ಹೋಳಿ ದಿನ ಮಧ್ಯಾಹ್ನ 2.30ರಿಂದ ಸಂಚರಿಸಲಿರುವ ಮೆಟ್ರೋ

ಮೆಟ್ರೋದಲ್ಲಿ ಪ್ರಯಾಣಿಕರಿಗಾಗಿ  ಕರೋನಾ ಮಾರ್ಗಸೂಚಿಯನ್ನು  ಕೂಡಾ ಬಿಡುಗಡೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಪ್ರಯಾಣಿಕರು ಈ ಮಾರ್ಗಸೂಚಿಗಳನ್ನು ನಿರ್ಲಕ್ಷಿಸುವಂತಿಲ್ಲ

Written by - Ranjitha R K | Last Updated : Mar 27, 2021, 05:51 PM IST
  • ಹೋಳಿಯ ದಿನ ಮಧ್ಯಾಹ್ನ 2: 30 ರ ನಂತರ ಮೆಟ್ರೋ ಸಂಚಾರ
  • DMRCಯಿಂದ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ
  • ಕರೋನಾ ನಿಯಮಗಳ ಉಲ್ಲಂಘನೆ ಮಾಡಿದರೆ ದಂಡ
ಹೋಳಿ ದಿನ ಮಧ್ಯಾಹ್ನ 2.30ರಿಂದ  ಸಂಚರಿಸಲಿರುವ ಮೆಟ್ರೋ  title=
ಹೋಳಿಯ ದಿನ ಮಧ್ಯಾಹ್ನ 2: 30 ರ ನಂತರ ಮೆಟ್ರೋ ಸಂಚಾರ (file photo)

ನವದೆಹಲಿ : ಸೋಮವಾರ ಹೋಳಿ ಹಬ್ಬ (Holi).  ಹೋಳಿ ಹಬ್ಬದ ಸಲುವಾಗಿ ಡಿಎಂಆರ್‌ಸಿ ಶನಿವಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದರ ಅನ್ವಯ ಹೋಳಿ ದಿನ ಮೆಟ್ರೋ ಸಂಚಾರದ (Metro timing) ಸಮಯದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಹೋಳಿಯ ದಿನ ಯಾವ ಸಮಯಕ್ಕೆ ಮೆಟ್ರೋ ಸಂಚರಿಸಲಿದೆ ಎಂಬ ಮಾಹಿತಿಯನ್ನು ನೀಡಲಾಗಿದೆ. 

ಹೋಳಿಯ ದಿನ ಮಧ್ಯಾಹ್ನ 2: 30 ರ ನಂತರ ಮೆಟ್ರೋ ಸಂಚಾರ : 
ದೆಹಲಿ ಮೆಟ್ರೋ ರೈಲು ನಿಗಮ (DMRC) ಶನಿವಾರ ಪ್ರಯಾಣಿಕರಿಗಾಗಿ ಹೊಸ ಮಾರ್ಗಸೂಚಿಯನ್ನು (New guidlines) ಬಿಡುಗಡೆ ಮಾಡಿದೆ. ಹೋಳಿ ಅಂದರೆ ಮಾರ್ಚ್ 29ರಂದು ಮಧ್ಯಾಹ್ನ 2: 30 ರವರೆಗೆ ಮೆಟ್ರೋ ಸೇವೆಗಳು ಲಭ್ಯವಿರುವುದಿಲ್ಲ.  ರಾಪಿಡ್ ಮೆಟ್ರೋ / ಏರ್ಪೋರ್ಟ್ ಎಕ್ಸ್‌ಪ್ರೆಸ್ ಲೈನ್ ಸೇರಿದಂತೆ ದೆಹಲಿ ಮೆಟ್ರೊದ (Metro) ಎಲ್ಲಾ ಮಾರ್ಗಗಳಲ್ಲಿ ಮಧ್ಯಾಹ್ನ 2: 30 ರವರೆಗೆ ಮೆಟ್ರೋ ಸೇವೆಗಳು ಲಭ್ಯವಿರುವುದಿಲ್ಲ ಎಂದು DMRC ಹೇಳಿದೆ.

ಇದನ್ನೂ ಓದಿ : "ಮೇ ತಿಂಗಳ ಅಂತ್ಯಕ್ಕೆ ಏರ್ ಇಂಡಿಯಾ ಖಾಸಗೀಕರಣ ಮುಕ್ತಾಯ"

ಕರೋನಾ ನಿಯಮಗಳ ಉಲ್ಲಂಘನೆ ಮಾಡಿದರೆ ದಂಡ : 
 ಮೆಟ್ರೋದಲ್ಲಿ ಪ್ರಯಾಣಿಕರಿಗಾಗಿ  ಕರೋನಾ ಮಾರ್ಗಸೂಚಿಯನ್ನು (Corona guidelines) ಕೂಡಾ ಬಿಡುಗಡೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಪ್ರಯಾಣಿಕರು (Passengers) ಈ ಮಾರ್ಗಸೂಚಿಗಳನ್ನು ನಿರ್ಲಕ್ಷಿಸುವಂತಿಲ್ಲ. ಒಂದು ವೇಳೆ, ಕರೋನಾ ಮಾರ್ಗಸೂಚಿಯನ್ನು ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು.  ಮಾಸ್ಕ್ (Mask) ಸರಿಯಾಗಿ ಹಾಕಿರದ ಮತ್ತು ಸಾಮಾಜಿಕ ಅತರ ಕಾಯ್ದುಕೊಳ್ಳದ ಕಾರಣ, ದೆಹಲಿ ಮೆಟ್ರೊದ ಫ್ಲೈಯಿಂಗ್ ಸ್ಕ್ವಾಡ್ ಶುಕ್ರವಾರ ಸುಮಾರು 758 ಪ್ರಯಾಣಿಕರಿಗೆ ದಂಡ ವಿಧಿಸಿದೆ.  ಕರೋನ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ 318 ಪ್ರಯಾಣಿಕರಿಗೆ ಗುರುವಾರ ಫೈನ್ ಹಾಕಲಾಗಿದೆ. 

ಇದನ್ನೂ ಓದಿ : PF ಗೆ ಸಂಬಂಧಿಸಿದ ಸಮಸ್ಯೆಗೆ ಇನ್ಮುಂದೆ WhatsApp ನಲ್ಲಿ ಸಿಗಲಿದೆ ಪರಿಹಾರ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News