ಈಗ ಪಾಕಿಸ್ತಾನದೊಂದಿಗೆ ಪಿಒಕೆ ಬಗ್ಗೆ ಮಾತ್ರ ಮಾತುಕತೆ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

'ನಾವು ಯಾರ ಮೇಲೂ ದಾಳಿ ಮಾಡುವುದಿಲ್ಲ, ಆದರೆ ನಮ್ಮ ಮೇಲೆ ಯಾರು ಹಲ್ಲೆ ಮಾಡಿದರೂ, ನಾವು ಅವರಿಗೆ ಸೂಕ್ತವಾದ ಉತ್ತರವನ್ನು ನೀಡುತ್ತೇವೆ. ನಾವು ಯುದ್ಧೋಚಿತರಲ್ಲ- ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು  

Last Updated : Aug 28, 2019, 12:25 PM IST
ಈಗ ಪಾಕಿಸ್ತಾನದೊಂದಿಗೆ ಪಿಒಕೆ ಬಗ್ಗೆ ಮಾತ್ರ ಮಾತುಕತೆ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು title=
Photo Courtesy: @VPSecretariat

ವಿಶಾಖಪಟ್ಟಣಂ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದೊಂದಿಗಿನ ಯಾವುದೇ ಮಾತುಕತೆಗೆ ಭಾರತ ಮತ್ತೊಮ್ಮೆ ಸೂಕ್ತ ಉತ್ತರ ನೀಡಿದೆ. ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಯುವುದಿಲ್ಲ. ಒಂದುವೇಳೆ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ಇದ್ದರೆ ಅದು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಬಗ್ಗೆ ಮಾತ್ರ ಇರುತ್ತದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಇಂದು ಹೇಳಿದ್ದಾರೆ. 

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದ ನಾವಲ್ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಯೋಗಾಲಯದ (ಎನ್‌ಎಸ್‌ಟಿಎಲ್) ಸುವರ್ಣ ಮಹೋತ್ಸವವನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, 'ನಾವು ಯಾರ ಮೇಲೂ ದಾಳಿ ಮಾಡುವುದಿಲ್ಲ, ಆದರೆ ನಮ್ಮ ಮೇಲೆ ಯಾರು ದಾಳಿ ಮಾಡಿದರೂ ನಾವು ಸೂಕ್ತ ಉತ್ತರ ನೀಡುತ್ತೇವೆ. ನಾವು ಯುದ್ಧೋಚಿತರಲ್ಲ. ನಾವು ಯಾರ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಅಥವಾ ಇತರರು ನಮ್ಮ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಾವು ಬಯಸುವುದಿಲ್ಲ' ಎಂದು ತಿಳಿಸಿದ್ದಾರೆ.

'ಕಾಶ್ಮೀರ ನಮ್ಮ ಆಂತರಿಕ ಸಮಸ್ಯೆ, ಈಗ ಪಿಒಕೆ ಬಗೆಗೆ ಮಾತ್ರ ಪಾಕಿಸ್ತಾನದೊಂದಿಗೆ ಚರ್ಚಿಸಲಾಗುವುದು' ಎಂದು ಉಪರಾಷ್ಟ್ರಪತಿ ಸ್ಪಷ್ಟಪಡಿಸಿದ್ದಾರೆ.

ನಾವಲ್ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಯೋಗಾಲಯದ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯ ಸಂದರ್ಭದಲ್ಲಿ ಉಪರಾಷ್ಟ್ರಪತಿ ಅಂಚೆ ಕವರ್ ಬಿಡುಗಡೆ ಮಾಡಿದರು.

ಇದಕ್ಕೂ ಮುನ್ನ ಟ್ವೀಟ್ ಮಾಡಿರುವ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, 'ಇಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನ ಡಿಆರ್‌ಡಿಒದಲ್ಲಿರುವ ನಾವಲ್ ವಿಜ್ಞಾನ ಮತ್ತು ತಾಂತ್ರಿಕ ಪ್ರಯೋಗಾಲಯದಲ್ಲಿ (ಎನ್‌ಎಸ್‌ಟಿಎಲ್) ನೌಕಾ ಶಸ್ತ್ರಾಸ್ತ್ರಗಳು ಮತ್ತು ವ್ಯವಸ್ಥೆಗಳನ್ನು ಪ್ರದರ್ಶಿಸುವ ಪ್ರದರ್ಶನದಲ್ಲಿ ಎನ್‌ಎಸ್‌ಟಿಎಲ್‌ನ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಭಾಗವಹಿಸಲು ನಾನು ಇಲ್ಲಿದ್ದೇನೆ' ಎಂದು ತಿಳಿಸಿದ್ದಾರೆ.

Trending News