Indigo ವಿಮಾನದಲ್ಲಿ ಮೊಬೈಲ್ ಚಾರ್ಜ್ ಮಾಡಲು ಕಾಕ್ ಪಿಟ್ ಪ್ರವೇಶಿಸಿದ ಪ್ರಯಾಣಿಕ!

ವಿಮಾನ ಇನ್ನೇನು ಟೆಕ್ ಆಫ್ ಆಗಬೇಕು ಎನ್ನುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಆತ ಮದ್ಯಪಾನ ಮಾಡಿದ್ದ ಎಂದು ತಿಳಿದುಬಂದಿದೆ. 

Last Updated : Sep 26, 2018, 04:00 PM IST
Indigo ವಿಮಾನದಲ್ಲಿ ಮೊಬೈಲ್ ಚಾರ್ಜ್ ಮಾಡಲು ಕಾಕ್ ಪಿಟ್ ಪ್ರವೇಶಿಸಿದ ಪ್ರಯಾಣಿಕ! title=

ನವದೆಹಲಿ: ಮೊಬೈಲ್ ಚಾರ್ಜ್ ಮಾಡಲೆಂದು ವಿಮಾನದ ಕಾಕ್ ಪಿಟ್ ಒಳಗೆ ಪ್ರವೇಶಿಸಿದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ ಘಟನೆ ಇಂಡಿಗೋದ ಕೋಲ್ಕತ್ತಾ ಬೌಂಡ್ ವಿಮಾನದಲ್ಲಿ ಸೋಮವಾರ ನಡೆದಿದೆ. 

ವಿಮಾನ ಇನ್ನೇನು ಟೆಕ್ ಆಫ್ ಆಗಬೇಕು ಎನ್ನುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಆತ ಮದ್ಯಪಾನ ಮಾಡಿದ್ದ ಎಂದು ತಿಳಿದುಬಂದಿದೆ. ಆ ಕೂಡಲೇ ಆತನನ್ನು ವಿಮಾನದಿಂದ ಹೊರಗೆ ಕಳುಹಿಸಲಾಗಿದೆ. ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ವಿಚಾರಣೆ ನಂತರ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 

ಈ ಬಗ್ಗೆ ಹೇಳಿಕೆ ನೀಡಿರುವ ಇಂಡಿಗೋ ವಕ್ತಾರ, "ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಮುಂಬೈನಿಂದ ಕೊಲ್ಕತ್ತಾಗೆ ತೆರಳುತ್ತಿದ್ದ 6E-395 ವಿಮಾನದ ಕ್ಯಾಪ್ಟನ್ ಆ ಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿಸಿದ್ದಾರೆ" ಎಂದಿದ್ದಾರೆ. 

Trending News