ಮೂರು ದಿನಗಳ ಬಳಿಕ ಪೆಟ್ರೋಲ್ ದರದಲ್ಲಿ ಏರಿಕೆ!

ಸತತ ಮೂರು ದಿನಗಳ ಬಳಿಕ ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು. ಜುಲೈ 19 ರಂದು ಪೆಟ್ರೋಲ್‌ಗೆ ಪ್ರತಿ ಲೀಟರ್‌ಗೆ 8 ಪೈಸೆ ದುಬಾರಿಯಾಗಿತ್ತು. 

Last Updated : Jul 23, 2019, 08:53 AM IST
ಮೂರು ದಿನಗಳ ಬಳಿಕ ಪೆಟ್ರೋಲ್ ದರದಲ್ಲಿ ಏರಿಕೆ! title=

ನವದೆಹಲಿ: ಸತತ ಮೂರು ದಿನಗಳ ಬಳಿಕ ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು. ಇಂದು ಪರಿಷ್ಕರಿಸಲಾದ ತೈಲ ದರದಲ್ಲಿ ಪೆಟ್ರೋಲ್‌ ಪ್ರತಿ ಲೀಟರ್‌ಗೆ 6 ಪೈಸೆ ದುಬಾರಿಯಾಗಿದೆ. ಜುಲೈ 13 ರಿಂದ ಡೀಸೆಲ್ ಬೆಲೆ ಸ್ಥಿರವಾಗಿದೆ. 

ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. ಇಂದು ಪ್ರತಿ ಲೀಟರ್‌ಗೆ 6 ಪೈಸೆ ದುಬಾರಿಯಾಗಿದ್ದು ಇದರೊಂದಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 73.41 ರೂ., ದೆಹಲಿಯಲ್ಲಿ ಡೀಸೆಲ್ ಬೆಲೆ 64.24ರೂ. ಇದೆ.

ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

 

ನಗರಗಳು

ಪೆಟ್ರೋಲ್

(ರೂ./ಲೀ)

ಡೀಸೆಲ್

(ರೂ./ಲೀ)

ದೆಹಲಿ 73.41 66.24
ಕೊಲ್ಕತ್ತಾ 75.87 68.31
ಮುಂಬೈ 79.02 69.43
ಚೆನ್ನೈ 76.24 69.96
ಬೆಂಗಳೂರು 75.84 68.43
ಹೈದರಾಬಾದ್ 77.96 72.14
ತಿರುವನಂತಪುರಂ 76.60 71.09

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 

https://www.iocl.com/TotalProductList.aspx

Trending News