ಕಾಶ್ಮೀರದ ಪೂಂಚ್ ನಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕ್

 ಕದನ ವಿರಾಮ ಉಲ್ಲಂಘನೆಯ ಮತ್ತೊಂದು ಘಟನೆಯಲ್ಲಿ, ಪಾಕಿಸ್ತಾನ ಪಡೆಗಳು ಶನಿವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಶಹಪುರ್ ಮತ್ತು ಕಿರ್ನಿ ವಲಯಗಳಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. 

Last Updated : Nov 30, 2019, 06:09 PM IST
ಕಾಶ್ಮೀರದ ಪೂಂಚ್ ನಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕ್  title=

ಪೂಂಚ್:  ಕದನ ವಿರಾಮ ಉಲ್ಲಂಘನೆಯ ಮತ್ತೊಂದು ಘಟನೆಯಲ್ಲಿ, ಪಾಕಿಸ್ತಾನ ಪಡೆಗಳು ಶನಿವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಶಹಪುರ್ ಮತ್ತು ಕಿರ್ನಿ ವಲಯಗಳಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. 

ಆರಂಭಿಕ ವರದಿಗಳ ಪ್ರಕಾರ ಪಾಕಿಸ್ತಾನದ ಸೈನ್ಯವು ಸಣ್ಣ ಶಸ್ತ್ರಾಸ್ತ್ರಗಳನ್ನು ಬಳಸಿತು. ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತೀಯ ಸ್ಥಾನಗಳನ್ನು ಗುರಿಯಾಗಿಸಿಕೊಂಡು  ಗುಂಡುಗಳನ್ನು ಹಾರಿಸಿತು. ಪಾಕಿಸ್ತಾನದ ಕಡೆಯಿಂದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತದ ಸೇನೆ ಬಲವಾದ ಪ್ರತಿಕ್ರಿಯೆ ನೀಡಿದೆ ಎನ್ನಲಾಗಿದೆ. ಕಾಶ್ಮೀರ ಕಣಿವೆಯಲ್ಲಿ ಶಾಂತಿಯನ್ನು ಭಂಗಗೊಳಿಸುವ ಯತ್ನದಲ್ಲಿ ಪಾಕಿಸ್ತಾನವು 2019 ರ ಜನವರಿಯಿಂದ ನವೆಂಬರ್ 15 ರ ನಡುವೆ ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ನಿಯಂತ್ರಣ ರೇಖೆಯ (ಎಲ್‌ಒಸಿ) 2,500 ಕ್ಕೂ ಹೆಚ್ಚು ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ.

ಅಕ್ಟೋಬರ್‌ನಲ್ಲಿಯೇ 350 ಕ್ಕೂ ಹೆಚ್ಚು ಕದನ ವಿರಾಮ ಉಲ್ಲಂಘನೆ ನಡೆದಿದ್ದು, ಇದು 2019 ರ 10 ತಿಂಗಳಲ್ಲಿ ಅತಿ ಹೆಚ್ಚು ಎಂದು ಭಾರತೀಯ ಸೇನೆಯ ವರದಿಯಲ್ಲಿ ತಿಳಿಸಲಾಗಿದೆ.ನವೆಂಬರ್ ತಿಂಗಳ ಮೊದಲ 11 ದಿನಗಳಲ್ಲಿ, ಪಾಕಿಸ್ತಾನ  97 ಕದನ ವಿರಾಮ ಉಲ್ಲಂಘಿಸಿರುವ ಬಗ್ಗೆ ವರದಿಯಾಗಿದೆ.
 

Trending News