಮೋದಿ ಹೇಳಿದರು. ಆ ಮಹಿಳೆಯರ ಕಥೆಗಳು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತವೆ. ನೀವು ಈ ರೀತಿಯ ಮಹಿಳೆಯಾಗಿದ್ದೀರಾ ಅಥವಾ ಅಂತಹ ಸ್ಪೂರ್ತಿದಾಯಕ ಮಹಿಳೆಯರ ಬಗ್ಗೆ ತಿಳಿದಿದೆಯೇ? ಹಾಗಿದ್ದಲ್ಲಿ ನಿಮ್ಮ ಕಥೆಯನ್ನು  #SheInspiresUs ಮೂಲಕ ಹಂಚಿಕೊಳ್ಳಬಹುದಾಗಿದೆ. ಪ್ರಧಾನಿ ಮೋದಿ ನೀಡಿರುವ ಈ ಸಂದೇಶದ ಕೇವಲ ಅರ್ಧ ಗಂಟೆಯಲ್ಲಿ  #SheInspiresUs ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡ್ ಆಗಿ ಮುನ್ನುಗ್ಗಲಾರಂಭಿಸಿದೆ.

ಇದಕ್ಕೂ ಮೊದಲು ಸೋಮವಾರ ಟ್ವೀಟ್ ಮಾಡಿದ್ದ  ಪ್ರಧಾನಿ ನರೇಂದ್ರ ಮೋದಿ, ತಾವು ತಮ್ಮ ಎಲ್ಲ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಿಡುವ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿಕೆ ನೀಡಿದ್ದರು. ಅವರು ತಮ್ಮ ವೈಯಕ್ತಿಕ ಟ್ವಿಟರ್ ಹ್ಯಾಂಡಲ್‌ನಿಂದ ಈ ಬಗ್ಗೆ ಮಾಹಿತಿ ನೀಡಿದ್ದರು. ಸೋಮವಾರ ಸಂಜೆ ಈ ಕುರಿತು ಟ್ವೀಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಈ ಭಾನುವಾರ, ನಾನು ನನ್ನ ಎಲ್ಲ ಸಾಮಾಜಿಕ ಮಾಧ್ಯಮಗಳಾಗಿರುವ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ ಖಾತೆಗಳನ್ನು ಬಿಡಲು ಯೋಚಿಸುತ್ತಿದ್ದೇನೆ. ಈ ಬಗ್ಗೆ ನಾನು ನಿಮಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ" ಎಂದಿದ್ದರು.

ಈ ಕುರಿತು ಮೂಲಗಳು ನೀಡಿರುವ ಮಾಹಿತಿಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲಿಯೇ ಫೇಸ್ ಬುಕ್, ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಗಳಂತಹ ಸಾಮಾಜಿಕ ತಾಣಗಳನ್ನು ತೊರೆದು ಸ್ವದೇಶಿ ಆಪ್ ಗಳನ್ನು ಬಳಸಲಿದ್ದಾರೆ ಎನ್ನಲಾಗಿದೆ.

ಯಾವಾಗಲು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಸ್ವದೇಶೀ ಹಾಗೂ ಮೇಕ್ ಇನ್ ಇಂಡಿಯಾ ಕುರಿತು ಮಾತನಾಡುತ್ತಾರೆ. ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯ ಜೊತೆಗೆ ತಮ್ಮ ವಿಚಾರಗಳನ್ನು ನಿರಂತರವಾಗಿ ಹಂಚಿಕೊಳ್ಳಲು ಕೇವಲ ನಮೋ ಆಪ್ ಬಳಕೆ ಮಾಡಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ನಮೋ ಆಪ್ ರೀತಿಯೇ ದೇಶದಲ್ಲಿ ಮತ್ತೊಂದು ಸಾಮಾಜಿಕ ಮಾಧ್ಯಮ ಆಪ್ ಸಿದ್ಧಪಡಿಸಲಾಗಿದ್ದು, ಅದು ಸದ್ಯ ಟ್ರಯಲ್ ನಲ್ಲಿದೆ. ಈ ಆಪ್ ಸಂಪೂರ್ಣ ಸ್ವದೇಶಿ ಆಪ್ ಆಗಿರಲಿದೆ ಎಂದೂ ಕೂಡ ಮೂಲಗಳು ಮಾಹಿತಿ ನೀಡಿವೆ.

ಈ ಕುರಿತು ತಜ್ಞರು ಹೇಳುವ ಪ್ರಕಾರ ಸುಳ್ಳು ಸುದ್ದಿಗಳನ್ನು ಪಸರಿಸಲು ಇಂದಿನ ಕಾಲದಲ್ಲಿ ಯಾವ ರೀತಿ ಸಾಮಾಜಿಕ ಮಾಧ್ಯಮ ಬಳಕೆಯಾಗುತ್ತಿದೆಯೋ ಅದರಿಂದ ಪ್ರಧಾನಿ ಮೋದಿ ನೊಂದು ಹೋಗಿದ್ದು, ಇದೆ ಕಾರಣದಿಂದ ಅವರು ಸಾಮಾಜಿಕ ಮಾಧ್ಯಮ ತೊರೆಯುವ ನಿರ್ಧಾರ ಕೈಗೊಂಡಿದ್ದು , ಇದರ ಹಿಂದೆ ಸ್ವದೇಶೀಗೆ ಹೆಚ್ಚಿನ ಒತ್ತು ನೀಡುವ ಉದ್ದೇಶವೂ ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Trending News