ನವದೆಹಲಿ:ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಏಕೀಕೃತ ಭಾರತದ ಕನಸನ್ನು ಕಂಡಿದ್ದರು. ಆ ಕನಸು 2020 ರಲ್ಲಿ ನನಸಾಗಲಿದೆಯೇ?ಎಂಬ ಪ್ರಶ್ನೆ ಇದೀಗ ಕೇಳಿಬರಲಾರಂಭಿಸಿದೆ. ಏಕೆಂದರೆ ಪಿಒಕೆಗೆ ಸಂಬಂಧಿಸಿದಂತೆ ಭಾರತ ಅನೇಕ ಕ್ರಿಯಾ ಯೋಜನೆಗಳು ರೂಪಿಸುತ್ತಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಪಿಒಕೆ ಕುರಿತು ಗಂಭೀರ ಸಭೆಯೊಂದನ್ನು ನಡೆಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಪಾಕ್ ಆಕ್ರಮಿಸಿಕೊಂಡ ಕಾಶ್ಮೀರದಲ್ಲಿ 'ಅಚ್ಛೆ ದಿನ್' (ಒಳ್ಳೆಯ ದಿನಗಳು) ಬರಲಿವೆ ಎಂಬ ಭರವಸೆ ವ್ಯಕ್ತಪಡಿಸಲಾಗುತ್ತಿದೆ.
ಸದ್ಯ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಯಭೀತರಾಗಿದ್ದಾರೆ. ಭಾರತದ ಆಕ್ರಮಣಕಾರಿ ವರ್ತನೆ ಬಾಜವಾ ಸೇನೆಯ ಸ್ಥಿತಿಯನ್ನು ವಿಚಲಿತಗೊಳಿಸಿದೆ. ಈ ವಿಷಯ ಇಷ್ಟಕ್ಕೆ ಸೀಮಿತಗೊಂಡಿದ್ದಾರೆ ಇರ್ಮಾನ್ ಮುಖದಲ್ಲಿ ಆತಂಕದ ಛಾಯೆ ಮೂಡುತ್ತಿರಲಿಲ್ಲ. ಆದರೆ ಸದ್ಯ ಇಮ್ರಾನ್ ಕೂಡ ಭಯಭೀತರಾಗಿದ್ದಾರೆ ಏಕೆಂದರೆ ಇಮ್ರಾನ್ ಇದೀಗ ಭಾರತದ ಯೋಜನೆಯನ್ನು ನಿಧಾನವಾಗಿ ಅರ್ಥೈಸಿಕೊಳ್ಳಲು ಆರಂಭಿಸಿದ್ದಾರೆ. ಜೊತೆಗೆ ಭಾರತ ಪಿಒಕೆಗೆ ಸಂಬಂಧಿಸಿದಂತೆ ದೊಡ್ಡ ಯೋಜನೆಯನೆ ರೂಪಿಸುತ್ತಿದೆ ಎಂಬುದನ್ನು ಅರಿತುಕೊಂಡಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು ಪಾಕ್ ಕಪಿಮುಷ್ಠಿಯಿಂದ ಪಿಒಕೆ ಅನ್ನು ಮುಕ್ತವಾಗಲು ಸೂಪರ್ ಹಿಟ್ ಯೋಜನೆಯೊಂದನ್ನು ರೂಪಿಸಿದ್ದಾರೆ ಎನ್ನಲಾಗುತ್ತಿದೆ.
ಭಾರತದ ಈ ನಾಲ್ಕು ಬಲಿಷ್ಠ ಸ್ಥಂಬಗಳು ಒಂದುಗೂಡಿ ಪಾಕ್ ಕಪಿಮುಷ್ಠಿಯಿಂದ ಪಿಒಕೆ ಅನ್ನು ಮುಕ್ತಗೊಳಿಸುವ ಯೋಜನೆಯನ್ನು ರೂಪಿಸುತ್ತಿವೆ. ಇದರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈ ಮಾತನ್ನು ಹೇಳಲು ನಮ್ಮ ಬಳಿ ಏಕ್ಸ್ಕೂಸಿವ್ ಮಾಹಿತಿ ಇದೆ. ಝೀ ನ್ಯೂಸ್ಗೆ ಎನ್ಎಸ್ಎ ಅಜಿತ್ ದೋವಲ್ ಶನಿವಾರ ರಾತ್ರಿ ಗಂಭೀರ ಸಭೆಯೊಂದನ್ನು ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ದೋವಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆರ್ಮಿ ಚೀಫ್ ಜನರಲ್ ಮನೋಜ್ ಮುಕುಂದ್ ನರ್ವಾನೆ, ಐಬಿ ಮುಖ್ಯಸ್ಥ, ಉತ್ತರ ಸೇನಾ ಕಮಾಂಡ್ನ ಲೆಫ್ಟಿನೆಂಟ್ ಜನರಲ್ ವೈ.ಕೆ.ಜೋಶಿ, 15 ಕಾರ್ಪ್ಸ್ನ ಜಿಒಸಿ ಲೆಫ್ಟಿನೆಂಟ್ ಜನರಲ್ ರಾಜು, 16 ಕಾರ್ಪ್ಸ್ ಕಮಾಂಡ್ನ ಲೆಫ್ಟಿನೆಂಟ್ ಜನರಲ್ ಹರ್ಷ್ ಗುಪ್ತಾ ಮತ್ತು ಜಮ್ಮು- ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಕೂಡ ಭಾಗವಹಿಸಿದ್ದರು ಎನ್ನಲಾಗಿದೆ.
5 ಗಂಟೆಗಳ ಕಾಲ ನಡೆದ ಈ ಮ್ಯಾರಥಾನ್ ಸಭೆಯು ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಮತ್ತು ಗಡಿ ನಿಯಂತ್ರಣ ರೇಖೆಯ ಕುರಿತು ಪರಿಶೀಲನೆ ನಡೆಸಿದೆ ಎನ್ನಲಾಗಿದೆ. ಹಿಜ್ಬುಲ್ ಕಮಾಂಡರ್ ರಿಯಾಜ್ ನಾಯ್ಕುನನ್ನು ಹತ್ಯೆ ಮಾಡಿದ ಬಳಿಕ ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಗಳ ಬಗ್ಗೆ ಎನ್ಎಸ್ಎ ದೋವಲ್ ಅವರಿಗೆ ವಿಸ್ತೃತ ಮಾಹಿತಿಯನ್ನು ನೀಡಲಾಗಿದೆ. ಈ ವೇಳೆ ಕಣಿವೆಯಲ್ಲಿರುವ ಅವಿತು ಕುಳಿತಿರುವ ಭಯೋತ್ಪಾದಕರ ಪಟ್ಟಿಯನ್ನು ದೋವಲ್ಗೆ ನೀಡಲಾಗಿದೆ. ಜೈಶ್-ಎ-ಮೊಹಮ್ಮದ್ ಸಂಘಟನೆಯ ಸುಮಾರು 25-30 ಭಯೋತ್ಪಾದಕರು, ಕಾಶ್ಮೀರದಲ್ಲಿರುವ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುವ ಸಂಚು ರೂಪಿಸುತ್ತಿವೆ ಎಂದು ಅಧಿಕಾರಿಗಳು ದೋವಲ್ಗೆ ಮಾಹಿತಿ ನೀಡಿದ್ದಾರೆ.
ಈ ಮಾಹಿತಿಯನ್ನು ಹಂಚಿಕೊಂಡ ನಂತರ, ಎಲ್ಲಾ ಅಧಿಕಾರಿಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಕುರಿತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಗುಪ್ತಚರ ಇಲಾಖೆಗಳು ನೀಡಿರುವ ಮಾಹಿತಿ ಪ್ರಕಾರ ಪಾಕಿಸ್ತಾನ ತನ್ನ ಗಡಿಗೆ ಹೊಂದಿಕೊಂಡಂತೆ ಇರುವ ದುಧಾನಿಯಲ್, ಶಾರದಾ ಹಾಗೂ ಅಥಕಾಮ್ ಪ್ರಾಂತ್ಯಗಳಲ್ಲಿ ಭಯೋತ್ಪಾದಕರ ಲಾಂಚ್ ಪ್ಯಾಡ್ ಗಳನ್ನು ಸಕ್ರೀಯಗೊಳಿಸಿದೆ ಎಂದು ಅವರು ದೊವಲ್ ಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲ ಭಯೋತ್ಪಾದಕರ ಭಾರತ ನುಸುಳುವಿಕೆಗೆ ಪಾಕ್ ಸಂಚು ಕೂಡ ರೂಪಿಸುತ್ತಿದೆ ಎಂದಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರ ಪ್ರಾಂತ್ಯದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯ ಕುರಿತಾದ ಜಾತಕವನ್ನು ಡೋವಲ್ ಮೇಜಿನ ಮೇಲೆ ಇರಿಸಿದಾಗ, ಅವರ ಪ್ರತಿಕ್ರಿಯೆ ಏನಾಗಿರಲಿದೆ ಎಂಬುದನ್ನೊಮ್ಮೆ ಊಹಿಸಿ ನೋಡಿ. ನಿಸ್ಸಂಶಯವಾಗಿ, ಇದರ ನಂತರ, ಪಿಒಕೆನಲ್ಲಿ ಭಯೋತ್ಪಾದಕರ ಲಾಂಚ್ ಪ್ಯಾಡ್ ಅನ್ನು ಹೇಗೆ ನಾಶಪಡಿಸಬೇಕು ಎಂಬುದರ ಬಗ್ಗೆಯೂ ಕೂಡ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಏಕೆಂದರೆ ಹೊಸ ಪೀಳಿಗೆಯ ಭಾರತ ಭಯೋತ್ಪಾದಕರ ಒಳನುಸುಳುವಿಕೆಗೆ ಕಾಯುವುದಿಲ್ಲ ಎಂದು ಪ್ರಧಾನಿ ಮೋದಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಉಗ್ರರ ಒಳನುಸುಳುವಿಕೆಯ ಬಗ್ಗೆ ಮಾಹಿತಿ ಎಲ್ಲೇ ಇರಲಿ, ಉಗ್ರರ ಮನೆಹೊಕ್ಕು ಅವರನ್ನು ದಮನ ಮಾಡಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ. ದೇಶದ ಯಾವುದೇ ಭಾಗದಲ್ಲಿ ಬಾಂಬ್ ಸ್ಫೋಟ ನಡೆದರೂ ಕೂಡ ಮೋದಿ ಸುಮ್ಮನೆ ಬಿಡುವುದಿಲ್ಲ. ಪಾತಾಳದಲ್ಲಿ ಹೊಕ್ಕು ಅವರ ದಮನ ಮಾಡಲಾಗುವುದು ಎಂಬುದು ಭಯೋತ್ಪಾದಕರಿಗೆ ಈಗಾಗಲೇ ಮನವರಿಕೆಯಾಗಿದೆ ಎಂದು ಪ್ರಧಾನಿ ಮೋದಿ ಅವರು ತಮ್ಮ ಏಪ್ರಿಲ್ 22, 2019 ರಂದು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲ ಭಯೋತ್ಪಾದಕರ ಮುಖ್ಯಸ್ಥರನ್ನೂ ಕೂಡ ಮಟ್ಟಹಾಕಲು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ.