ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ದರೆ ಸಿಗಲಿದೆ ಪುರಸ್ಕಾರ

ರಸ್ತೆ ಅಪಘಾತಗಳಲ್ಲಿ, ಗಾಯಗೊಂಡ ವ್ಯಕ್ತಿಗೆ ಸಹಾಯ ಮಾಡಿದ ವ್ಯಕ್ತಿಯನ್ನು ಗುರುತಿಸಿ ಪ್ರಸ್ತಾಪಿಸಬೇಕು ಎಂದು ಪಾಟ್ನಾದ ಡಿಎಂ ಹೇಳಿದರು. ಅಂತಹ ವ್ಯಕ್ತಿಗಳಿಗೆ ಜಿಲ್ಲಾ ಆಡಳಿತವು ಟ್ರೋಫಿ ಮತ್ತು ಪ್ರಮಾಣಪತ್ರಗಳ ಜೊತೆಗೆ 2,500 ರೂಪಾಯಿ ನಗದು ನೀಡಲಿದೆ ಎಂದು ಅವರು ತಿಳಿಸಿದರು.

Last Updated : Jun 22, 2019, 02:52 PM IST
ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ದರೆ ಸಿಗಲಿದೆ ಪುರಸ್ಕಾರ title=

ಪಾಟ್ನಾ: ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವವರಿಗೆ ಆಡಳಿತದ ವತಿಯಿಂದ ಬಹುಮಾನ ನೀಡಲಾಗುವುದು ಎಂದು ಪಾಟ್ನಾ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಸಭೆಯಲ್ಲಿ ಡಿಎಂ ಕುಮಾರ್ ರವಿ ಘೋಷಿಸಿದರು. 

ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆತರಲು ಆಂಬ್ಯುಲೆನ್ಸ್‌ಗಳನ್ನು ತಕ್ಷಣ ಒದಗಿಸಬೇಕು ಎಂದು ನಿರ್ದೇಶಿಸಿದ ಅವರು, ಅಂತಹ ವ್ಯವಸ್ಥೆಯಿಂದ ಜೀವವನ್ನು ಉಳಿಸಬಹುದು. ಸಿವಿಲ್ ಸರ್ಜನ್ ಅದನ್ನು ಖಚಿತಪಡಿಸಿಕೊಳ್ಳಿ ಎಂದು ಹೇಳಿದರು.

ಇದಕ್ಕಾಗಿ ಅವರು ಹೋರ್ಡಿಂಗ್ಸ್ ಮತ್ತು ಕರಪತ್ರಗಳ ಬೆಂಬಲವನ್ನು ಬಳಸುವ ಬಗ್ಗೆಯೂ ಮಾತನಾಡಿದ ಅವರು, ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಸಹಾಯ ಮಾಡಿದ ವ್ಯಕ್ತಿಯನ್ನು ಗುರುತಿಸಿ ಪ್ರಸ್ತಾವನೆ ನೀಡಬೇಕು ಎಂದರು. ಅಂತಹ ವ್ಯಕ್ತಿಗಳಿಗೆ ಜಿಲ್ಲಾ ಆಡಳಿತವು ಟ್ರೋಫಿ ಮತ್ತು ಪ್ರಮಾಣಪತ್ರಗಳ ಜೊತೆಗೆ ಎರಡೂವರೆ ಸಾವಿರ ರೂಪಾಯಿ ನಗದು ನೀಡಲಿದೆ ಎಂದು ಅವರು ತಿಳಿಸಿದರು.

ವಾಹನವನ್ನು ವೇಗವಾಗಿ ಚಲಿಸುವ, ಮದ್ಯ ಸೇವಿಸಿ ವಾಹನ ಚಾಲಿಸುವವರ ವಿರುದ್ಧ ಅಭಿಯಾನ ನಡೆಸುವ ಮೂಲಕ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಸಾರಿಗೆ ಅಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ (ಸಂಚಾರ) ಮತ್ತು ಮೋಟಾರು ವಾಹನ ನಿರೀಕ್ಷಕರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. 

ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ರಸ್ತೆಗಳನ್ನೂ ಮೊದಲು ಸುಧಾರಿಸಿ. ಮಾನವ ದೋಷದಿಂದಾಗಿ ಹೆಚ್ಚಿನ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ಸುರಕ್ಷತೆ ಜಾಗೃತಿ ಅಭಿಯಾನವನ್ನು ನಡೆಸಬೇಕು. ಏಕಮುಖ ಮಾರ್ಗದ ಸಂಚಾರದ ಯೋಜನೆ ಪ್ರಸ್ತಾಪವನ್ನು ಶೀಘ್ರದಲ್ಲೇ ಸಲ್ಲಿಸುವಂತೆ ಎಸ್‌ಪಿಗೆ ಸೂಚಿಸಿದರು.

ಗಾಯಾಳುಗಳಿಗೆ ಸಹಾಯ ಮಾಡಿದ ವ್ಯಕ್ತಿಗೆ ಜಿಲ್ಲಾ ಆಡಳಿತವು 2500 ರೂ.ಗಳ ನಗದು ಜೊತೆಗೆ ಟ್ರೋಫಿ ಮತ್ತು ಪ್ರಮಾಣಪತ್ರವನ್ನು ನೀಡಲಿದೆ. ಈ ವ್ಯವಸ್ಥೆಯನ್ನು ಶೀಘ್ರದಲ್ಲೇ ತಲುಪಿಸುವ ಜವಾಬ್ದಾರಿಯನ್ನು ಸಿವಿಲ್ ಸರ್ಜನ್‌ಗೆ ನೀಡಲಾಗಿದೆ. ರಸ್ತೆ ಅಪಘಾತ ಸಂಭವಿಸಿದ ಕೂಡಲೇ ಆಂಬುಲೆನ್ಸ್‌ಗಳನ್ನು ಸ್ಥಳಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಲಾಗಿದೆ. ಬಣ್ಣರಹಿತ ಜೀಬ್ರಾ ಕ್ರಾಸಿಂಗ್ ಅನ್ನು ಆಗಸ್ಟ್ 15 ರವರೆಗೆ ಬಣ್ಣ ಮಾಡಲು ಸೂಚಿಸಲಾಗಿದೆ.

Trending News