LoC ನಲ್ಲಿ ರಾತ್ರಿ ಇಡೀ ಗುಂಡಿನ ದಾಳಿ ನಡೆಸಿದ ಪಾಕ್, ಓರ್ವ ಯೋಧ ಹುತಾತ್ಮ

ಪಾಕಿಸ್ತಾನವು ಗಡಿಯಲ್ಲಿ ಪದೇ ಪದೇ ತನ್ನ ಉದ್ಧಟತನವನ್ನು ಪ್ರದರ್ಶಿಸುತ್ತಿರುವ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ಗಡಿಯಿಂದ 3 ಕಿ.ಮೀ ದೂರದಲ್ಲಿರುವ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

Last Updated : May 18, 2018, 08:52 AM IST
LoC ನಲ್ಲಿ ರಾತ್ರಿ ಇಡೀ ಗುಂಡಿನ ದಾಳಿ ನಡೆಸಿದ ಪಾಕ್, ಓರ್ವ ಯೋಧ ಹುತಾತ್ಮ title=

ಶ್ರೀನಗರ: ಪಾಕಿಸ್ತಾನವು ನಿರಂತರವಾಗಿ ಗಡಿಪ್ರದೇಶದ ಕದನ ವಿರಾಮವನ್ನು ಉಲ್ಲಂಘಿಸಿದೆ. ಕಳೆದ ರಾತ್ರಿ ಜಮ್ಮು ಕಾಶ್ಮೀರದ ಆರ್ಎಸ್ ಪುರಾ ಸೆಕ್ಟರ್ನಲ್ಲಿ ಪಾಕಿಸ್ತಾನದ ಪಡೆಗಳು ಗುಂಡಿನ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಓರ್ವ ಬಿಎಸ್ಎಫ್ ಯೋಧ ಹುತಾತ್ಮರಾಗಿದ್ದಾರೆ. LoC ಗಡಿಪ್ರದೇಶದಲ್ಲಿ ಪಾಕಿಸ್ತಾನ ರಾತ್ರಿ ಇಡೀ ಗುಂಡಿನದಾಳಿ ನಡೆಸಿದ್ದು, ತನ್ನ ಉದ್ಧಟತನ ಪ್ರದರ್ಶಿಸಿದೆ. ರೇಂಜರ್ಸ್ ವಸತಿ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ಪಾಕ್ ಈ ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ನಾಗರೀಕರು ಗಾಯಗೊಂಡಿದ್ದಾರೆ.

ಪಾಕಿಸ್ತಾನ ಗುಂಡಿನ ದಾಳಿ ನಡೆಸುತ್ತಿದ್ದಂತೆ ಜನರನ್ನು ಮನೆಯಿಂದ ಹೊರಬರದಂತೆ ನಾಗರೀಕರಲ್ಲಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಅಲ್ಲದೆ, ಅಂತರರಾಷ್ಟ್ರೀಯ ಗಡಿಯಿಂದ 3 ಕಿಲೋಮೀಟರ್ ವ್ಯಾಪ್ತಿಯೊಳಗೆ ಇರುವ ಎಲ್ಲಾ ಶಾಲೆಗಳನ್ನು ಮುಚ್ಚಲು ಆಡಳಿತವು ಸೂಚನೆಗಳನ್ನು ನೀಡಿದೆ.

Trending News