ರೈತರ ಕೆಂಗಣ್ಣಿಗೆ ಗುರಿಯಾದ ಮೋದಿ ಕನಸಿನ ಬುಲೆಟ್ ಟ್ರೈನ್

    

Last Updated : May 17, 2018, 04:16 PM IST
ರೈತರ ಕೆಂಗಣ್ಣಿಗೆ ಗುರಿಯಾದ ಮೋದಿ ಕನಸಿನ ಬುಲೆಟ್ ಟ್ರೈನ್  title=

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ ಈಗ ಸಮಸ್ಯೆ ಸುಳಿಯಲ್ಲಿ ಸಿಲುಕಿದೆ.

ಭಾರತ- ಜಪಾನಿನ ಜಂಟಿ ಯೋಜನೆಯಾದ ಬುಲೆಟ್ ಟ್ರೈನ್ ಈಗ ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ರೈತರು ಭೂಸ್ವಾಧೀನ ವಿಚಾರವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಲೋಕಸಭೆ 2019 ಕ್ಕೂ ಮೊದಲು ಇದೊಂದು ಸಮಸ್ಯೆಯಾಗಿ ಕಾಡಲಿದೆ ಎನ್ನಲಾಗಿದೆ.

ಈಗಾಗಲೇ ಭೂಸ್ವಾಧೀನಕ್ಕೆ ಸರ್ಕಾರ ನೀಡುತ್ತಿರುವ ಪರಿಹಾರದ ಪ್ಯಾಕೇಜ್ ಗಳನ್ನು ಎರಡು ರಾಜ್ಯಗಳ ರೈತರು ತಿರಸ್ಕರಿಸಿದ್ದಾರೆ. ಭೂ ಸ್ವಾಧೀನ ಪ್ರಕ್ರಿಯೆ ಈಗಾಗಲೇ ವಿಳಂಭವಾಗಿದೆ. ಇನ್ನೂ ವಿಳಂಬವಾದರೆ 2023 ರ ಗಡುವಿನಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದಿಲ್ಲ ಎಂದು ಹೇಳಲಾಗಿದೆ.

ಬುಲೆಟ್ ರೈಲು ಯೋಜನೆ 2023 ರ ವೇಳೆಗೆ ಪೂರ್ಣಗೊಳ್ಳಬೇಕು. ಈಗ ಕೇವಲ ಐದು ವರ್ಷಗಳು ಮಾತ್ರ ಇವೆ. ಆದ್ದರಿಂದ ಭೂಮಿ ಸಮಸ್ಯೆ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು ಎಂದು ಜಪಾನ ಆಗ್ರಹಿಸಿದೆ.

Trending News