Petrol Price: ಪೆಟ್ರೋಲ್ ಹೇಗೆ ನಮ್ಮ ಪಾಕೆಟ್ ಕನ್ನ ಕೊರೆಯುತ್ತದೆ ತಿಳಿಯಿರಿ.!

ಪೆಟ್ರೋಲಿಯಂ ಬೆಲೆ ಸತತ 9ನೇ ದಿನವೂ ಬೆಲೆ ಏರಿಕೆ ದಾಖಲಿಸುತ್ತಿದೆ . ದೇಶದ ನಾಲ್ಕು ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾರ್ವಕಾಲಿಕ ದಾಖಲೆ ದಾಖಲಿಸಿದೆ. 

Written by - Ranjitha R K | Last Updated : Feb 17, 2021, 09:47 AM IST
  • ಪೆಟ್ರೋಲಿಯಂ ಬೆಲೆ ಸತತ 9ನೇ ದಿನವೂ ಬೆಲೆ ಏರಿಕೆ ದಾಖಲಿಸುತ್ತಿದೆ.
  • ದೇಶದ ನಾಲ್ಕು ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾರ್ವಕಾಲಿಕ ದಾಖಲೆ ದಾಖಲಿಸಿದೆ.
  • ರಾಜಾಸ್ತಾನದಲ್ಲಿ ಶ್ರೀಗಂಗಾ ನಗರದಲ್ಲಿ ಪೆಟ್ರೋಲ್ ಶತಕ ಸಿಡಿಸಿ ಮುನ್ನಡೆಯುತ್ತಿದೆ.
Petrol Price: ಪೆಟ್ರೋಲ್ ಹೇಗೆ ನಮ್ಮ ಪಾಕೆಟ್ ಕನ್ನ ಕೊರೆಯುತ್ತದೆ ತಿಳಿಯಿರಿ.! title=
ಪೆಟ್ರೋಲಿಯಂ ಬೆಲೆ ಸತತ 9ನೇ ದಿನವೂ ಬೆಲೆ ಏರಿಕೆ (file photo)

ಬೆಂಗಳೂರು : ಪೆಟ್ರೋಲಿಯಂ ಬೆಲೆ (Petrolium Price hike) ಸತತ 9ನೇ ದಿನವೂ ಬೆಲೆ ಏರಿಕೆ ದಾಖಲಿಸುತ್ತಿದೆ (Oil price today). ದೇಶದ ನಾಲ್ಕು ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾರ್ವಕಾಲಿಕ ದಾಖಲೆ ದಾಖಲಿಸಿದೆ. ದೆಹಲಿಯಲ್ಲಿ ಇಂದು ಪೆಟ್ರೋಲ್ 89.54 ರೂ.  ಮುಂಬಯಿನಲ್ಲಿ 90.78 ರೂ., ಕೊಲ್ಕತ್ತಾ 90.70 ರೂ.,  ಚೆನ್ನೈ 91.68 ರೂಪಾಯಿಗೆ ಮುಟ್ಟಿದೆ. ಇದೊಂದು ಸಾರ್ವಕಾಲಿಕ ದಾಖಲೆಯಾಗಿದೆ. 

ಇಲ್ಲಿ ಶತಕ ದಾಟಿದೆ ಪೆಟ್ರೋಲ್.!
ರಾಜಾಸ್ತಾನದಲ್ಲಿ ಶ್ರೀಗಂಗಾ ನಗರದಲ್ಲಿ (Sri Ganga Nagar) ಪೆಟ್ರೋಲ್ ಶತಕ ಸಿಡಿಸಿ ಮುನ್ನಡೆಯುತ್ತಿದೆ. ಇಲ್ಲಿ ಸತತ ಐದು ದಿನಗಳಿಂದ ಪೆಟ್ರೊಲ್ ಶತಕ ದಾಟಿ ಮುನ್ನಡೆದಿದೆ. ಭೋಪಾಲ್ನಿಲ್ಲಿ ಎಕ್ಸಟ್ರಾ ಪ್ರೀಮಿಯಂ ಪೆಟ್ರೋಲ್ (Extra Premium Petrol) ಬೆಲೆ ಸೆಂಚುರಿ ಸಿಡಿಸಿದೆ. 

ಇದನ್ನೂ ಓದಿ : ಕೋಟಿ ನಳ್ಳಿಗಳಲ್ಲಿ 24 ಗಂಟೆ ಶುದ್ದ ಕುಡಿಯುವ ನೀರು.! ಮೋದಿ ಸರ್ಕಾರ ಮಾಡುತ್ತಾ ಮ್ಯಾಜಿಕ್..

ನಮ್ಮ ರಾಜ್ಯದ ಸ್ಥಿತಿ ನೋಡಿ..!
ರಾಜ್ಯದಲ್ಲೂ ತೈಲ ಬೆಲೆ ಆಕಾಶಕ್ಕೆ ಹಾರುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ? (Petrol) ಬೆಲೆ ರೂ 92 .28 (Petrol Price ), ಮೈಸೂರಿನಲ್ಲಿ ಪೆಟ್ರೋಲ್ 91.88 ರೂ, ಕರಾವಳಿ ನಗರಿ ಮಂಗಳೂರಿನಲ್ಲಿ ಪೆಟ್ರೋಲ್ 91.51 ರೂಪಾಯಿ ಮುಟ್ಟಿದೆ. ಇದೇ ವೇಳೆ ಡೀಸೆಲ್ ಬೆಲೆ ಬೆಂಗಳೂರಿನಲ್ಲಿ (Bengaluru) 84.49 ರೂಪಾಯಿ, ಮಂಗಳೂರಿನಲ್ಲಿ 83.75 ಮತ್ತು ಮೈಸೂರಿನಲ್ಲಿ 84.12 ರೂಪಾಯಿ ದಾಖಲಾಗಿದೆ. 

ದುಬಾರಿ ದುನಿಯಾ..!
ಗೊತ್ತಿರಲಿ, ತೈಲ ಬೆಲೆ ಏರಿಕೆಯಾದರೆ ಕೇವಲ ಸಾರಿಗೆ ಮಾತ್ರ ತುಟ್ಟಿಯಾಗುವುದಿಲ್ಲ. ಬದಲಿಗೆ ಇದು ಸಂಪೂರ್ಣ ಮನೆ ಬಜೆಟ್ ಚಿತ್ರಣವನ್ನೇ ಬದಲಾಯಿಸಿಬಿಡುತ್ತದೆ. ಎಲ್ಪಿೆಜಿ ಈಗಾಗಲೇ ತುಟ್ಟಿಯಾಗಿದೆ. ಡೀಸೆಲ್ ಬೆಲೆ (Diesel) ಏರಿಕೆಯಾದಾಗ ಸಾರಿಗೆ, ಸರಕು ಸಾಗಣೆ ಎಲ್ಲವೂ ತುಟ್ಟಿಯಾಗುತ್ತದೆ. ಪರಿಣಾಮ ಅಗತ್ಯ ವಸ್ತುಗಳ ಬೆಲೆ ಕೂಡಾ ಗಗನಕ್ಕೇರುತ್ತದೆ. ಮತ್ತೊಂದು ಕಡೆಯಲ್ಲಿ ಹಾಲು, ದಿನಸಿ ವಸ್ತು, ಹೊಟೇಲ್ ರೆಸ್ಟೋರೆಂಟ್ ಆಹಾರದ ಬೆಲೆ, ಬಸ್ ಪ್ರಯಾಣ ದರ (Bus fare), ಎಲ್ಲವೂ ದುಬಾರಿಯಾಗುತ್ತದೆ. ನಮ್ಮ   ಸಂಬಳ (Salary)ಮಾತ್ರ ಅಷ್ಟೇ ಇರುತ್ತದೆ, ಹಣದುಬ್ಬರ ಮಾತ್ರ ವಿಪರೀತ ಹೆಚ್ಚಾಗುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 50 ಪೈಸೆ ಏರಿಕೆಯಾದರೂ, ಅದು ನಿಮ್ಮ  ಪಾಕೆಟ್ಗೆಲ ದೊಡ್ಡ ಕನ್ನ ಕೊರೆಯುತ್ತದೆ.

ಇದನ್ನೂ ಓದಿ : Maa Canteen: ₹ 5 ‘ಮಾ’  ಕ್ಯಾಂಟೀನ್‌ ಊಟ, ಮುಖ್ಯಮಂತ್ರಿಯಿಂದ ಚಾಲನೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News