ಮಹಿಳೆಯರು, ಮಕ್ಕಳ ವಿರುದ್ಧ ಸೈಬರ್ ಕ್ರೈಂ ತಡೆಯಲು 27,000 ಪೋಲಿಸ್ ಸಿಬ್ಬಂದಿಗೆ ತರಬೇತಿ

ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಸೈಬರ್ ಅಪರಾಧಗಳನ್ನು ನಿಭಾಯಿಸಲು ಗೃಹ ಸಚಿವಾಲಯ ದೇಶದಾದ್ಯಂತ 27,500 ಪೊಲೀಸ್ ಸಿಬ್ಬಂದಿಗಳಿಗೆ ತರಬೇತಿ ನೀಡಲಿದೆ.

Last Updated : Mar 6, 2018, 05:36 PM IST
ಮಹಿಳೆಯರು, ಮಕ್ಕಳ ವಿರುದ್ಧ ಸೈಬರ್ ಕ್ರೈಂ ತಡೆಯಲು 27,000 ಪೋಲಿಸ್ ಸಿಬ್ಬಂದಿಗೆ ತರಬೇತಿ title=

ನವದೆಹಲಿ : ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಸೈಬರ್ ಅಪರಾಧಗಳನ್ನು ನಿಭಾಯಿಸಲು ಗೃಹ ಸಚಿವಾಲಯ ದೇಶದಾದ್ಯಂತ 27,500 ಪೊಲೀಸ್ ಸಿಬ್ಬಂದಿಗಳಿಗೆ ತರಬೇತಿ ನೀಡಲಿದೆ ಎಂದು ಲೋಕಸಭೆ ಮಂಗಳವಾರ ತಿಳಿಸಿದೆ.

"ಮಹಿಳಾ ಮತ್ತು ಮಕ್ಕಳ ವಿರುದ್ಧದ ಸೈಬರ್ ಅಪರಾಧ ತಡೆಗಟ್ಟುವಿಕೆ ಕಾಯ್ದೆಯನ್ನು ಗೃಹ ವ್ಯವಹಾರಗಳ ಸಚಿವಾಲಯವು 2017-2020 ಅವಧಿಗೆ ಅನುಷ್ಠಾನಗೊಳಿಸುತ್ತಿದ್ದು, ಸೈಬರ್ ಡೊಮೇನ್ ಕ್ಷೇತ್ರದಲ್ಲಿ ದೇಶದಾದ್ಯಂತ 27,500 ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡುವ ಗುರಿ ಹೊಂದಿದೆ" ಎಂದು ಗೃಹ ಖಾತೆ ಸಚಿವ ಹನ್ಸ್ರಾಜ್ ಗಂಗರಾಮ್ ಅಹಿರ್ ಹೇಳಿದ್ದಾರೆ.

ಅಲ್ಲದೆ, ಇತ್ತಿಚೆಗೆ ಮಕ್ಕಳ ಆತ್ಮಹತ್ಯೆಗೆ ಪ್ರೇರೇಪಿಸುವ ಬ್ಲೂ ವೇಲ್ ಆನ್ಲೈನ್ ಚಾಲೆಂಜ್ ಕುರಿತಾಗಿಯೂ ನಿಕಟ ಮೇಲ್ವಿಚಾರಣೆ ನಡೆಸಲು ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳಿಗೆ ನಿರ್ದೇಶಿಸಿದೆ ಎಂದು ಅವರು ಹೇಳಿದ್ದಾರೆ. 

Trending News