ಮೇಘಾಲಯದಲ್ಲಿ ಇತರರ ಸಹಾಯದಿಂದ NPP ಸರ್ಕಾರ ರಚಿಸಲಿದೆ: ಕಾನ್ರಾಡ್ ಸಂಗ್ಮಾ

ರಾಜ್ಯದ ಜನತೆ ಬದಲಾವಣೆ ಬಯಸುತ್ತಿದ್ದು, ಮೇಘಾಲಯದಲ್ಲಿ ಮುಂದಿನ ಸರ್ಕಾರವನ್ನು ತಾವೇ ರಚಿಸುವ ಬಗ್ಗೆ ರಾಷ್ಟ್ರೀಯ ಪೀಪಲ್ಸ್ ಪಾರ್ಟಿ (ಎನ್ಪಿಪಿ) ವಿಶ್ವಾಸ ವ್ಯಕ್ತಪಡಿಸಿದೆ.

Last Updated : Mar 3, 2018, 03:49 PM IST
ಮೇಘಾಲಯದಲ್ಲಿ ಇತರರ ಸಹಾಯದಿಂದ NPP ಸರ್ಕಾರ ರಚಿಸಲಿದೆ: ಕಾನ್ರಾಡ್ ಸಂಗ್ಮಾ title=

ಶಿಲ್ಲಾಂಗ್: ರಾಜ್ಯದ ಜನತೆ ಬದಲಾವಣೆ ಬಯಸುತ್ತಿದ್ದು, ಮೇಘಾಲಯದಲ್ಲಿ ಮುಂದಿನ ಸರ್ಕಾರವನ್ನು ತಾವೇ ರಚಿಸುವ ಬಗ್ಗೆ ರಾಷ್ಟ್ರೀಯ ಪೀಪಲ್ಸ್ ಪಾರ್ಟಿ (ಎನ್ಪಿಪಿ) ವಿಶ್ವಾಸ ವ್ಯಕ್ತಪಡಿಸಿದೆ.

ಫೆಬ್ರವರಿ 27ರಂದು ಮೇಘಾಲಯ ವಿಧಾನಸಭೆಯ 59 ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆ ಫಲಿತಾಂಶ ಇಂದು ಹೊರಬಿದ್ದಿದ್ದು, ಎನ್ಪಿಪಿಯ ಅಧ್ಯಕ್ಷ ಕಾನ್ರಾಡ್ ಸಂಗ್ಮಾ ಅವರ ಪಕ್ಷವು ಇತರ ಸಮಾನ ಮನಸ್ಸಿನ ಪಕ್ಷಗಳ ಸಹಾಯದಿಂದ ಮುಂದಿನ ಸರ್ಕಾರವನ್ನು ರಚಿಸಲು ಸಮರ್ಥವಾಗಿದೆ ಎಂದು ಹೇಳಿದ್ದಾರೆ.

"ನಾವು ಸರ್ಕಾರವನ್ನು ರೂಪಿಸಲು ಸಾಧ್ಯವಿದೆ ಎಂಬ ವಿಶ್ವಾಸವಿದೆ. ಜನರು ಭ್ರಷ್ಟ ಕಾಂಗ್ರೆಸ್ ಸರ್ಕಾರದಿಂದ ಬೇಸತ್ತಿದ್ದು, ಬದಲಾವಣೆ ಬಯಸುತ್ತಿದ್ದಾರೆ" ಎಂದು ಅವರು ಪಿಟಿಐ ಗೆ ತಿಳಿಸಿದ್ದಾರೆ. 

ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಹಿರಿಯ ಮುಖಂಡ ದಿವಂಗತ ಪಿ.ಎ ಸಂಗ್ಮಾ ಅವರ ಪುತ್ರ ಸಂಗ್ಮಾ, ಅಂತಿಮ ಫಲಿತಾಂಶಗಳು ಇನ್ನೂ ಪ್ರಕಟವಾಗಬೇಕಿದೆ. ಆದರೂ ಇತರ ಪಕ್ಷಗಳ ಸಹಾಯದಿಂದ ಎನ್ಪಿಪಿ ಸರ್ಕಾರ ರಚಿಸುವ ಸ್ಥಾನದಲ್ಲಿದೆ ಎಂದು ಹೇಳಿದರು.

ಸಧ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ, ಕಾಂಗ್ರೆಸ್ 9 ಸ್ಥಾನಗಳನ್ನು ಗೆದ್ದು 11 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎನ್ಪಿಪಿ 3 ಸ್ಥಾನಗಳನ್ನು ಗೆದ್ದು 16 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 2 ಸ್ಥಾನಗಳಲ್ಲಿ ಮತ್ತು ಇತರ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಗಳು 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, 12  ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. 

ಈಗಾಗಲೇ ಕಾಂಗ್ರೆಸ್ ಕೂಡ ಪಕ್ಷದ ಹಿರಿಯ ಮುಖಂಡರನ್ನು ಶಿಲ್ಲಾಂಗ್ ಗೆ ಕಳುಹಿಸಿದ್ದು, ಸರ್ಕಾರ ರಚನೆಯ ಸಾಧ್ಯತೆಗಳ ಕುರಿತು ಮಾತುಕತೆ ಆರಂಭಿಸಿದ್ದಾರೆ ಎನ್ನಲಾಗಿದೆ. 

Trending News