Optical Illusion: ಹದ್ದಿನಂತ ಕಣ್ಣು ನಿಮ್ಮದಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಹಾವನ್ನು 10 ಸೆಕೆಂಡುಗಳಲ್ಲಿ ಪತ್ತೆಹಚ್ಚಿ! ಜೀನಿಯಸ್’ಗೆ ಮಾತ್ರ ಸಾಧ್ಯ

Optical Illusion: ಈ ಚಿತ್ರದಲ್ಲಿ ಕಾಡೊಂದು ಕಾಣಿಸುತ್ತಿದೆ. ಹಸಿರು ಉದ್ಯಾನಗಳು ಸಹ ಗೋಚರಿಸುತ್ತಿವೆ. ಇದೆಲ್ಲದರ ನಡುವೆ ಹಾವೊಂದು ಅಡಗಿ ಕೂತಿದೆಯಂತೆ. ಅದನ್ನೇ ನೀವು ಹುಡುಕಿ ಹೇಳಬೇಕು. ಹಾವು ಇರುವ ಸ್ಥಳವನ್ನು ನೀವು ಕಂಡು ಹಿಡಿದರೆ, ನೀವು ನಿಜವಾಗಿಯೂ ಹದ್ದಿನ ಕಣ್ಣುಗಳನ್ನು ಹೊಂದಿದ್ದೀರಿ ಎಂದು ಹೇಳಬಹುದು.

Written by - Bhavishya Shetty | Last Updated : May 27, 2023, 11:40 AM IST
    • ಆಪ್ಟಿಕಲ್ ಇಲ್ಯೂಶನ್ ಸಂಬಂಧಿತ ಫೋಟೋಗಳನ್ನು ನೋಡಿರಬಹುದು
    • ಅಂತಹದ್ದೇ ಒಂದು ಆಪ್ಟಿಕಲ್ ಇಲ್ಯೂಷನ್ ಚಿತ್ರವು ಮುನ್ನೆಲೆಗೆ ಬಂದಿವೆ
    • ಹಸಿರು ಉದ್ಯಾನಗಳು ಸಹ ಗೋಚರಿಸುತ್ತಿವೆ. ಇದೆಲ್ಲದರ ನಡುವೆ ಹಾವೊಂದು ಅಡಗಿ ಕೂತಿದೆಯಂತೆ
Optical Illusion: ಹದ್ದಿನಂತ ಕಣ್ಣು ನಿಮ್ಮದಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಹಾವನ್ನು 10 ಸೆಕೆಂಡುಗಳಲ್ಲಿ ಪತ್ತೆಹಚ್ಚಿ! ಜೀನಿಯಸ್’ಗೆ ಮಾತ್ರ ಸಾಧ್ಯ title=
Optical Illusion

Optical Illusion: ನೀವು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಆಪ್ಟಿಕಲ್ ಇಲ್ಯೂಶನ್ ಸಂಬಂಧಿತ ಫೋಟೋಗಳನ್ನು ನೋಡಿರಬಹುದು. ಇದು ಮೆದುಳಿಗೆ ಚುರುಕುತನ ಎಷ್ಟಿದೆ ಎಂದು ಸವಾಲೆಸೆದರೆ, ಕಣ್ಣು ಎಷ್ಟು ಶಾರ್ಪ್ ಆಗಿದೆ ಎಂದು ತಿಳಿಯುವಂತೆ ಮಾಡುತ್ತದೆ. ಇದೀಗ ಅಂತಹದ್ದೇ ಒಂದು ಆಪ್ಟಿಕಲ್ ಇಲ್ಯೂಷನ್ ಚಿತ್ರವು ಮುನ್ನೆಲೆಗೆ ಬಂದಿವೆ.

ಇದನ್ನೂ ಓದಿ: WTC Finalಗೂ ಮುನ್ನ ಟೀಂ ಇಂಡಿಯಾದ ಈ ಬ್ಯಾಟ್ಸ್’ಮನ್ ಅಬ್ಬರ: ಆಸೀಸ್ ಪಡೆಗೆ ದುಃಸ್ವಪ್ನವಾಗುವುದು...

ಇಂಥದ್ದೊಂದು ಚಿತ್ರ ಕಣ್ಮುಂದೆ ಬಂದಿದ್ದು ನಿಮಗೆ ಸವಾಲೆಸೆಯುತ್ತಿದೆ. ಈ ಚಿತ್ರದಲ್ಲಿ ಕಾಡೊಂದು ಕಾಣಿಸುತ್ತಿದೆ. ಹಸಿರು ಉದ್ಯಾನಗಳು ಸಹ ಗೋಚರಿಸುತ್ತಿವೆ. ಇದೆಲ್ಲದರ ನಡುವೆ ಹಾವೊಂದು ಅಡಗಿ ಕೂತಿದೆಯಂತೆ. ಅದನ್ನೇ ನೀವು ಹುಡುಕಿ ಹೇಳಬೇಕು. ಹಾವು ಇರುವ ಸ್ಥಳವನ್ನು ನೀವು ಕಂಡು ಹಿಡಿದರೆ, ನೀವು ನಿಜವಾಗಿಯೂ ಹದ್ದಿನ ಕಣ್ಣುಗಳನ್ನು ಹೊಂದಿದ್ದೀರಿ ಎಂದು ಹೇಳಬಹುದು.

ಇತ್ತೀಚೆಗೆ ಈ ಚಿತ್ರವನ್ನು ಸಾಮಾಜಿಕ ಮಾಧ್ಯಮವನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳಲ್ಲಿ ಹಂಚಿಕೊಳ್ಳಲಾಗಿದೆ. ಆ ಹಾವು ಅಷ್ಟು ಸುಲಭದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಈ ಚಿತ್ರವು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳಂತೆ ಸರಳವಾಗಿಲ್ಲ. ಏಕೆಂದರೆ ಈ ಚಿತ್ರದ ಬಣ್ಣವನ್ನು ಕೂಡ ಹಾವಿನ ಬಣ್ಣದಿಂದ ಮಾಡಲಾಗಿದೆ. ಅಥವಾ ಈ ಚಿತ್ರದಲ್ಲಿ ಕಾಣುವ ಹಸಿರು ಬಣ್ಣಕ್ಕೆ ಅನುಗುಣವಾಗಿ ಹಾವುಗಳ ಬಣ್ಣವನ್ನು ಹೊಂದಿಸಲಾಗಿದೆ ಎಂದು ಹೇಳಬಹುದು.

ಈ ಚಿತ್ರದಲ್ಲಿ ಕೆಲವು ಮರಗಳನ್ನು ತೋರಿಸಲಾಗಿದೆ. ಇದಲ್ಲದೇ ಚಿಕ್ಕ ಕೊಳವನ್ನು ತೋರಿಸಲಾಗಿದೆ. ಕೊಳದ ಪಕ್ಕದಲ್ಲಿ ಒಂದು ಚಿಕ್ಕ ಉದ್ಯಾನವಿದ್ದು ಅದರಲ್ಲಿ ಕೆಲವು ದೊಡ್ಡ ಮರದ ಭಾಗಗಳನ್ನು ಇಡಲಾಗಿದೆ. ನೆಲದ ಮೇಲೆ ಗೋಚರಿಸುವ ಹುಲ್ಲು ಕೂಡ ಹಸಿರು. ಇವೆಲ್ಲವುಗಳ ವಿಶೇಷವೆಂದರೆ, ಇವೆಲ್ಲವೂ ಒಂದೇ ಬಣ್ಣ, ಅಂದರೆ ಹಸಿರು ಬಣ್ಣದಲ್ಲಿ ಕಾಣುತ್ತವೆ. ಇವುಗಳಲ್ಲಿ ಅಡಗಿರುವ ಹಾವನ್ನು ನೀವು ಕಂಡುಹಿಡಿಯಬೇಕು.

ಇದನ್ನೂ ಓದಿ: ಈ ರಾಶಿಯವರಿಗೆ ಇಂದು ಶನಿಕೃಪೆ: ಅಂದುಕೊಂಡ ಕಾರ್ಯದಲ್ಲಿ ಯಶಸ್ಸು-ವ್ಯಾಪಾರಾಭಿವೃದ್ಧಿ ಖಚಿತ!

ಸರಿಯಾದ ಉತ್ತರ ಯಾವುದು ಏನು ಗೊತ್ತಾ…?

ಹಾವು ಎಲ್ಲಿದೆ ಎಂದು ಕಂಡುಹಿಡಿಯಲು ಸಾಧ್ಯವಾಗದಿದ್ದರೆ ಇಲ್ಲಿ ನಿಮಗೆ ಉತ್ತರವನ್ನು ತಿಳಿಸುತ್ತೇವೆ. ಎಚ್ಚರಿಕೆಯಿಂದ ನೋಡಿ. ಬಲಭಾಗದಲ್ಲಿ ದೊಡ್ಡ ಮರವೊಂದಿದೆ. ಅಲ್ಲಿಯೇ ಬಿದಿರಿನಂತೆ ಗೋಚರಿಸುವ ಕೆಲವು ಸಸ್ಯಗಳನ್ನು ಬೆಳೆಯುತ್ತಿದೆ. ಈ ಗಿಡಗಳಲ್ಲಿ ಬುಡದಲ್ಲಿ ಹಾವು ಸುತ್ತಿಕೊಂಡಿದೆ. ಸೂಕ್ಷ್ಮವಾಗಿ ಗಮನಿಸಿದರೆ ಗೋಚರಿಸುತ್ತದೆ. ತಮಾಷೆಯೆಂದರೆ ಹಾವು ಕೂಡ ಹಸಿರು ಬಣ್ಣದಲ್ಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News