PM Modi Inaugurates Kartavya Path : ಇಂಡಿಯಾ ಗೇಟ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಕರ್ತವ್ಯ ಪಥವನ್ನು ಉದ್ಘಾಟಿಸಿದರು.
‘ಕರ್ತವ್ಯ ಪಥ’ ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸ್ವಾತಂತ್ರ್ಯದ ಅಮೃತೋತ್ಸವದಲ್ಲಿ ಇಂದು ದೇಶಕ್ಕೆ ಹೊಸ ಸ್ಫೂರ್ತಿ, ಹೊಸ ಶಕ್ತಿ ಬಂದಿದೆ. ಇಂದು ಈ ಹೊಸ ಸೆಳವು ಎಲ್ಲೆಡೆ ಗೋಚರಿಸುತ್ತದೆ. ಇದು ನವ ಭಾರತದ ಆತ್ಮವಿಶ್ವಾಸದ ಸೆಳವು ಎಂದು ಹೇಳಿದರು.
ಇದನ್ನೂ ಓದಿ : PM Narendra Modi : ಇಂಡಿಯಾ ಗೇಟ್‌ನಲ್ಲಿ ನೇತಾಜಿ ಪ್ರತಿಮೆ ಉದ್ಘಾಟಿಸಿದ ಪಿಎಂ ಮೋದಿ
ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಂದುವರೆದು ಮಾತನಾಡಿದ ಅವರು, ಇಂದಿನ ಈ ಐತಿಹಾಸಿಕ ಕಾರ್ಯಕ್ರಮವು ಇಡೀ ದೇಶದ ದೃಷ್ಟಿಯಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿರುವ ಎಲ್ಲಾ ದೇಶವಾಸಿಗಳನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ, ಅಭಿನಂದಿಸುತ್ತೇನೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ದೇಶಕ್ಕೆ ಇಂದು ಹೊಸ ಸ್ಫೂರ್ತಿ ಸಿಕ್ಕಿದೆ, ಹೊಸ ಶಕ್ತಿ ಬಂದಿದೆ. ಇಂದು ಭೂತಕಾಲವನ್ನು ಬಿಟ್ಟು ನಾಳೆಯ ಚಿತ್ರಣಕ್ಕೆ ಹೊಸ ಬಣ್ಣ ತುಂಬುತ್ತಿದ್ದೇವೆ. ಇಂದು ಎಲ್ಲೆಡೆ ಗೋಚರಿಸುತ್ತಿರುವ ಈ ಹೊಸ ಸೆಳವು ನವಭಾರತದ ಆತ್ಮವಿಶ್ವಾಸದ ಸೆಳವು ಎಂದರು.
Symbol of colonialism 'Kingsway' will be a history and has been erased forever. A new era has begun in the form of Kartvyapath. I congratulate all the people of the country as we come out from another symbol of colonialism: PM Modi pic.twitter.com/sfLdYZdCIT
— ANI (@ANI) September 8, 2022
ಗುಲಾಮಗಿರಿಯ ಪ್ರತೀಕವಾದ ಕಿಂಗ್ಸ್‌ವೇ ಅಂದರೆ ರಾಜ್‌ಪಥ್ ಇಂದಿನಿಂದ ಇತಿಹಾಸ ಸೇರಿ ಅದು ಕರ್ತವ್ಯ ಪಥವೆಂದು ಹೆಸರಾಗಲಿದೆ, ಇಂದು ಅದನ್ನ ಕರ್ತವ್ಯ ಪಥ ರೂಪದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಈ ಸ್ವಾತಂತ್ರ್ಯದ ಮಹೋತ್ಸವದಲ್ಲಿ ಗುಲಾಮಗಿರಿಯ ಮತ್ತೊಂದು ಸಂಕೇತದಿಂದ ಸ್ವಾತಂತ್ರ್ಯ ಪಡೆದ ಎಲ್ಲಾ ದೇಶವಾಸಿಗಳನ್ನು ನಾನು ಅಭಿನಂದಿಸುತ್ತೇನೆ.
ಇದನ್ನೂ ಓದಿ : ಬಿಹಾರದಲ್ಲಿ ಎನ್‌ಐಎ ಕಾರ್ಯಾಚರಣೆ : ದೇಶವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಹಲವೆಡೆ ದಾಳಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.