ರಾಜ್ಯದಲ್ಲಿ ಭ್ರಷ್ಟ ಆಡಳಿತವನ್ನು ನೀಡುವುದು ನಮ್ಮ ಸರ್ಕಾರದ ಗುರಿ...!- ಆಂಧ್ರ ಪ್ರದೇಶ ಡಿಸಿಎಂ

 ಹೌದು, ಹೀಗೆ ಹೇಳಿದ್ದು ಬೇರೆ ಯಾರು ಅಲ್ಲ ...ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪಿ ಪುಷ್ಪಾ ಶ್ರೀವಾಣಿ.

Last Updated : Jun 16, 2019, 01:02 PM IST
ರಾಜ್ಯದಲ್ಲಿ ಭ್ರಷ್ಟ ಆಡಳಿತವನ್ನು ನೀಡುವುದು ನಮ್ಮ ಸರ್ಕಾರದ ಗುರಿ...!- ಆಂಧ್ರ ಪ್ರದೇಶ ಡಿಸಿಎಂ  title=
photo:ani

ನವದೆಹಲಿ:  ಹೌದು, ಹೀಗೆ ಹೇಳಿದ್ದು ಬೇರೆ ಯಾರು ಅಲ್ಲ ...ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪಿ ಪುಷ್ಪಾ ಶ್ರೀವಾಣಿ.

ಶನಿವಾರದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪಿ ಪುಷ್ಪಾ ಶ್ರೀವಾಣಿ ಬಾಯಿ ತಪ್ಪಿ " ರಾಜ್ಯದಲ್ಲಿ ಭ್ರಷ್ಟ ಆಡಳಿತವನ್ನು ನೀಡುವುದು ನಮ್ಮ ಸರ್ಕಾರದ ಗುರಿ" ಹೇಳಿರುವುದು ಈಗ ನೂತನವಾಗಿ ಅಧಿಕಾರಕ್ಕೆ ಬಂದ ಸರ್ಕಾರಕ್ಕೆ ಈಗ ಈ ಹೇಳಿಕೆ ಇರಿಸುಮುರಿಸು ಉಂಟು ಮಾಡಿದೆ.

ಭಾಷಣದ ವೇಳೆ ಅವರು ಭ್ರಷ್ಟಾಚಾರ ಮುಕ್ತ ಸರ್ಕಾರ ಎಂದು ಹೇಳಬೇಕಾಗಿದ್ದ ಅವರು ಭ್ರಷ್ಟಾಚಾರದ ಆಡಳಿತ ಎಂದು ಹೇಳಿ ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೆ ಮೊದಲ ಬಾರಿಗೆ  ಶ್ರೀವಾಣಿ ತಮ್ಮ ಜಿಲ್ಲೆಗೆ ಭೇಟಿ ನೀಡಿದ್ದಾರೆ.ಈ  ಹೇಳಿಕೆಗೆ ವ್ಯಂಗವಾಡಿರುವ  ತೆಲುಗು ದೇಶಂ ಅಧಿಕೃತ ಟ್ವಿಟ್ಟರ್ ಖಾತೆ ತನ್ನ ಟ್ವೀಟ್ ನಲ್ಲಿ " ಧನ್ಯವಾದಗಳು ಮೇಡಂ ನಿಮ್ಮ ಉದ್ದೇಶದ ಬಗ್ಗೆ ಮಾತನಾಡಿದ್ದಕ್ಕೆ ,ನಿಮ್ಮ ಹೇಳಿಕೆಯನ್ನು ನಾವು ಒಪ್ಪುತ್ತೇವೆ " ಎಂದು ಹೇಳಿದೆ.

ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕಳೆದ ವಾರ ರಾಜ್ಯದ ವಿವಿಧ ಸಾಮಾಜಿಕ ಗುಂಪುಗಳನ್ನು ಪ್ರತಿನಿಧಿಸುವ ಐದು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಿದ್ದರು.ಇತ್ತೀಚೆಗೆ ನಡೆದ ಚುನಾವಣೆಯಲ್ಲಿ, ಜಗನ್ ಮೋಹನ್ ರೆಡ್ಡಿ-ನೇತೃತ್ವದ ವೈಎಸ್ಆರ್ ಕಾಂಗ್ರೆಸ್ 151 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂದಿತ್ತು. ಇನ್ನೊಂದೆಡೆ ಎನ್ ಚಂದ್ರಬಾಬು ನಾಯ್ಡು ಪಕ್ಷ ವಿಧಾನಸಭೆಯಲ್ಲಿ 23 ಸ್ಥಾನಗಳನ್ನು ಮಾತ್ರ ಸಾಧ್ಯವಾಗಿತ್ತು.

Trending News