ಪಾಕಿಸ್ತಾನಿಗಳು ಭಾರತಕ್ಕೆ ಬರಬಹುದಾದಲ್ಲಿ...ಮಹಾರಾಷ್ಟ್ರದವರು ಬೆಳಗಾವಿಗೆ ಹೋಗಲು ಸಾಧ್ಯವಿಲ್ಲವೇಕೆ?- ಸಂಜಯ್ ರೌತ್

ಶಿವಸೇನೆ ಮುಖಂಡ ಸಂಜಯ್ ರೌತ್ ಅವರು ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರವನ್ನು ಬೆಳಗಾವಿಗೆ ಭೇಟಿ ನೀಡುವುದನ್ನು ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

Last Updated : Jan 18, 2020, 10:44 PM IST
ಪಾಕಿಸ್ತಾನಿಗಳು ಭಾರತಕ್ಕೆ ಬರಬಹುದಾದಲ್ಲಿ...ಮಹಾರಾಷ್ಟ್ರದವರು ಬೆಳಗಾವಿಗೆ ಹೋಗಲು ಸಾಧ್ಯವಿಲ್ಲವೇಕೆ?- ಸಂಜಯ್ ರೌತ್ title=

ನವದೆಹಲಿ: ಶಿವಸೇನೆ ಮುಖಂಡ ಸಂಜಯ್ ರೌತ್ ಅವರು ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರವನ್ನು ಬೆಳಗಾವಿಗೆ ಭೇಟಿ ನೀಡುವುದನ್ನು ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

"ಪಾಕಿಸ್ತಾನಿ, ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾಗಳು ಭಾರತಕ್ಕೆ ಪ್ರವೇಶಿಸಬಹುದು, ಆದರೆ ಮಹಾರಾಷ್ಟ್ರದಿಂದ ಯಾರೂ ಬೆಳಗಾವಿಗೆ ಹೋಗಲು ಸಾಧ್ಯವಿಲ್ಲ ಎನ್ನುವುದು ತಪ್ಪು. ವಿವಾದವಿದೆ ನಿಜ, ಆದರೆ ಅದು ಪರಸ್ಪರರ ಮೇಲೆ ನಿರ್ಬಂಧಗಳನ್ನು ಹೇರುವಷ್ಟು ಇರಬಾರದು" ಎಂದು ರೌತ್ ಮುಂಬೈನಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

ಬೆಳಗಾವಿಯಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯ ಕಾರ್ಯಕ್ರಮವಿದೆ ಮತ್ತು ಜನರೊಂದಿಗೆ ಮಾತನಾಡಲು ನಾನು ಅಲ್ಲಿಗೆ ಹೋಗುತ್ತೇನೆ. ನಿರ್ಬಂಧಗಳನ್ನು ವಿಧಿಸಿದ್ದರೆ, ಆಗಲಿ" ಎಂದು ಅವರು ಹೇಳಿದರು. ಈ ಹಿಂದೆ, ಮಹಾರಾಷ್ಟ್ರ ಸಚಿವ ರಾಜೇಂದ್ರ ಪಾಟೀಲ್ ಯೆಡ್ರಾವ್ಕರ್ ಅವರು ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುವುದಕ್ಕೆ ಅಡ್ಡಿಪಡಿಸಲಾಯಿತು.

ಯಾದ್ರವ್ಕರ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಮತ್ತು 1980 ರ ದಶಕದಲ್ಲಿ ಭಾಷಾ ಗಲಭೆಯಲ್ಲಿ ಮೃತಪಟ್ಟ ಮರಾಠಿ ಪರ ಕಾರ್ಯಕರ್ತರ ನೆನಪಿಗಾಗಿ ಆಯೋಜಿಸಲಾದ ಹುತಾತ್ಮರ ದಿನದ ಕಾರ್ಯಕ್ರಮದಲ್ಲಿ ಮಾತನಾಡುವುದನ್ನು ಸ್ಥಗಿತಗೋಳಿಸಲಾಯಿತು. 

Trending News