ಗರಿಷ್ಠ ಮಟ್ಟಕ್ಕೇರಿದ ಪೆಟ್ರೋಲ್-ಡೀಸೆಲ್ ದರ

ದೇಶಾದ್ಯಂತ ಇಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್-ಡಿಸೇಲ್ ದರದಲ್ಲಿ ಬೆಲೆಗಳು ಗರಿಷ್ಠ ಮಟ್ಟ ತಲುಪಿವೆ.

Last Updated : Apr 24, 2018, 09:18 AM IST
ಗರಿಷ್ಠ ಮಟ್ಟಕ್ಕೇರಿದ ಪೆಟ್ರೋಲ್-ಡೀಸೆಲ್ ದರ title=

ನವದೆಹಲಿ : ದೇಶಾದ್ಯಂತ ಮಂಗಳವಾರ ಬೆಳಗ್ಗೆ ತೈಲ ದರ ಪರಿಷ್ಕರಣೆಯಾಗಿದ್ದು, ಪೆಟ್ರೋಲ್​ ಬೆಲೆಯಲ್ಲಿ 13 ಪೈಸೆ ಮತ್ತು ಡೀಸೆಲ್​ ಬೆಲೆಯಲ್ಲಿ 18 ಪೈಸೆಗಳಷ್ಟು ಏರಿಕೆಯಾಗಿದೆ. ಈ ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಗರಿಷ್ಠ ಮಟ್ಟ ತಲುಪಿವೆ. ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಚಾಲ್ತಿಯಲ್ಲಿರುತ್ತದೆ. 

ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತದೆ.

ದೇಶದ ಪ್ರಮುಖ ನಗರಗಳ ಪೆಟ್ರೋಲ್ ಮತ್ತು ಡೀಸೆಲ್ ದರ ಈ ಕೆಳಗಿನಂತಿದೆ

ನಗರಗಳು  ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 74.63 65.93
ಕೋಲ್ಕತ್ತಾ 77.32 68.63
ಮುಂಬೈ 82.48 70.20
ಚೆನ್ನೈ 77.43 69.56
ಬೆಂಗಳೂರು 75.82 67.05
ಹೈದರಾಬಾದ್ 79.04 71.63
ತಿರುವನಂತಪುರಂ 78.61 71.52

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: https://www.iocl.com/TotalProductList.aspx

 

Trending News