ಇಂದೂ ಸಹ ಏರಿಕೆ ಕಂಡ ಪೆಟ್ರೋಲ್-ಡೀಸೆಲ್ ದರ

ಸತತ 16ನೇ ದಿನವೂ ಏರಿಕೆ ಕಂಡ ಪೆಟ್ರೋಲ್-ಡೀಸೆಲ್ ದರ

Last Updated : May 29, 2018, 11:41 AM IST
ಇಂದೂ ಸಹ ಏರಿಕೆ ಕಂಡ ಪೆಟ್ರೋಲ್-ಡೀಸೆಲ್ ದರ title=

ಬೆಂಗಳೂರು: ದೇಶಾದ್ಯಂತ ಇಂದು ತೈಲ ದರ ಪರಿಷ್ಕರಣೆಯಾಗಿದ್ದು, ಗಗನಕ್ಕೇರುತ್ತಿರುವ ಇಂಧನ ಬೆಲೆಗಳಿಂದ ಕಂಗೆಟ್ಟಿರುವ ಜನತೆಗೆ ಮತ್ತೊಂದು ಹೊಡೆತ ಬಿದ್ದಿದ್ದು, ಪೆಟ್ರೋಲ್-ಡೀಸೆಲ್ ದರ ಮತ್ತೊಮ್ಮೆ ಏರಿಕೆಯಾಗಿದೆ.  ಮೇ 29, 2018ರ ಮಂಗಳವಾರದಂದು ಪೆಟ್ರೋಲ್ ದರ 16 ಪೈಸೆ ಹಾಗೂ ಡೀಸೆಲ್ ದರ 14 ಪೈಸೆ ಪ್ರತಿ ಲೀಟರ್ ಗೆ ಏರಿಕೆಯಾಗಿದ್ದು, ಸತತವಾಗಿ 16 ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಈ ದರ ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಚಾಲ್ತಿಯಲ್ಲಿರುತ್ತದೆ. 

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ.
 
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ
ನಗರಗಳು  ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 78.43 69.31
ಕೋಲ್ಕತ್ತಾ 81.06 71.86
ಮುಂಬೈ 86.24 73.79
ಚೆನ್ನೈ 81.43 73.18
ಬೆಂಗಳೂರು 79.71 70.50
ಹೈದರಾಬಾದ್ 83.08 75.34
ತಿರುವನಂತಪುರಂ 82.62 75.20
ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: https://www.iocl.com/TotalProductList.aspx

Trending News