ಬಿಜೆಪಿ ತ್ಯಜಿಸಿದ ಬಳಿಕ 'ಮಾರ್ಕೆಟಿಂಗ್ ಕಂಪನಿ' ಎಂದ ಪಾಟಿದಾರ್ ನಾಯಕಿ !

ಪಾಟಿದಾರ್ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೇಷ್ಮಾ ಪಟೇಲ್ ಬಿಜೆಪಿಯನ್ನು ತ್ಯಜಿಸಿದ ಬಳಿಕ ಮಾರ್ಕೆಟಿಂಗ್ ಕಂಪನಿ ಎಂದು ವ್ಯಂಗ್ಯವಾಡಿದ್ದಾರೆ.

Last Updated : Mar 16, 2019, 10:31 AM IST
ಬಿಜೆಪಿ ತ್ಯಜಿಸಿದ ಬಳಿಕ 'ಮಾರ್ಕೆಟಿಂಗ್ ಕಂಪನಿ' ಎಂದ ಪಾಟಿದಾರ್ ನಾಯಕಿ ! title=

ನವದೆಹಲಿ: ಪಾಟಿದಾರ್ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೇಷ್ಮಾ ಪಟೇಲ್ ಬಿಜೆಪಿಯನ್ನು ತ್ಯಜಿಸಿದ ಬಳಿಕ ಮಾರ್ಕೆಟಿಂಗ್ ಕಂಪನಿ ಎಂದು ವ್ಯಂಗ್ಯವಾಡಿದ್ದಾರೆ.

ಶುಕ್ರವಾರದಂದು ಬಿಜೆಪಿ ಅಧ್ಯಕ್ಷ ಜಿತು ವಾಘನಿ ಅವರಿಗೆ ರಾಜಿನಾಮೆ ಪತ್ರ ಸಲ್ಲಿಸಿದ ಪತ್ರದಲ್ಲಿ ಅವರು "ಬಿಜೆಪಿ ಈಗ ಮಾರ್ಕೆಟಿಂಗ್ ಕಂಪನಿಯಾಗಿದೆ. ಅವರ ತಪ್ಪು ನೀತಿಗಳನ್ನು ಮತ್ತು ಸುಳ್ಳು ಯೋಜನೆಗಳನ್ನು ಮಾರುಕಟ್ಟೆಗೆ ತರುವುದನ್ನು ನಮಗೆ ಕಲಿಸಲಾಗುತ್ತಿದೆ. ಆ ಮೂಲಕ ಜನರನ್ನು ಮೋಸಗೊಳಿಸಲಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

"ಆದರೆ ನಾವು ಸಾರ್ವಜನಿಕರಿಗೆ ಸೇವೆ ಸಲ್ಲಿಸಿ ಮತ್ತು ದೇಶದಲ್ಲಿ ಸಕಾರಾತ್ಮಕ ಬದಲಾವಣೆ ಕೆಲಸವನ್ನು ತರಲು ನಾವು ಬಯಸುತ್ತೇವೆ. ಆದರೆ ಬಿಜೆಪಿ ನಾಯಕರ ನಿರಂಕುಶ ವರ್ತನೆ ಯಾವಾಗಲೂ ಕಾರ್ಯಕರ್ತರನ್ನು ಮಾತ್ರ ಶ್ರಮವಹಿಸುವಂತೆ ಮಾಡಿದೆ.ಆದ್ದರಿಂದ ಈ ದುಃಖ ಮತ್ತು ಅನ್ಯಾಯದೊಂದಿಗೆ ಪಕ್ಷದಲ್ಲಿರಲು ನಾನು ಇಚ್ಚಿಸುವುದಿಲ್ಲ ಅಂತಹ ನಿರಂಕುಶಾಧಿಕಾರದಿಂದ ನನ್ನನನ್ನು ಮುಕ್ತಗೊಳಿಸಿ ಸಾರ್ವಜನಿಕ ಹಿತಾಸಕ್ತಿಗಾಗಿ ರಾಜೀನಾಮೆ ನೀಡುತ್ತಿದ್ದೇನೆ" ಎಂದು ತಿಳಿಸಿದರು.

ಪಾಟಿದಾರ್ ಚಳುವಳಿಯ ನಾಯಕ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಂತರ ರೇಷ್ಮಾ ಪಟೇಲ್ ಬಿಜೆಪಿಗೆ ರಾಜೀನಾಮೆ ನೀಡುತ್ತಿರುವುದು ಈಗ ಕೂತುಹಲ ಕೆರಳಿಸಿದೆ.

 

Trending News