ತಾಯಿಯ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ.! ಭಾವುಕ ಕ್ಷಣಗಳ ವಿಡಿಯೋ ಇಲ್ಲಿದೆ

Heeraben Last Rites: ಹೀರಾಬೆನ್ ಅಂತಿಮ ಯಾತ್ರೆಯಲ್ಲಿ ಅವರ ಪುತ್ರ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡು, ತಾಯಿಯ ಪಾರ್ಥಿವ ಶರೀರರಕ್ಕೆ ಹೆಗಲು ಕೊಟ್ಟಿದ್ದಾರೆ. 

Written by - Ranjitha R K | Last Updated : Dec 30, 2022, 10:05 AM IST
  • ಪಂಚ ಭೂತಗಳಲ್ಲಿ ಲೀನರಾದ ಹೀರಾಬೆನ್
  • ಅಂತಿಮ ಯಾತ್ರೆಯಲ್ಲಿ ಪುತ್ರ ಪ್ರಧಾನಿ ನರೇಂದ್ರ ಮೋದಿ
  • ದುಃಖದಲ್ಲಿ ಭಾಗಿಯಾದವರಿಗೆ ಧನ್ಯವಾದ ಹೇಳಿದ ಮೋದಿ ಕುಟುಂಬ
ತಾಯಿಯ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ.! ಭಾವುಕ ಕ್ಷಣಗಳ ವಿಡಿಯೋ ಇಲ್ಲಿದೆ   title=

 Heeraben Last Rites: ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಪಂಚ ಭೂತಗಳಲ್ಲಿ ಲೀನರಾಗಿದ್ದಾರೆ.  ಹೀರಾಬೆನ್ ಅಂತಿಮ ಯಾತ್ರೆಯಲ್ಲಿ ಅವರ ಪುತ್ರ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡು, ತಾಯಿಯ ಪಾರ್ಥಿವ ಶರೀರರಕ್ಕೆ ಹೆಗಲು ಕೊಟ್ಟಿದ್ದಾರೆ. ಪ್ರಧಾನಿ ಮೋದಿ ಅವರ ತಾಯಿಯ ಅಂತಿಮ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ ಜನ ನೆರೆದಿದ್ದರು. ಗಾಂಧಿನಗರದಲ್ಲಿ ಪ್ರಧಾನಿ ಮೋದಿ ಅವರ ತಾಯಿಯ ಅಂತಿಮ ಸಂಸ್ಕಾರ ನೆರವೇರಿದೆ. 

ಇದನ್ನೂ ಓದಿ : Heeraben Modi passed away: ಪ್ರಧಾನಿ ತಾಯಿ ಹೀರಾಬೆನ್ ನಿಧನ: ಕಣ್ಣೀರು ತರಿಸುವಂತಿದೆ ‘ಪ್ರಿಯ ಪುತ್ರ’ನ ಭಾವುಕ ನುಡಿ

ದುಃಖದಲ್ಲಿ ಭಾಗಿಯಾದವರಿಗೆ ಧನ್ಯವಾದ ಹೇಳಿದ ಮೋದಿ ಕುಟುಂಬ :
ಕಷ್ಟದ ಸಮಯದಲ್ಲಿ ಜೊತೆಯಾಗಿ ನಿಂತವರಿಗೆ ಮೋದಿ ಕುಟುಂಬ ಧನ್ಯವಾದ ಹೇಳಿದೆ. ಎಲ್ಲಾ ಕಾರ್ಯಗಳನ್ನು ನಿಗದಿ ಒಅದಿಸಿದ ಸಮಯಕ್ಕೆ ಪೂರ್ಣ ಗೊಳಿಸುವಲ್ಲಿ ಸಹಕಾರ ನೀಡುವಂತೆ ವಿನಮ್ರವಾಗಿ ವಿನಂತಿಸಿದೆ. ಅಲ್ಲದೆ ಹೀಗೆ ನಡೆದುಕೊಳ್ಳುವುದೇ ಹೀರಾಬಾಗೆ  ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದೆ. 

 

ಪ್ರಧಾನಿ ಮೋದಿಯವರ ತಾಯಿ ಶುಕ್ರವಾರ ಬೆಳಗಿನ ಜಾವ 3:30ರ ಸುಮಾರಿಗೆ ವಿಧಿವಶರಾಗಿದ್ದಾರೆ. ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್ ಅಹಮದಾಬಾದ್‌ನ ಯುಎನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

ಪ್ರಧಾನಿ ತಾಯಿಯ ನಿಧನಕ್ಕೆ ಹಲವು ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬಾ ನಿಧನದ ಸುದ್ದಿ ಅತ್ಯಂತ ದುಃಖಕರವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. 

 

ಇದನ್ನೂ ಓದಿ : PM Modi mother Heeraben Modi passed away : ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ನಿಧನ

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೂಡಾ ಪ್ರಧಾನಿ ನರೇಂದ್ರ ಮೋದಿ  ತಾಯಿಯ ನಿಧನಕ್ಕೆ  ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. 

 

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

  

Trending News