ಯಶ್‌ ಫ್ಯಾನ್‌ಗೆ ಗುಡ್‌ ನ್ಯೂಸ್‌..! 'ಕೆಜಿಎಫ್-3' ಬಗ್ಗೆ ಪ್ರಶಾಂತ್ ನೀಲ್ ನೀಡಿದ್ರು ಬಿಗ್‌ ಅಪ್‌ಡೇಟ್‌...

Yash KGF 3 : ಕೆಜಿಎಫ್ ಮೂರನೇ ಭಾಗವಾಗುವುದು ಖಚಿತ.... ಪ್ರಶಾಂತ್‌ ನೀಲ್‌ ಯಶ್‌ ಅಭಿಮಾನಿಗಳಿಗೆ ಖುಷಿಯಾಗುವಂತ ಸುದ್ದಿಯನ್ನು ನೀಡಿದ್ದಾರೆ.. ಫುಲ್‌ ಡಿಟೈಲ್ಸ್‌ಗಾಗಿ ಮುಂದೆ ಓದಿ..

Written by - Krishna N K | Last Updated : Jul 5, 2024, 05:04 PM IST
    • ಕೆಜಿಎಫ್‌ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ್ದ ಕನ್ನಡದ ಸಿನಿಮಾ
    • ಪ್ರಶಾಂತ್‌ ನೀಲ್‌ ನಿರ್ದೇಶನದ ಈ ಸಿನಿಮಾದಲ್ಲಿ ಯಶ್‌ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ.
    • ಭಾಗ 1 ಮತ್ತು 2 ಹಿಟ್‌ ಬೆನ್ನಲ್ಲೆ ಇದೀಗ ಭಾಗ 3 ಕುರಿತು ಪ್ರಶಾಂತ್‌ ನೀಲ್‌ ಅಪ್‌ಡೇಟ್‌ ನೀಡಿದ್ದಾರೆ.
ಯಶ್‌ ಫ್ಯಾನ್‌ಗೆ ಗುಡ್‌ ನ್ಯೂಸ್‌..! 'ಕೆಜಿಎಫ್-3' ಬಗ್ಗೆ ಪ್ರಶಾಂತ್ ನೀಲ್ ನೀಡಿದ್ರು ಬಿಗ್‌ ಅಪ್‌ಡೇಟ್‌... title=
Yash kgf 3

KGF 3 Update : ಕೆಜಿಎಫ್ ಚಿತ್ರ ಕನ್ನಡದಲ್ಲಿ ಮಾತ್ರವಲ್ಲ, ಇಡೀ ಭಾರತದಲ್ಲಿ ಸದ್ದು ಮಾಡಿತ್ತು. ಮೊದಲೆರಡು ಭಾಗಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಇದೀಗ ಮೂರನೇ ಭಾಗದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೆ ಸ್ಟಾರ್‌ ಡೈರೆಕ್ಟರ್‌ ಪ್ರಶಾಂತ್‌ ನೀಲ್‌ ಯಶ್‌ ಪ್ಯಾನ್ಸ್‌ಗೆ ಗುಡ್‌ ನ್ಯೂಸ್‌ ನೀಡಿದ್ದಾರೆ..

'ಕೆಜಿಎಫ್-3' ಚಿತ್ರದ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿರುವ ಮಾತು ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಕೆಜಿಎಫ್‌ ಮೊದಲ ಭಾಗವು 2018 ರಲ್ಲಿ ಬಿಡುಗಡೆಯಾಯಿತು. ಮೊದಲ ಭಾಗದ ಯಶಸ್ಸಿನ ನಂತರ, ನಿರ್ದೇಶಕ ಪ್ರಶಾಂತ್ ನೀಲ್ ಎರಡನೇ ಭಾಗವನ್ನು ಪ್ರಶಾಂತ್‌ ನೆಕ್ಸ್ಟ್‌ ಲೆವೆಲ್‌ನಲ್ಲಿ ತೋರಿಸಿದ್ದರು.

ಇದನ್ನೂ ಓದಿ: Kalki 2898AD Movie Leaked: ಪ್ರಭಾಸ್ ಕಲ್ಕಿ 2898AD ಸಿನಿಮಾ ಲೀಕ್.. ಈ ಸೈಟ್‌ನಲ್ಲಿ ಸಂಪೂರ್ಣ ಚಿತ್ರ ಲಭ್ಯ!

2022 ರಲ್ಲಿ ಬಿಡುಗಡೆಯಾದ ಕೆಜಿಎಫ್ 2 ಬಾಕ್ಸ್ ಆಫೀಸ್‌ನಲ್ಲಿ ರೂ. 1200 ಕೋಟಿಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡುವುದರ ಮೂಲಕ ಮಾಸ್ ಹಿಟ್ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಹೊರಹೊಮ್ಮಿತು. ಕೆಜಿಎಫ್ 2 ರಲ್ಲಿ ಯಶ್, ಸಂಜಯ್ ದತ್, ರವೀನಾ ಟಂಡನ್ ಮತ್ತು ಶ್ರೀನಿಧಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಾಳವಿಕಾ ಅವಿನಾಶ್, ಪ್ರಕಾಶ್ ರಾಜ್, ಈಶ್ವರಿ ರಾವ್ ಮತ್ತು ಚರಣ್ ಸಹ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಯಶ್ ಅವರ ಬಾಲ್ಯದ ಪಾತ್ರವನ್ನು ಅನ್ಮೋಲ್ ವಿಜಯ್ ಭಟ್ಕಳ್ ಎಂಬ ಹುಡುಗ ನಿರ್ವಹಿಸಿದ್ದಾರೆ.

ಎರಡನೇ ಭಾಗದ ಕೊನೆಯಲ್ಲಿ ಯಶ್ ಸಾಯುತ್ತಿರುವುದನ್ನು ತೋರಿಸಲಾಗಿದ್ದರೂ, ಕೆಜಿಎಫ್ ಮೂರನೇ ಭಾಗದಲ್ಲಿ ರಾಕಿಭಾಯ್‌ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.. ಹೀಗಿರುವಾಗ ನಿರ್ದೇಶಕ ಪ್ರಶಾಂತ್ ನೀಲ್ ಇತ್ತೀಚೆಗೆ ಚಿತ್ರದ ಮೂರನೇ ಭಾಗದ ಬಗ್ಗೆ ಮಾತನಾಡಿದ್ದಾರೆ. ಕೆಜಿಎಫ್ ಮೂರನೇ ಭಾಗವಾಗುವುದು ಖಚಿತ. ಅದಕ್ಕಾಗಿ ಕಥೆಯೂ ಸಿದ್ಧವಾಗಿದೆ. ಎಲ್ಲವೂ ಪ್ಲಾನ್ ಆದ ನಂತರ ಚಿತ್ರೀಕರಣ ಶುರುವಾಗಲಿದೆ ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News